Advertisement
ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಅಧಿಕಾರದ ಕೊನೆ ಹಂತದಲ್ಲಿ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಲಾಯಿತು. ಆದರೆ, ಅನುಷ್ಠಾನಕ್ಕೆ ಬಂದಿದ್ದು ಕೆಲವು ಮಾತ್ರ. ಇನ್ನುಳಿದ ಕಾರ್ಯಕ್ರಮಗಳು ಕೇವಲ ಸರ್ಕಾರದ ಕಡತಗಳಿಗೆ ಮಾತ್ರ ಸೀಮಿತವಾದವು. ಹಾಗಾಗಿ ಹೊಸ ಮೈತ್ರಿ ಸರ್ಕಾರ ಹಳೆ ಭರವಸೆಗಳ ಜತೆಗೆ ಅಭಿವೃದ್ಧಿಯ ಹೊಸ ಯೋಜನೆಗಳನ್ನು ಜಾರಿಗೆ ತರಲಿ ಎಂಬುದು ಜನರ ನಿರೀಕ್ಷೆಯಾಗಿದೆ. ಮುಖ್ಯವಾಗಿ ಮೂಲಭೂತ ಸೌಕರ್ಯ, ಶೈಕ್ಷಣಿಕ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ಸಿಗಬೇಕಿದೆ.
ಸೇರಿದಂತೆ ವಿವಿಧೆಡೆ ಶಾಶ್ವತ ಕುಡಿಯುವ ನೀರಿಗೆ ಅಗತ್ಯ ಕ್ರಮ ವಹಿಸಬೇಕಿದೆ. ಮುಖ್ಯವಾಗಿ ನೀರಾವರಿ ಯೋಜನೆಗಳಿಗೆ ಆದ್ಯತೆ ಸಿಗಬೇಕಿದೆ. ಗೋದಾವರಿ ಬೇಸ್‌ನಿಂದ ಬೇಡಿಕೆಯಂತೆ ನೀರಿನ ಸದ್ಬಳಕೆಗೆ ಅಗತ್ಯ ಬ್ಯಾರೇಜ್‌ಗಳನ್ನು ನಿರ್ಮಿಸುವುದು ಮತ್ತು ಕೆರೆಗಳನ್ನು ತುಂಬಿಸಿ ನೀರಾವರಿ ಪ್ರದೇಶ ಹೆಚ್ಚಿಸಬೇಕಿದೆ. ಅಪೂರ್ಣ ಸ್ಥಿತಿಯಲ್ಲಿರುವ ಕಾರಂಜಾ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು ಮತ್ತು ಕಾಲುವೆಗಳ ಆಧುನಿಕರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.
Related Articles
Advertisement
ಆಂಧ್ರ, ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿದ್ದರೂ ಜಿಲ್ಲೆಯಲ್ಲಿ ಕೈಗಾರಿಕೆಗಳೇ ಇಲ್ಲ. ಹಾಗಾಗಿ ಇಲ್ಲಿನ ಯುವ ಜನಾಂಗ ಉದ್ಯೋಗಕ್ಕಾಗಿ ಮಹಾನಗರಗಳತ್ತ ವಲಸೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ. ಸ್ಮಾರಕಗಳು, ಕೋಟೆ- ಕೊತ್ತಲಗಳನ್ನು ಹೊಂದಿರುವ ಜಿಲ್ಲೆ ಪ್ರವಾಸೋದ್ಯಮ ಬೆಳವಣಿಗೆಯಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಆದರೆ, ಇದಕ್ಕೆ ಪೂರಕವಾಗಿ ಬೀದರನಲ್ಲಿ ಗೈಡ್‌ಗಳ ವ್ಯವಸ್ಥೆ ಇಲ್ಲ.ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಒದಗಿಸಿ, ಅಧಿಕಾರಿಗಳ ನೇಮಕ ಮಾಡಬೇಕು. ಟರ್ಮಿನಲ್ ಇದ್ದರೂ ವಿಮಾನಯಾನ ಸೌಲಭ್ಯದಿಂದ ಬೀದರ ವಂಚಿತವಾಗಿದೆ. ಉಡಾನ್ ಯೋಜನೆಯಡಿ ಸೇರ್ಪಡೆಯಾದರೂ ವಿಮಾನ ಹಾರಾಟ ಶುರುವಾಗಿಲ್ಲ. ಇದಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಈ ಸರ್ಕಾರವಾದರೂ ಬಗೆಹರಿಸಲಿ. ಐದು ತಾಲೂಕುಗಳಲ್ಲಿ ಮಿನಿ ವಿಧಾನಸೌಧಗಳಿದ್ದು, ಜಿಲ್ಲಾ ಕೇಂದ್ರ ಬೀದರನಲ್ಲಿ ಈವರೆಗೆ ಜಿಲ್ಲಾ ಕಚೇರಿಗಳ ಸಂಕೀರ್ಣ ಇಲ್ಲ. ಜಿಲ್ಲಾ ಧಿಕಾರಿ ಕಚೇರಿಯನ್ನೇ ಮಿನಿ ವಿಧಾನಸೌಧವಾಗಿ ಪುನರ್ ನಿರ್ಮಾಣಕ್ಕೆ ಈಗ ನಿರ್ಧರಿಸಿ ಹಲವು ದಿನಗಳು ಕಳೆದರೂ ಇನ್ನೂ ವಿನ್ಯಾಸವೇ ಸಿದ್ಧಗೊಂಡಿಲ್ಲ. ಹೊಸ ಸರ್ಕಾರ ಇತ್ತ
ಗಮನ ಹರಿಸಬೇಕಿದೆ. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಹಿಂದಿನ ಸರ್ಕಾರ 600 ಕೋಟಿ ರೂ. ಘೋಷಿಸಿ, ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ಕೊಡಬೇಕಿದೆ. ಜತೆಗೆ ಬಸವಾದಿ ಶರಣರ ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ರಚಿಸಿರುವ ಬಿಕೆಡಿಬಿಗೆ ಪೂರಕ ಅನುದಾನ ಸಿಕ್ಕಿಲ್ಲವಾದ್ದರಿಂದ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಅಗತ್ಯ ಹಣ ಬಿಡುಗಡೆ ಮಾಡಿ ಕೆಲಸ ಚುರುಕುಗೊಳಿಸಬೇಕು. ಮತ್ತು ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಬೇಕು. ಶಶಿಕಾಂತ ಬಂಬುಳಗೆ