Advertisement
ವಾರ್ಡ್ ಬಹುತೇಕ ನಗರ ಪ್ರದೇಶವನ್ನು ಒಳಗೊಂಡಿರುವುದರಿಂದ ಇಲ್ಲಿನ ಹೆಚ್ಚಿನ ರಸ್ತೆಗಳು ಅಭಿವೃದ್ದಿಯಾಗಿವೆ. ಆದರೆ ಹಳೆಯ ಒಳಚರಂಡಿ ವ್ಯವಸ್ಥೆ ಈ ವಾರ್ಡ್‌ನಲ್ಲಿ ಒಂದಷ್ಟು ಸಮಸ್ಯೆ ನಿರ್ಮಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಂದೂರ್‌ನಲ್ಲಿ ಸೈಂಟ್ ಆಗ್ನೇಸ್ ಕಾಲೇಜು ಬಳಿ ಬಸ್‌ನಿಲ್ದಾಣ ನಿರ್ಮಾಣವಾಗಿದೆ. ಕದ್ರಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ವ್ಯಾಪಾರಸ್ಥರಿಗೆ ತಾತ್ಕಾಲಿಕ ಅಂಗಡಿ ನಿರ್ಮಾಣ ಮಾಡಿ ಸ್ಥಳಾಂತರಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಮಹಾನಗರ ಪಾಲಿಕೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4 ಕೋಟಿ ರೂ. ಬಿಡುಗಡೆಯಾಗಿದೆ. ವಾರ್ಡ್‌ನಲ್ಲಿ ಹೆಚ್ಚಿನ ರಸ್ತೆಗಳು, ಫುಟ್‌ಪಾತ್‌ಗಳು ಉನ್ನತೀಕರಣವಾಗಿವೆ. ಆದರೆ ಮಳೆಗಾಲದಲ್ಲಿ ಒಳಚರಂಡಿಗಳು ತುಂಬಿ ಮಲಿನ ನೀರು ರಸ್ತೆಯಲ್ಲೇ ಹರಿಯುವುದರಿಂದ ಸಮಸ್ಯೆ ಆಗುತ್ತಿದೆ. ಪಾರ್ಕಿಂಗ್ ಸಮಸ್ಯೆಯಿಂದ ಕೆಲವು ಬಾರಿ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಮಸ್ಯೆಉಂಟಾಗುತ್ತದೆ. ಈ ಬಾರಿಯೂ ಈ ವಾರ್ಡ್ ಮಹಿಳಾ ಸಾಮಾನ್ಯ ವರ್ಗ ಮೀಸಲಾತಿ ಹೊಂದಿದೆ.
ಪ್ರತಿಷ್ಠಿತ ರೆಸಿಡೆನ್ಸಿಯಲ್ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್ ನಂ. 34 ಶಿವಭಾಗ್ ಕಾಂಗ್ರೆಸ್ ಪಾರಮ್ಯವನ್ನು ಮೆರೆಯುತ್ತಾ ಬಂದಿರುವ ಕ್ಷೇತ್ರ. ಕಳೆದ ಅವಧಿಯಲ್ಲಿ ಈ ವಾರ್ಡ್ ಸಾಮಾನ್ಯ ಮಹಿಳಾ ಮೀಸಲಾತಿ ಹೊಂದಿತ್ತು. ಈ ಬಾರಿಯೂ ಅದೇ ಮೀಸಲಾತಿ ಮುಂದುವರಿದಿದೆ. ಕಳೆದ ಅವಧಿಯ ಕಾರ್ಪೊರೇಟರ್ ಸಬಿತಾ ಮಿಸ್ಕಿತ್‌ಗಿಂತ ಮೊದಲು ಕಾಂಗ್ರೆಸ್‌ನ ಗ್ರೆಟ್ಟಾ ರೆಬೆಲ್ಲೊ ಈ ಕ್ಷೇತ್ರದ ಕಾರ್ಪೊರೇಟರ್ ಆಗಿದ್ದರು. ಕಳೆದ ಬಾರಿ ಕಾಂಗ್ರೆಸ್ ಇಲ್ಲಿ ಸಮೀಪದ ಸ್ಪರ್ಧಿ ಬಿಜೆಪಿಗಿಂತ 620 ಮತಗಳ ಅಂತರಿದಂದ ಜಯ ಸಾಧಿಸಿತ್ತು.
Related Articles
ಭೌಗೋಳಿಕ ವ್ಯಾಪ್ತಿ: ಕದ್ರಿ ಮಾರುಕಟ್ಟೆ ಪ್ರದೇಶದಿಂದ ಆರಂಭಗೊಂಡು, ಲೋಬೋ ಲೇನ್‌ನ ಒಂದು ಪಾರ್ಶ್ವ, ಬೆಂದೂರು ಸೈಂಟ್‌ಆಗ್ನೇಸ್ ಕಾಲೇಜು, ಶಿವಭಾಗ್, ಮರ್ಕೆರಾ ಹಿಲ್, ಇಎಸ್‌ಐ ಆಸ್ಪತ್ರೆ ಪ್ರದೇಶ, ಲೋವರ್ ಬೆಂದೂರು ಭಾಗ, ತಾರತೋಟದ ಪ್ರದೇಶದ ಒಂದು ಭಾಗ, ಬಿಕರ್ನಕಟ್ಟೆ ನಾಯರ್ ಲೇನ್ ಪ್ರದೇಶ, ಬಾಲಯೇಸು ಪುಣ್ಯ ಕ್ಷೇತ್ರ ಪ್ರದೇಶ ಮುಂತಾದ ಪ್ರದೇಶಗಳನ್ನು ಶಿವಭಾಗ್ ವಾರ್ಡ್ ಒಳಗೊಂಡಿದೆ.
Advertisement
ಒಟ್ಟು ಮತದಾರರು 6978ನಿಕಟಪೂರ್ವ ಕಾರ್ಪೊರೇಟರ್-ಸಬಿತಾ ಮಿಸ್ಕಿತ್ 2013ರ ಚುನಾವಣೆ ಮತ ವಿವರ
ಕಾಂಗ್ರೆಸ್: ಸಬಿತಾ ಮಿಸ್ಕಿತ್: 1431
ಬಿಜೆಪಿ: ಸಂಧ್ಯಾ ವೆಂಕಟೇಶ: 811
ಜೆಡಿ ಎ ಸ್: ಜ್ಯುಡಿತ್ ಡಿ’ಸೋಜಾ: 223
ಪಕ್ಷೇತರ: ಗೀತಾ ಬಿ.ಶೆಟ್ಟಿ: 37 - ಕೇಶವ ಕುಂದರ್