Advertisement

ಜೋಗದ ಹಳೆ ಬಾಂಬೆ ಬಂಗ್ಲೋ ನೀರು ಪಾಲಾಗುವ ಸಂಭವ

01:22 AM Aug 09, 2019 | Sriram |

ಸಾಗರ: ಜೋಗ ಜಲಪಾತದ ರಾಜಾ-ರಾಣಿ-ರೋರರ್‌- ರಾಕೆಟ್‌ ಕವಲುಗಳ ಪಕ್ಕದಲ್ಲಿರುವ ಪುರಾತನವಾದ ಬಾಂಬೆ ಬಂಗ್ಲೋ ಎದುರಿನ ಗುಡ್ಡ ಕುಸಿಯುತ್ತಿದ್ದು,ಇದೇ ರೀತಿ ಮಳೆ ಮುಂದುವರಿದರೆ ಸಂಪೂರ್ಣಕಟ್ಟಡ ಜೋಗ ಜಲಪಾತದ ತಳ ಸೇರುವ ಪರಿಸ್ಥಿತಿ ಗುರುವಾರ ನಿರ್ಮಾಣವಾಗಿದೆ.

Advertisement

ಪ್ರಸ್ತುತ ಬ್ರಿಟಿಷರ ಕಾಲದ ಬಾಂಬೆ ಬಂಗ್ಲೆಯಲ್ಲಿ ಪ್ರವಾಸಿಗರಿಗೆ, ವಿಐಪಿಗಳಿಗೆ ವಸತಿ ಅವಕಾಶವನ್ನು ಕೊಡುತ್ತಿಲ್ಲ.ಒಂದು ಕಾಲದಲ್ಲಿ ಈ ಕಟ್ಟಡದಿಂದ ಜಲಪಾತದ ನಾಲ್ಕು ಕವಲುಗಳುಜಲಪಾತದ ತಳದತ್ತ ಬೀಳುವುದನ್ನು ನೋಡುವುದೇ ಒಂದು ಆಕರ್ಷಣೀಯ ಅಂಶವಾಗಿತ್ತು. ಈಗ ಈ ಕಟ್ಟಡದ ನಿರ್ವಹಣೆಗಾಗಿ ಓರ್ವ ಮೇಟಿಯನ್ನು ಮಾತ್ರ ಇರಿಸಲಾಗಿದೆ ಎಂಬ ಮಾಹಿತಿಯಿದೆ.

ಕಳೆದ ಐದು ದಿನಗಳ ಮಳೆಯ ರಭಸಕ್ಕೆ ಬಾಂಬೆ ಬಂಗ್ಲೆ ಇರುವ ಗುಡ್ಡ ಕುಸಿಯಲಾರಂಭಿಸಿದೆ.ಇದರಿಂದ ಜೋಗ ಜಲಪಾತದ ಎಡ ಪಕ್ಕದಲ್ಲಿ ಕೃತಕವಾದ ಕೆಂಪು ಮಣ್ಣಿನ ಒಂದು ಧಾರೆ ಪ್ರವಾಸಿಗರಿಗೆ ಕಾಣಲಾರಂಭಿಸಿದೆ.ಗುಡ್ಡದಿಂದ ಹರಿದು ಬರುತ್ತಿರುವ ನೀರು ಬಾಂಬೆ ಬಂಗ್ಲೆಯ ತಳದ ಮಣ್ಣನ್ನು ಕೊರೆದು ಜಲಪಾತವಾಗಿ ಧುಮುಕುತ್ತಿದೆ. ಇದೇ ರೀತಿ ಮುಂದುವರಿದರೆ ಇನ್ನೆರಡು ದಿನಗಳಲ್ಲಿಯೇ ಸಂಪೂರ್ಣ ಬಂಗ್ಲೆ ತಳ ಸೇರಲಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next