Advertisement

ವಿರೋಧದ ಮಧ್ಯೆಯೂ ಪೈಪ್‌ ಹಾಕಿದ ಅಧಿಕಾರಿಗಳು; ‌ಯುವಶಕ್ತಿ ಸಂಘದ ಹೋರಾಟಕ್ಕೆ ಜಯ

05:09 PM Apr 01, 2023 | Team Udayavani |

ದೋಟಿಹಾಳ: ಹೈದ್ರಾಬಾದ್‌-ಕರ್ನಾಟಕ ಯುವಶಕ್ತಿ ಸಂಘದವರು ಗ್ರಾಮದ ಮೂರು ಪ್ರಮುಖ ಬೇಡಿಕೆ ಈಡೇರಿಗಾಗಿ ಒತ್ತಾಯಿಸಿ ಧರಣಿ ಸತ್ಯಾಗ್ರಹ ಮಾಡಿದರು. ಈ ವೇಳೆ ತಾತ್ಕಾಲಿಕವಾಗಿ ರಸ್ತೆ ಮಧ್ಯ ಪೈಪ್‌ ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೋರಾಟಗಾರರಿಗೆ ಲಿಖೀತ ಭರವಸೆ ನೀಡಿದ ಕಾರಣ ಇಂದು ರಸ್ತೆಯ ಮಧ್ಯೆ ಪೈಪ್‌ ಹಾಕಿ ಸಂಚಾರಕ್ಕೆ ಅನುಕೂಲ ಮಾಡಿದರು.

Advertisement

ಕಳೆದ 5-6 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿ ಕೆಲಸ ಇಂದು ಒಂದು ಹಂತಕ್ಕೆ ಬಂದಿದೆ. ಆದರೆ ರಸ್ತೆ ಅಗಲೀಕರಣದ ನಿಮಯ ಪಾಲಿಸದೇ ಮತ್ತು ದೋಟಿಹಾಳ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಯಾವುದೇ ಕಾರಣಕ್ಕೂ ಪೈಪ್‌ ಹಾಕಲು ನಮ್ಮ ಒಪ್ಪಿಗೆ ಇಲ್ಲ. ರಸ್ತೆ ಅಗಲೀಕರಣ ಮಾಡಿ ಎರಡು ಕಡೆ ಚರಂಡಿ ನಿರ್ಮಿಸಿ ಎಂದು ಜಿಲ್ಲಾಧಿಕಾರಿ, ಸಿಇಒ, ಲೋಕೋಪಯೋಗಿ ಇಲಾಖೆಗೆ 2018ರಲ್ಲಿ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಆಗಿರಲಿಲ್ಲ.

ಕಾಮಗಾರಿ ಸ್ಥಳಕ್ಕೆ ದೋಟಿಹಾಳ ಗ್ರಾಮದ ಮಹಿಳೆಯರು ಆಗಮಿಸಿ ಯಾವುದೇ ಕಾರಣಕ್ಕೂ ರಸ್ತೆ ಮಧ್ಯೆ ಪೈಪ್‌ ಹಾಕಲು ಬಿಡುವುದಿಲ್ಲ. ರಸ್ತೆ ಪಕ್ಕದಲ್ಲಿ ಚರಂಡಿ ಮಾಡಿ. ರಸ್ತೆ ಮಧ್ಯೆ ಪೈಪ್‌ ಹಾಕಿದರೆ ತೊಂದರೆಯಾಗುತ್ತದೆ. ಇದರ ಬಗ್ಗೆ ಈಗಾಗಲೇ ತಹಶೀಲ್ದಾರ್‌ ಅವರಿಗೆ ಮನವಿ ನೀಡಲಾಗಿದೆ. ಈ ವೇಳೆ ಪರಿಸ್ಥಿತಿ ಕೈಮೀರುವ ಲಕ್ಷಣಗಳು ತಿಳಿದ ಪಿಎಸ್‌ಐ ಮೌನೇಶ ರಾಠೊಡ್‌ ಅವರು ಇದು ಸರಕಾರದ ಕೆಲಸವಾಗಿದೆ.

ಸರಕಾರದ ಕೆಲಸಕ್ಕೆ ತೊಂದರೆ ಮಾಡಿದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಹಿಳೆಯರು ಜೆಸಿಬಿ ಹತ್ತಿರ ಹೋಗಿ ನಿಂತರು. ಪರಿಸ್ಥಿತಿ ಕೈಮೀರುವ ಲಕ್ಷಣ ತಿಳಿದು ಲಾಠಿ ಬೀಸಿ ಕೆಲವರನ್ನು ವಶಕ್ಕೆ ಪಡೆದುಕೊಂಡರು.

ಮಹಿಳೆಯರ ಆರೋಪ: ರಸ್ತೆ ಕಾಮಗಾರಿ ನಿಯಮ ಉಲ್ಲಂಘಿಸಿ ಹೋರಾಟಗಾರರ ಒತ್ತಡಕ್ಕೆ ಮಣಿದು ರಸ್ತೆ ಮಧ್ಯೆ ಪೈಪ್‌ ಹಾಕುತ್ತಿರುವುದನ್ನು ಪಶ್ನಿಸಿದರೆ ಪೊಲೀಸರು ಗ್ರಾಮಸ್ಥರನ್ನೇ ವಶಕ್ಕೆ ಪಡೆಯುತ್ತಿದ್ದಾರೆ. ಸರಕಾರದ ನಿಯಮದ ಪ್ರಕಾರ ಕೆಲಸ ಮಾಡುವುದು ಬಿಟ್ಟು ರಸ್ತೆ ಮಧ್ಯೆ ಪೈಪ್‌ ಹಾಕುವುದು ಯಾವ ನ್ಯಾಯ ? ಎಂದು ಅಧಿಕಾರಿಗಳಿಗೆ ಮಹಿಳೆಯರು ಪ್ರಶ್ನೆ ಮಾಡಿದರು.

Advertisement

ಇದಕ್ಕೆ ಬೆಲೆ ಕೊಡದ ಅಧಿಕಾರಿಗಳು ರಸ್ತೆಯ ಮಧ್ಯೆ ಪೈಪ್‌ ಹಾಕಿ ಹೊರಟು ಹೋದ ಅಧಿಕಾರಿಗಳು. ಇದರ ಬಗ್ಗೆ ವಿಚಾರಿಸಲು ತಹಶೀಲ್ದಾರ್‌ ರಾಘವೇಂದ್ರರಾವ್‌ ಕುಲಕರ್ಣಿ ಅವರನ್ನು ಸಂಪರ್ಕಿಸಿದರು ಅವರು ಕರೆ ಸ್ವೀಕರಿಸುತ್ತಿಲ್ಲ.ಸರಕಾರದ ನಿಯಮದ ಪ್ರಕಾರ ರಸ್ತೆ ಅಗಲೀಕರಣ ಮಾಡಿ. ಎರಡು ಕಡೇ ಚರಂಡಿ ನಿರ್ಮಿಸಬೇಕಾದ ಅಧಿಕಾರಿಗಳು ಹೋರಾಟಗಾರರ ಒತ್ತಡಕ್ಕೆ ಮಣಿದು ರಸ್ತೆ ಮಧ್ಯೆ ಪೈಪ್‌ ಹಾಕಿದ್ದಾರೆ. ನಮ್ಮ ಸಮಸ್ಯೆ ಕೇಳುವರು ಯಾರು ಎಂದು ದೋಟಿಹಾಳ ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡರು.

ತಹಶೀಲ್ದಾರ್‌ ಅವರ ಆದೇಶದ ಮೇರೆಗೆ ಕೆಲಸ ನೀಡುವ ಸ್ಥಳಕ್ಕೆ ಬಂದೋಬಸ್ತ್ ನೀಡಿದ್ದೇವೆ. ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸಿದ ಕಾರಣ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ.
ಮೌನೇಶ ರಾಠೊಡ, ಪಿಎಸ್‌ಐ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next