Advertisement

ಸರ್ಕಾರದ ವಿರುದ್ಧ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ ಅಧಿಕಾರಿ ಎತ್ತಂಗಡಿ

03:10 PM Sep 20, 2022 | Team Udayavani |

ಬೆಂಗಳೂರು: ಸರ್ಕಾರದ ಅಧಿಕಾರಿಯಾಗಿ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಸರ್ಕಾ ರದ ವಿರುದ್ಧವೇ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ ಬೆನ್ನಲ್ಲೇ ಪ್ರಾದೇಶಿಕ ಆಂಗ್ಲ ಕೇಂದ್ರದ ನಿರ್ದೇಶಕರನ್ನು ಶಿಕ್ಷಣ ಇಲಾಖೆ ನಿರ್ದೇಶಕ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ.

Advertisement

ಇದನ್ನೂ ಓದಿ:ಜಿಮ್ ಗಳಲ್ಲಿ ನೀಡುವ ಪ್ರೊಟೀನ್ ಪೌಡರ್ ಬ್ಯಾನ್ ಮಾಡಬೇಕು: ಸದನದಲ್ಲಿ ಭಾರಿ ಚರ್ಚೆ

ಪ್ರಾದೇಶಿಕ ಆಂಗ್ಲ ಕೇಂದ್ರದ ನಿರ್ದೇಶಕರಾಗಿದ್ದ ಡಾ. ಬಿ.ಕೆ.ಎಸ್‌. ವರ್ಧನ್‌ ಅವರು ಇತ್ತೀಚೆಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ “ನರೇಂದ್ರ ಮೋದಿಜೀ ಅವರಿಗೆ ದೇಶದ ಅಸ್ಪ್ರಶ್ಯ ಜನ ಸಮುದಾಯಗಳ ಪರವಾಗಿ ಜನ್ಮ ದಿನದ ಶುಭಾಶಯಗಳು. ಇನ್ನೊಂದು ಸಲ ನೀವು ಪ್ರಧಾನ ಮಂತ್ರಿಯಾದರೆ, ಕಾಶಿ ವಿಶ್ವನಾಥನ ಆಣೆಯಾಗಿ ಸಾಮಾಜಿಕ ನ್ಯಾಯ ಪಾಲನೆ ಮಾಡಲು ಪ್ರಾಮಾಣಿಕ ಮನಸು ಮಾಡಿ, ಕನಿಷ್ಠ ಅಂತಹ ಶಿಕ್ಷಣ ಸಚಿವರನ್ನಾಗಿ ಮಾಡಿ.

ನಾನೂ ವಿವರವಾದ ಮನವಿ ಪತ್ರ ಬರೆಯುವೆ’ ಎಂದು ಸ್ಟೇಟಸ್‌ ಹಾಕಿದ್ದರು. ಸರ್ಕಾರದ ಅಧಿಕಾರಿಯೊಬ್ಬರು ಸರ್ಕಾರದ ವಿರುದ್ಧವೇ ಮಾತನಾಡಿರುವುದರಿಂದ ಹಾಗೂ ಈ ಹಿಂದೆಯೂ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ.ಸುಮಂಗಲಾ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next