Advertisement

ನಿವೃತ್ತನ ಮೇಲೆ ಹಲ್ಲೆಗೈದ ಅಧಿಕಾರಿ ಜೈಲಿಗೆ

03:37 PM Aug 17, 2022 | Team Udayavani |

ಕಲಬುರಗಿ: ನಿವೃತ್ತ ನೌಕರಗೆ ಮಾರಣಾಂತಿಕ ಹಲ್ಲೆಗೈದ ತೋಟಗಾರಿಕಾಧಿಕಾರಿಗೆ ಇಲ್ಲಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

2020ರ ಫೆಬ್ರುವರಿ 13ರಂದು ಕಲಬುರಗಿ ನಗರದ ಬಾಳೆ ಲೇ ಔಟ್‌ದಲ್ಲಿ ವಿಠ್ಠಲ ಪರಮೇಶ್ವರ ಖೇಡ (65) ಎನ್ನುವ ನಿವೃತ್ತ ನೌಕರರಿಗೆ ತೋಟಗಾರಿಕಾಧಿಕಾರಿ ರಾಜಕುಮಾರ ಗೋವಿನ್‌ ಎನ್ನುವಾತ ನಮ್ಮ ಮನೆ ಮೇಲ್ಚಾವಣಿಗೆ ಹತ್ತಿಕೊಂಡು ಸ್ಟೇರ್‌ ಕೇಸ್‌ ಕಟ್ಟಿಸುತ್ತೀಯಾ ಎಂದು ಬೆದರಿಸಿ, ಸ್ಟೇರ್‌ ಕೇಸ್‌ ಕಟ್ಟಲು ಗೋಡೆ ಏರಿದ್ದಿಯಾ? ಎಂದು ಅಲ್ಲೆ ಇದ್ದ ಸೆಂಟ್ರಿಂಗ್‌ ಕಟ್ಟಿಗೆ ತೆಗೆದುಕೊಂಡು ವಿಠ್ಠಲ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಕುರಿತು ನ್ಯೂ ರಾಘವೇಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತದನಂತರ 2020ರ ಆ. 5ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಎರಡನೇ ಜೆಎಂಎಫ್ಸಿ ನ್ಯಾಯಾಧೀಶರಾದ ಬಸವರಾಜ ನೇಸರ್ಗಿ ವಾದ ಆಲಿಸಿ ಆರೋಪಿಯಾಗಿರುವ ತೋಟಗಾರಿಕಾಧಿಕಾರಿ ರಾಜಕುಮಾರ ಗೋವಿನ್‌ಗೆ ಎರಡು ವರ್ಷಗಳ ಕಠಿಣ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಕಿರಿಯ ಅಭಿಯೋಜಕರಾಗಿ ಲತಾ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next