Advertisement

ಅಂಬಲಪಾಡಿಯಲ್ಲಿ ವಚನ ದಿನ

08:10 AM Aug 30, 2017 | Team Udayavani |

ಉಡುಪಿ: ಮೈಸೂರಿನ ಅ.ಭಾ. ಶರಣ ಸಾಹಿತ್ಯ ಪರಿಷತ್ತು, ಉಡುಪಿ ರಥಬೀದಿ ಗೆಳೆಯರು, ತಾಲೂಕು ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅ.ಭಾ. ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನ ಮತ್ತು ಸಂಸ್ಥಾಪಕ ಸುತ್ತೂರು ಜಗದ್ಗುರು ಶ್ರೀರಾಜೇಂದ್ರ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ ವಚನ ದಿನವನ್ನು ದೇವಸ್ಥಾನದ ಧರ್ಮದರ್ಶಿ ಡಾ|ನಿ.ಬಿ.ವಿಜಯ ಬಲ್ಲಾಳ್‌ ಉದ್ಘಾಟಿಸಿ ಶರಣ ಸಾಹಿತ್ಯದ ಮಹತ್ವವನ್ನು ಉಲ್ಲೇಖೀಸಿದರು. 

Advertisement

ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ|ಮುರಲೀಧರ ಉಪಾಧ್ಯ ಹಿರಿಯಡಕ ವಹಿಸಿದ್ದರು. ತೆಂಕನಿಡಿಯೂರು ಕಾಲೇಜಿನ ಉಪನ್ಯಾಸಕ ಡಾ|ಎಚ್‌.ಕೆ.ವೆಂಕಟೇಶ್‌ ಅವರು “ವಚನ ಸಾಹಿತ್ಯದಲ್ಲಿರುವ ಸಮಾನತೆಯ ಆಶಯಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು. ಸಂಘಟಕರ ಪರವಾಗಿ ಮೇಟಿ ಮುದಿಯಪ್ಪ ಸ್ವಾಗತಿಸಿ ಡಾ|ಯು.ಸಿ.ನಿರಂಜನ್‌ ಪ್ರಸ್ತಾವನೆಗೈದರು. ಸುಬ್ರಹ್ಮಣ್ಯ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next