Advertisement

ಮುರಕಲ್ಲು ಗುಡ್ಡದ ಅಡಿಕೆ ತೋಟ ನೋಡ್ರೀ..

01:31 PM Jul 09, 2018 | Harsha Rao |

ಶ್ಯಾಮಪ್ರಸಾದರಿಗೆ ಫ‌ಸಲು ನೀಡುತ್ತಿರುವ  ಹತ್ತು ಎಕರೆ ಅಡಿಕೆ ತೋಟವಿದೆ. ರಬ್ಬರ್‌ ತೋಟವೂ ಇದೆ. ಅದರಲ್ಲಿ ಅಡಿಕೆ ಮರಗಳ ಆಧಾರದಿಂದ ಕರಿಮೆಣಸಿನ ಬಳ್ಳಿಗಳನ್ನು ಬೆಳೆಸಿ¨ªಾರೆ.  ಪಣಿಯೂರು, ಕರಿಮುಂಡ, ಡೆಕ್ಕನ್‌-2 ತಳಿಗಳು ಇವರಲ್ಲಿವೆ. ಅಡಿಕೆ ಮರಗಳಿಗೆ ಜುಲೈ ತಿಂಗಳ ಕೊನೆಯಲ್ಲಿ ತಲಾ ಒಂದು ಕಿಲೋ ಹರಳು ಹಿಂಡಿ ಮತ್ತು ಸೆಪ್ಟೆಂಬರಿನಲ್ಲಿ ತಲಾ 2 ಕಿಲೋ ಕುರಿಗೊಬ್ಬರವನ್ನು ಹಾಕುತ್ತಾರೆ.         

Advertisement

ಆ ಮುರಕಲ್ಲು ಗುಡ್ಡದಲ್ಲಿ ಅಡಿಕೆ ತೋಟ ಮಾಡಬಹುದೆಂದರೆ ಯಾರೂ ನಂಬಲಿಕ್ಕಿಲ್ಲ. ಆದರೆ ವೈ.ಶ್ಯಾಮಪ್ರಸಾದ್‌ ಅದನ್ನು ಮಾಡಿ ತೋರಿಸಿ¨ªಾರೆ. ಕಾಸರಗೋಡು ಜಿÇÉೆ ಕುಂಬಳೆ ಹತ್ತಿರದ ಎಯ್ನಾರು ಮೂಲೆಯಲ್ಲಿದೆ ಶ್ಯಾಮಪ್ರಸಾದರ 15 ಎಕರೆ ಜಮೀನು. ಮಂಗಳೂರಿನಿಂದ ಕುಂಬಳೆಗೆ ಹೋಗಿ, ಅಲ್ಲಿ ಬಸ್‌ ಬದಲಾಯಿಸಿ, ಸೀತಾಂಗೋಳಿ ಹಾದು ಅವರ ಜಮೀನಿಗೆ ಹೋಗಿ¨ªೆ. ಕರಾವಳಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮುರ (ಜಂಬಿಟ್ಟಿಗೆ) ಕಲ್ಲುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗಾಗಿ, ಕಳೆದ ಏಳು ವರುಷಗಳಿಂದ ಕೆಲವು ಕ್ವಾರಿ ಗುತ್ತಿಗೆದಾರರಿಗೆ ಶ್ಯಾಮಪ್ರಸಾದ್‌ ತಮ್ಮ ಜಮೀನಿನ ಮುರಕಲ್ಲು ಗುಡ್ಡದಲ್ಲಿ ಕಲ್ಲು ಅಗೆದು ತೆಗೆಯಲು ತಲಾ 25 ಸೆಂಟ್ಸ್‌ನಂತೆ ಜಾಗ ನೀಡುತ್ತಿ¨ªಾರೆ. ಅವರು ಅಲ್ಲಿ ಸುಮಾರು 50 ಅಡಿ ಆಳಕ್ಕೆ ಅಗೆದು, ಮುರಕಲ್ಲು ತೆಗೆದ ಬಳಿಕ, ಆಳವಾದ ಆ ಹೊಂಡಗಳಿಗೆ ಶ್ಯಾಮಪ್ರಸಾದರು ಮಣ್ಣು ತುಂಬಿಸಿ ಮುಚ್ಚುತ್ತಿ¨ªಾರೆ. ಇದಕ್ಕೆ ಅವರಿಗೆ ತಗಲುವ ವೆಚ್ಚ ಸೆಂಟ್ಸ್‌ಗೆ 5,000.ರೂ.

2017ರಲ್ಲಿ ಈ ರೀತಿ ಒಂದು ಎಕರೆ ಕ್ವಾರಿಗೆ ಮಣ್ಣು ತುಂಬಿಸಿ, ಅಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಬೆಳೆಸಿ¨ªಾರೆ. ಈ ವರ್ಷ ಇನ್ನೊಂದು ಎಕರೆಯಲ್ಲಿ ಹಾಗೆಯೇ ಅಡಿಕೆ ತೋಟ ಎಬ್ಬಿಸಿ¨ªಾರೆ. ಇದು ಮುರಕಲ್ಲು ಗುಡ್ಡವನ್ನು ಹೇಗಿದೆಯೋ ಹಾಗೇ, ಬಿಟ್ಟು ಬಿಡುವ ಬದಲಾಗಿ, ಅಲ್ಲಿ ತೋಟ ಬೆಳೆಸಿ ನಿರಂತರ ಆದಾಯಗಳಿಸುವ ಸಾಹಸ.
ಶ್ಯಾಮಪ್ರಸಾದರಿಗೆ ಫ‌ಸಲು ನೀಡುತ್ತಿರುವ  ಹತ್ತು ಎಕರೆ ಅಡಿಕೆ ತೋಟವಿದೆ. ರಬ್ಬರ್‌ ತೋಟವೂ ಇದೆ. ಅವಕ್ಕೆ ನೀರಿನಾಸರೆ ಸುರಂಗ ಬಾವಿಯಿಂದ ಹರಿದು ಬರುವ ನೀರು ತುಂಬಿದ ಮದಕ. ಜಮೀನಿನಲ್ಲಿ ಸಮೃದ್ಧ ನೀರಿದ್ದರೂ ಅವರಿಗೆ ಮಳೆ ನೀರು ಇಂಗಿಸುವ ಕಾಳಜಿ. ಅದಕ್ಕಾಗಿ, 2017ರಲ್ಲಿ ಮನೆ ಪಕ್ಕದÇÉೇ ಜೆಸಿಬಿಯಿಂದ ಮಾಡಿಸಿದ್ದು 10 ಅಡಿ ಘನ ಅಳತೆಯ ಹೊಂಡ. ಅದಕ್ಕೆ 10 ಹೆಚ್‌ಪಿ ಪಂಪಿನಿಂದ ತುಂಬಿಸಿದ 40,000 ಲೀಟರ್‌ ನೀರು ಕೇವಲ ಒಂದು ಗಂಟೆಯಲ್ಲಿ ಇಂಗಿ ಹೋಗಿದೆ; ಇದಕ್ಕೆ ಕಾರಣ, ಅಂತರ್ಜಲ ಮಟ್ಟ ಇಳಿಯುತ್ತಿರುವುದು ಎನ್ನುತ್ತಾರೆ. ಅದಕ್ಕೆ ಅವರು ನೀಡುವ ಪುರಾವೆ, ತಮ್ಮ ಜಮೀನಿನ ಕೊಳವೆ ಬಾವಿಗಳ ನೀರಿನ ಮಟ್ಟ. 2016ರಲ್ಲಿ 62 ಅಡಿ ಆಳದಲ್ಲಿದ್ದ ಮುಖ್ಯ ಕೊಳವೆಬಾವಿಯ ನೀರಿನ ಮಟ್ಟ 2017ರ ಬೇಸಿಗೆಯಲ್ಲಿ 55 ಅಡಿಗೆ ಇಳಿದಿತ್ತು ಎಂದು ವಿವರಿಸುತ್ತಾರೆ.

ತೋಟದಲ್ಲಿ ಅಡಿಕೆ ಮರಗಳ ಆಧಾರದಿಂದ ಕರಿಮೆಣಸಿನ ಬಳ್ಳಿಗಳನ್ನು ಬೆಳೆಸಿ¨ªಾರೆ.  ಪಣಿಯೂರು, ಕರಿಮುಂಡ, ಡೆಕ್ಕನ್‌-2 ತಳಿಗಳು ಇವರಲ್ಲಿವೆ. ಅಡಿಕೆ ಮರಗಳಿಗೆ ಜುಲೈ ತಿಂಗಳ ಕೊನೆಯಲ್ಲಿ ತಲಾ ಒಂದು ಕಿಲೋ ಹರಳು ಹಿಂಡಿ ಮತ್ತು ಸೆಪ್ಟೆಂಬರಿನಲ್ಲಿ ತಲಾ 2 ಕಿಲೋ ಕುರಿಗೊಬ್ಬರವನ್ನು ಹಾಕುತ್ತಾರೆ. ಇದನ್ನು ತರಿಸುವುದು ಹಾಸನದಿಂದ, 50 ಕಿಲೋ ಬ್ಯಾಗಿಗೆ 150ರೂ. ದರದಲ್ಲಿ. ಅದಲ್ಲದೆ, ನವೆಂಬರಿನಲ್ಲಿ
ಪ್ರತಿ ಅಡಿಕೆ ಮರಕ್ಕೆ 250 ಗ್ರಾಮ… ಸುಫ‌ಲಾ ಅಥವಾ ಇಫೊR ರಾಸಾಯನಿಕ ಗೊಬ್ಬರ ಸಿಂಪಡಿಸುತ್ತಾರೆ. ಎಲ್ಲ ಅಡಿಕೆ ಮರಗಳಿಗೂ ಈ ಗೊಬ್ಬರಗಳನ್ನು ಮತ್ತು ಬೂದಿಯನ್ನು ನಾನೇ ಹಾಕುವುದು ಎಂದರು. ಯಾಕೆಂದರೆ, ಅಂದೊಮ್ಮೆ ಕೆಲಸದವಳಿಗೆ ಗೊಬ್ಬರ ಹಾಕಲು ಹೇಳಿದಾಗ, ಅವಳು ಕರಿಮೆಣಸು ಬಳ್ಳಿಯ ಬುಡಕ್ಕೇ ಹಾಕಿ, 500 ಕರಿಮೆಣಸು ಬಳ್ಳಿಗಳು ಸುಟ್ಟುಹೋಗಿದ್ದವಂತೆ !

ಒಬ್ಬ ಕೆಲಸದಾಳು ಖಾಯಂ ಆಗಿದ್ದಾರೆ. ಉಳಿದವರು ರಬ್ಬರ್‌ ಟ್ಯಾಪಿಂಗ್‌ ಮತ್ತು ಬೇರೆಲ್ಲ ತೋಟದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.  ಮೂವರು ಮಹಿಳೆಯರಿಂದ ತೋಟದ ಕೆಲಸಕ್ಕೆ ಸಹಾಯ ಒದಗುತ್ತದೆ. ಎಲ್ಲ ಕೆಲಸದವರಿಗೂ ಯುನೈಟೆಡ್‌ ವಿಮಾ ಕಂಪೆನಿಯ ಜೀವವಿಮೆ ಪಾಲಿಸಿಗಳಿವೆ. ಅದರ ಪ್ರೀಮಿಯಮ… ವರುಷಕ್ಕೆ ತಲಾ ರೂ.650 ಆಗುತ್ತದೆ. ಈ ಹಣವನ್ನು ಶ್ಯಾಮ್‌ಪ್ರಸಾದ್‌ ಅವರೇ ಪಾವತಿಸುತ್ತಿ¨ªಾರೆ.

Advertisement

ಶ್ಯಾಮಪ್ರಸಾದರಿಗೆ ತೋಟದಲ್ಲಿ ದಿನವಿಡೀ ಕೆಲಸ. ಮುಂಜಾನೆ 4 ಗಂಟೆಗೆ ಎದ್ದು, ಮುರಕಲ್ಲು ಗುಡ್ಡದ ಅಡಿಕೆ ಸಸಿಗಳಿಗೆ ನೀರುಣಿಸಲು ಮೈಕ್ರೋ-ಇರಿಗೇಷನ್‌ ಚಾಲೂ ಮಾಡುವುದು ಮೊದಲ ಕೆಲಸ. ಅನಂತರ, ಐದು ಹಸುಗಳ ಹಾಲು ಕರೆಯುವ ಕೆಲಸ ಅವರಿಗಾಗಿ ಕಾದಿರುತ್ತದೆ. ಅದೂ ಒಂದು ಗಂಟೆ. ತದನಂತರ, ಮಗನನ್ನು ಶಾಲೆಗೆ ವಾಹನದಲ್ಲಿ ತಲಪಿಸಿ, ಅದೇ ಹಾದಿಯಲ್ಲಿರುವ ಡೈರಿಗೆ ಹಾಲು ಹಾಕಿ ಹಿಂತಿರುಗುತ್ತಾರೆ.

ದನಗಳ ಸೆಗಣಿಯನ್ನು ಆಯಾ ದಿನವೇ ತೋಟದ ಗಿಡಗಳಿಗೆ ಹಾಕುವುದು ಅವರ ಇನ್ನೊಂದು ನಿತ್ಯ ಕಾಯಕ. ಕೆಲಸದಾಳು ತೋಟದ ಕೆಲಸ ಮಾಡುವಾಗ, ಇವರು ಕರಿಮೆಣಸು ಬಳ್ಳಿಗಳನ್ನು ಅಡಿಕೆಮರಗಳಿಗೆ ಬಾಳೆನಾರಿನಿಂದ ಕಟ್ಟುತ್ತಾರೆ. ಪ್ರತಿ ವರ್ಷ ಹೊಸತಾಗಿ ಸಸಿ ನೆಡುವ ಕಾಯಕ ಇದ್ದೇ ಇದೆ. 2017ರಲ್ಲಿ ಅವರು ನೆಟ್ಟಿರುವುದು ಡೆಕ್ಕನ್‌-2 ತಳಿಯ 350 ಕರಿಮೆಣಸು ಬಳ್ಳಿಗಳನ್ನು. ತೋಟ ಸುತ್ತಲು ಒಡಾಡಲು ಜೀಪ್‌ ಬಳಸುತ್ತಾರೆ.  ಶ್ಯಾಮಪ್ರಸಾದರ ಎಲ್ಲ ಕೆಲಸಗಳೂ ಸುಗಮವಾಗಿ ನಡೆಯಲು ಪತ್ನಿ ಪುಷ್ಪಲತಾ ಅವರ ಸಹಕಾರ ಇದ್ದೇ ಇದೆ.

ತೋಟದ ಹಣ್ಣುಗಳನ್ನು ಮಾರಿ ಲಾಭ ಮಾಡಿಕೊಳ್ಳುವ ಜಾಯಮಾನ ಅವರದ್ದಲ್ಲ. ಬದಲಾಗಿ, ಹಣ್ಣು ಹಂಚುವುದರÇÉೇ ಅವರಿಗೆ ಖುಷಿ. ತಮ್ಮ ತೋಟದ 25 ಕಸಿ ಹಾಗೂ ಕಾಡು ಮಾವಿನ ಮರಗಳ ಹಣ್ಣುಗಳಲ್ಲಿ, ಮನೆಬಳಕೆಗಾಗಿ ಮಿಕ್ಕಿದ್ದನ್ನೆಲ್ಲ ಬಂಧುಮಿತ್ರರಿಗೆ ಹಂಚುವುದರಲ್ಲೇ ಅವರಿಗೆ ಸಂಭ್ರಮ. ಶ್ಯಾಮಪ್ರಸಾದರ ತೋಟದಲ್ಲಿ ಜನವರಿಯಿಂದ ಜೂನ್‌ವರೆಗೆ ಮಾವು ಕೊಯ್ಲು ಇರುತ್ತದೆ. ಈ ಕೊಯ್ಲಿಗಾಗಿ ಅವರು ಪ್ರತಿ ವರ್ಷ ಪಾವತಿಸುವ ಮಜೂರಿಯೇ ರೂ.10,000! ಉತ್ತಮ ಫ‌ಸಲು ನೀಡುವ ಎರಡು ಹುಣಿಸೆ ಮರಗಳ ಫ‌ಸಲನ್ನೂ ಬಂಧುಮಿತ್ರರಿಗೆ ಹಂಚುವುದು ಶ್ಯಾಮಪ್ರಸಾದರ ಪಾಲಿನ ಇನ್ನೊಂದು ಪ್ರಿಯವಾದ ಕೆಲಸ.  ಕಳೆದ ವರ್ಷ ಒಂದು ಕ್ವಿಂಟಾಲ… ಹಣ್ಣು ನೀಡಿದ ಮುಸುಂಬಿ ಮರವೊಂದರ ಹಣ್ಣುಗಳನ್ನು ನನಗೆ ಕೊಡುತ್ತಾ, ಇದರ ಬೀಜಗಳಿಂದ ಸಸಿ ಮಾಡಿ ನೆಡಿ. ನಿಮ್ಮ ತೋಟದಲ್ಲಿಯೂ ಹಣ್ಣಾಗಲಿ ಎಂದು ಹಾರೈಸಿದರು.

ವೆನಿಲ್ಲಾದಿಂದ ಸಮೃದ್ಧ ಆದಾಯವಿದ್ದ ಕಾಲದಲ್ಲಿ ವೆನಿಲ್ಲ ಐಸ್ಕ್ರೀಂ ತಯಾರಿಸಿ, ಅದನ್ನು ಕಪ್ಪಿಗೆ 10ರೂ.ನಂತೆ ಮಾರಿದವರು ಶ್ಯಾಮಪ್ರಸಾದ್‌. ವೆನಿಲ್ಲಾ ಬೆಲೆ ಕುಸಿದಾಗ, ಹಲವರು ವೆನಿಲ್ಲಾ ಬಳ್ಳಿಗಳನ್ನು ಕಿತ್ತೆಸೆದರು. ಆದರೆ ಇವರು ಎಲ್ಲವನ್ನೂ ಉಳಿಸಿಕೊಂಡರು. ನಾನು ಭೇಟಿಯಿತ್ತಾಗ ಇನ್ನಷ್ಟು ವೆನಿಲ್ಲಾ ಬಳ್ಳಿಗಳನ್ನು ನೆಡಲು ತಯಾರಿ ನಡೆಸಿದ್ದರು. ಇದು ಕೃಷಿಯಲ್ಲಿ ಅವರ ತಾಳ್ಮೆ ಮತ್ತು ದೂರಾಲೋಚನೆಗೆ ಇರುವ ನಿದರ್ಶನ. ಕೃಷಿಯಲ್ಲಿ ಲಾಭವಿದೆಯೇ? ಎಂದು ಆ ದಿನ ಶ್ಯಾಮಪ್ರಸಾದರನ್ನು ಕೇಳಿದಾಗ, ಮುಗುಳುನಗುವಿನ ಮೌನವೇ ಅವರ ಉತ್ತರವಾಗಿತ್ತು.

– ಅಡ್ಕೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next