ದೇವನಹಳ್ಳಿ: ಕೋವಿಡ್ ಎಂಬ ಹೆಮ್ಮಾರಿ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದು, ಪದವಿ ಕಾಲೇಜುಗಳು ಪ್ರಾರಂಭವಾಗಿ ಕಳೆದ ವಾರ ಕಳೆಯುತ್ತಿದ್ದರೂ ವಿದ್ಯಾರ್ಥಿಗಳು ಸೂಕ್ತ ಪ್ರಮಾಣದಲ್ಲಿ ಕಾಲೇಜಿನತ್ತ ಮುಖ ಮಾಡುತ್ತಿಲ್ಲ.
ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡೇ ವಿದ್ಯಾರ್ಥಿಗಳು ತರಗತಿ ಪ್ರವೇಶ ನೀಡಿರುವುದರಿಂದ ಈಗಾಗಲೇ ವಿದ್ಯಾರ್ಥಿಗಳು, ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಸೋಂಕಿನ ಪರೀಕ್ಷೆ ವರದಿಯಂತೆ ನೆಗಟಿವ್ ಬಂದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಪ್ರವೇಶ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್‌ಬಗ್ಗೆ ತಿಳಿದುಬಂದಿದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹೇಳುತ್ತಾರೆ.
ಆನ್‌ಲೈನ್ ತರಗತಿ ನಿರಂತರ: ಕಾಲೇಜುಗಳು ಪ್ರಾರಂಭವಾಗಿದ್ದರೂ, ಆನ್‌ಲೈನ್ ತರಗತಿ ಮುಂದುವರಿಯಲಿದೆ. ಆನ್‌ಲೈನ್ ಇಲ್ಲವೇ ಆಫ್‌ಲೈನ್ ತರಗತಿಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.ಬಹುತೇಕರು ಇನ್ನೂ ಆನ್‌ಲೈನ್ ಪಾಠಕ್ಕೆ ಗಮನ ನೀಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಹೇಳುವುದೇನೆಂದರೆ, ನಾವು ಕಾಲೇಜಿಗೆ ಬರುವುದಕ್ಕಿಂತ ಆನ್‌ಲೈನ್ ಶಿಕ್ಷಣವೇ ನಮಗೆ ಅನುಕೂಲ ಎನ್ನುತ್ತಾರೆ. ಕಾಲೇಜುಗಳ ವಿದ್ಯಾರ್ಥಿಗಳ ಜತೆಗೆ ಕಾಲೇಜಿನ ಎಲ್ಲಾ ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತದೆ. ಬಹುತೇಕರ ಫಲಿತಾಂಶ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ಹೇಳುತ್ತಾರೆ.
ಪ್ರತಿ ವಿದ್ಯಾರ್ಥಿ ಕಾಲೇಜಿಗೆ ಬರುವ ಮುನ್ನ ಕೋವಿಡ್ -19 ವರದಿ ತರುವುದನ್ನು ಕಡ್ಡಾಯ ಮಾಡಲಾಗಿದೆ.ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಬರುವ ವಿದ್ಯಾರ್ಥಿಗಳಿಂದ ಕಾಲೇಜಿನ ಉಪನ್ಯಾಸಕರು, ಕೊರೊನಾ ಸಂಬಂಧಿಸಿದಂತೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಪೋಷಕರ ಪ್ರಮಾಣ ಪತ್ರ ಮತ್ತು ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಪತ್ರ ಸಂಗ್ರಹಿಸಲಾಗಿದೆ. ಬಹುತೇಕ ಪೋಷಕರು ಈ ವಿಚಾರದಲ್ಲಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಇನ್ನೂ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಿಲ್ಲ ಎಂಬುದು ಉಪನ್ಯಾಸಕರ ಅಭಿಪ್ರಾಯವಾಗಿದೆ.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಹತ್ತಿರ ಈಗಾಗಲೇ ಕೋವಿಡ್ ಪರೀಕ್ಷೆ ಮಾಡಿಸಿ, ಕೆಲವರ ವರದಿಗಳೂ ಬಂದಿವೆ. ಮುಂದಿನ ಸೋಮವಾರದ ಒಳಗಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಶಿಕ್ಷಣ ಸಂಸ್ಥೆಗಳು ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಸ್‌ಗಳ ಸೌಲಭ್ಯದ ಕೊರತೆಯಿಂದ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 300 ವಿದ್ಯಾರ್ಥಿಗಳು ವಿವಿಧ ಪದವಿಗಳಿಗೆದಾಖಲಾಗಿದ್ದಾರೆ. 40ವಿದ್ಯಾರ್ಥಿಗಳು ನೆಗೆಟಿವ್ ಪತ್ರ ನೀಡಿ,ಕಾಲೇಜುಗಳಿಗೆ ಬಂದಿದ್ದಾರೆ.ಕಲಾವಿಭಾಗದಲ್ಲಿಕೇವಲ70 ಮಂದಿನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ 900 ವಿದ್ಯಾರ್ಥಿಗಳು ಇದ್ದು,ಆನ್‌ಲೈನ್ ಬೋಧನೆ ಪ್ರಾರಂಭಿಸಲಾಗಿದೆ. ಕೋವಿಡ್ ನೆಗೆಟಿವ್ ಪ್ರಮಾಣಪತ್ರದೊಂದಿಗೆ ಪೋಷಕರ ಅನುಮತಿ ಕಡ್ಡಾಯ.
–ಪ್ರೊ.ಶಿವಶಂಕರಪ್ಪ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವನಹಳ್ಳಿ
ಈಗಾಗಲೇ ಕಾಲೇಜುಗಳಿಗೆ ಬರಲು ಹೆಚ್ಚು ಆಸಕ್ತಿ ಹೊಂದಿದ್ದೇವೆ. ಆದರೆ,ಕಾಲೇಜುಗಳಿಗೆ ಬರುವ ಮುಂಚೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚನೆ ಇದೆ.ಹೀಗಾಗಿ ಆನ್‌ಲೈನ್‌ನಲ್ಲಿಯೇ ಪಾಠ ಪ್ರವಚನ ಪಡೆಯುತ್ತಿದ್ದೇವೆ.ಕೆಲವು ವಿದ್ಯಾರ್ಥಿಗಳಿಗೆ ವಿವಿಧ ಗ್ರಾಮಗಳಿಂದ ಬರುವವರಿಗೆ ಬಸ್ ಸೌಕರ್ಯವಿಲ್ಲದೆ, ಪರಿತಪಿಸುತ್ತಿದ್ದಾರೆ.
–ಪ್ರಿಯ, ವಿದ್ಯಾರ್ಥಿನಿ
–ಎಸ್.ಮಹೇಶ್