Advertisement

ಆರೆಸ್ಸೆಸ್‌ ಶಾಖೆಗಳ ಸಂಖ್ಯೆ ಗಣನೀಯ ಹೆಚ್ಚಳ

06:05 AM Mar 10, 2018 | Team Udayavani |

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಸದ್ಯ ಶಾಖೆಗಳ ಸಂಖ್ಯೆ 58,967 ಆಗಿದ್ದು, ಕಳೆದ ವರ್ಷ ಇದು 57,185 ಆಗಿತ್ತು. 2014ರಲ್ಲಿ 44,982, 2015ರಲ್ಲಿ 51332 ಹಾಗೂ 2016ರಲ್ಲಿ 5527 ಶಾಖೆಗಳು ಇದ್ದವು. 2014 ಹಾಗೂ 2017ರಲ್ಲಿ ಶಾಖೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದರೆ, 2016ರಲ್ಲಿ ಶಾಖೆಗಳ ಏರಿಕೆ ಪ್ರಮಾಣ ಕಡಿಮೆಯಾಗಿತ್ತು ಎಂಬುದಾಗಿ ವಿವರಿಸಲಾಗಿದೆ. 

Advertisement

ಈ ಮಧ್ಯೆ ಆರೆಸ್ಸೆಸ್‌ಗೆ ನೇಮಕಗೊಳ್ಳುವ ಸ್ವಯಂಸೇವಕ ಪೂರ್ವ ಹಂತದ ಪ್ರಾಥಮಿಕ ಶಿಕ್ಷಾ ವರ್ಗವೂ ಕಡಿಮೆಯಾಗಿದೆ. 2016-17ರಲ್ಲಿ 8264 ಪ್ರಾಥಮಿಕ ಶಿಕ್ಷಾ ವರ್ಗ ಇಳಿಕೆಯಾಗಿ, 1,04,256ರಷ್ಟಿದೆ. ಮೂರು ದಿನಗಳೆ ಪ್ರತಿನಿಧಿ ಸಭೆ ನಾಗ್ಪುರದಲ್ಲಿ ಶುಕ್ರವಾರ ಆರಂಭವಾಗಿದ್ದು  ಮೂರನೇ ದಿನ ಹೊಸ ಸರಕಾರ್ಯವಾಹರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next