Advertisement
ಆದ್ದರಿಂದ ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸುಮಾರು ಎಂಟು ವರ್ಷಗಳಿಂದ ಪುಸ್ತಕ ಮಾರಾಟ ವೃತ್ತಿ ಮಾಡುವ ಚಂದ್ರ ಶೇಖರ ಮೊರತ್ತಣೆ ಹೇಳುತ್ತಾರೆ.ದೂರದ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪುಸ್ತಕಗಳನ್ನು ಬಾಡಿಗೆ ವಾಹನಗಳಲ್ಲಿ ತೆಗೆದು ಕೊಂಡು ಹೋದರೆ ಬಾಡಿಗೆ ಹಣವೇ ಆಗುವುದಿಲ್ಲ ಎಂದು ಹೇಳುತ್ತಾರೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಗಾಗಿ ಕೆಲವು ಪುಸ್ತಕಗಳನ್ನು ಓದುತ್ತಾರೆ.ಆದರೆ ಇದು ಹವ್ಯಾಸವಾಗಿ ಮಾಡುವವರು ಬೆರಳೆಣಿಕೆ ಮಾಂದಿ ಮಾತ್ರ.ಸಾಹಿತ್ಯ ಅಭ್ಯಸಿಸುವ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿರುತ್ತಾರೆ.ನಮ್ಮಲ್ಲಿ ಶ್ರೇಷ್ಠ ಲೇಖಕರು,ಸಾಹಿತಿಗಳು,ಕವಿಗಳು ಬಹಳಷ್ಟು ಇದ್ದಾರೆ.ಆದರೆ ಅವರ ಕೃತಿಗಳನ್ನು ಎಷ್ಟು ಓದುಗರು ಖರೀದಿಸುತ್ತಾರೆ ಎನ್ನುವುದು ಪ್ರಶ್ನೆ .
Related Articles
Advertisement
ಮಕ್ಕಳು ಫೋನ್ ಹಿಡಿದು ತನ್ನ ಕೋಣೆಯಲ್ಲಿ ಪಬ್ಜಿಯೋ ಇನ್ನೇನೊ ನೋಡುತ್ತಾ ಇರುತ್ತಾರೆ. ರಾಮಾಯಣ,ಮಹಾಭಾರತ,ಇತರ ಧಾರ್ಮಿಕ ಸಾಧು ಸಂತರ ಕಥೆ ಹೇಳಿ ಕೊಡಬೇಕಾದ ರಕ್ಷಕರು ಟಿವಿ ಧಾರಾವಾಹಿಗಳಲ್ಲಿ ಮಗ್ನರಾಗಿರುತ್ತಾರೆ.ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿ ಓದಿನೆಡೆಗೆ ಪ್ರೋತ್ಸಾಹ ನೀಡ ಬೇಕಾದುದು ಹೆತ್ತವರ ಕರ್ತವ್ಯ ಎಂದು ಸಾಹಿತಿಅಪ್ಪಯ್ಯ ಯಾದವ್ ನುಡಿಯುತ್ತಾರೆ.
ಗಟ್ಟಿ ಓದು,ಮೆಲ್ಲ ಓದು,ಮೌನ ಓದು, ಹೇಗೆಯೇ ಓದಿ ಆದರೆ ಓದನ್ನು ಬಿಡಬೇಡಿ. ಜ್ಞಾನಾರ್ಜನೆಗಾಗಿ ದೇಶ ಸುತ್ತು ಇಲ್ಲವೇ ಕೋಶ ಓದು ಎಂಬ ಮಾತಿನಂತೆ ಕಲಿಕೆಗೆ ಹೇಗೆ ವಯಸ್ಸು ಅಡ್ಡಿಯಲ್ಲವೋ ಹಾಗೆಯೇ ಓದುವಿಕೆಗೂ ವಯಸ್ಸಿನ ಅಂತವಿಲ್ಲ .
“ಓದುವ ಹವ್ಯಾಸ ಬೆಳೆಸ ಬೇಕು’ಮಕ್ಕಳಿಗೆ ಎಳವೆಯಿಂದಲೇ ಓದುವ ಹವ್ಯಾಸ ಬೆಳೆಸ ಬೇಕು.ಮಕ್ಕಳ ಹೆತ್ತವರು,ರಕ್ಷಕರು ಮಕ್ಕಳಿಗೆ ಓದುವುದಕ್ಕೆ ಪ್ರೋತ್ಸಾಹ ನೀಡ ಬೇಕು.ಪೋಷಕರು ಕೆಲವು ಕಥೆಗಳನ್ನು,ಕವಿತೆಗಳನ್ನು ಮಕ್ಕಳಿಗೆ ಹೇಳಿ,ಪುಸ್ತಕಗಳನ್ನು ನೀಡಿದರೆ ಓದುವ ಅಭ್ಯಾಸ ಬೆಳೆಸಲು ಸಾಧ್ಯವಾಗುತ್ತದೆ ಎಂದು ತಮ್ಮ ಮನೆಯಲ್ಲೇ ಚಿಕ್ಕ ಗ್ರಂಥಾಲಯವನ್ನು ಮಾಡಿದ ರಾಧಾಕೃಷ್ಣ ಭಂಡಾರದಮನೆ ಅವರು ಹೇಳುತ್ತಾರೆ.