ಹೊಸದಿಲ್ಲಿ: 2019-20ನೇ ಶೈಕ್ಷಣಿಕ ವರ್ಷದಿಂದ ಕೇಂದ್ರ ಸರಕಾರದ ಅಡಿಯಲ್ಲಿ ಆರಂಭಗೊಳ್ಳಲಿರುವ 25 ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಈ ಮೊದಲು ನಿಗದಿಪಡಿಸಿದ್ದ ಎಂಬಿಬಿಎಸ್ ಸೀಟುಗಳಿಗಿಂತ 2,750 ಹೆಚ್ಚುವರಿ ಸೀಟುಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ವೈದ್ಯರ ಕೊರತೆ ಇತ್ಯಾದಿ ಕಾರಣಗಳಿಂದಾಗಿ ವೈದ್ಯಕೀಯ ಕ್ಷೇತ್ರವು ನಿಂತ ನೀರಾಗಿದ್ದನ್ನು ಪರಿಗಣಿಸಿದ್ದ ಕೇಂದ್ರ ಸರಕಾರ, 2012ರಿಂದಲೇ ವೈದ್ಯರ ಬರವನ್ನು ನೀಗಲು ಹೆಜ್ಜೆಯಿರಿಸಿತ್ತು. ಅದರಂತೆ, ಆಗಿನಿಂದಲೇ ವೈದ್ಯಕೀಯ ಕಾಲೇಜುಗಳಲ್ಲಿ ವಾರ್ಷಿಕವಾಗಿ ನಿಗದಿತ ಸಂಖ್ಯೆಯಲ್ಲಿ ಸೀಟುಗಳನ್ನು ಹೆಚ್ಚಳಗೊಳಿಸುತ್ತಾ ಬಂದಿದೆ. ಈ ಬಾರಿ ಹೆಚ್ಚಿಸಲಾಗಿರುವ ಸೀಟುಗಳು, ವೈದ್ಯಕೀಯ ವ್ಯಾಸಂಗದ ಇತಿಹಾಸದಲ್ಲೇ ಅಧಿಕ ಎನ್ನಲಾಗಿದೆ. ಅತ್ತ, ಖಾಸಗಿ ವಲಯದ ವೈದ್ಯಕೀಯ ಕಾಲೇಜುಗಳ ಸಂಖ್ಯೆಗೆ ಈ ವರ್ಷ 10 ಹೊಸ ಎಂಬಿಬಿಎಸ್ ಕಾಲೇಜುಗಳು ಸೇರ್ಪಡೆಗೊಳ್ಳುತ್ತಿದ್ದು, ಆ ಕಾಲೇಜುಗಳಲ್ಲಿಯೂ 1,500 ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಇದೆಲ್ಲದರ ಜತೆಗೆ, ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆಯನ್ನು ನೀಗಲೂ ಸರಕಾರ ಪ್ರಯತ್ನ ಪಡುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement
ಎಂಬಿಬಿಎಸ್ ಸೀಟುಗಳ ಸಂಖ್ಯೆ ಗಣನೀಯ ಹೆಚ್ಚಳ
01:17 AM Jun 15, 2019 | mahesh |
Advertisement
Udayavani is now on Telegram. Click here to join our channel and stay updated with the latest news.