Advertisement

ನಾಲ್ಕಕ್ಕೇರಿದ ಸೋಂಕಿತರ ಸಂಖ್ಯೆ

03:52 PM Apr 21, 2020 | Suhan S |

ಗದಗ: ನಗರದಲ್ಲಿ ಮತ್ತೂಂದು ಕೋವಿಡ್ 19 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಇಲ್ಲಿನ ರಂಗನವಾಡ ಗಲ್ಲಿಯಲ್ಲಿ ದಿನಕಳೆದಂತೆ ಸೋಂಕಿತ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯ ಹಾಟ್‌ ಸ್ಪಾಟ್‌ ಆಗುವತ್ತ ಸಾಗಿದೆ. ಪರಿಣಾಮ ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಮೂಡಿಸಿದೆ.

Advertisement

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್‌ ನಂ.31ರ ವ್ಯಾಪ್ತಿಯ ರಂಗನವಾಡ ಓಣಿಯ ನಿವಾಸಿ 24 ವರ್ಷದ ಯುವಕನಿಗೆ (ಪಿ.396) ಕೋವಿಡ್‌-19 ಸೋಂಕು ದೃಢಪಟ್ಟಿದೆ. ಇವರಿಗೆ ಪಿ-370 ಪ್ರಕರಣದ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿರಬಹುದು. ಈತನ ಮನೆಯಲ್ಲಿ ಒಟ್ಟು 8 ಜನರಿದ್ದು, ಅವರೆಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ನಿಗಾದಲ್ಲಿರಿಸಲಾಗಿದೆ. ಈಗಾಗಲೇ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಸಿದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಕೋವಿಡ-19 ನಿರ್ವಹಣೆ ನಿಯಮಗಳನ್ವಯ ಎಲ್ಲ ಮುನ್ನೆಚ್ಚರಿಕೆ ಕ್ರಮ ಜರುಗಿಸಿ ವ್ಯಕ್ತಿ (ಪಿ.396) ಇದ್ದ ಪ್ರದೇಶವನ್ನು ನಿಯಂತ್ರಿತ ಪ್ರದೇಶವಾಗಿ ಘೋಷಿಸಿ ಸಾರ್ವಜನಿಕರಿಗೆ ಆ ಪ್ರದೇಶದಿಂದ ಹೊರಗೆ ಅಥವಾ ಒಳಗೆ ಪ್ರವೇಶಿಸಿವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ದ್ವಿತೀಯ ಸಂಪರ್ಕದವರಿಗೆ ಸೋಂಕು : ನಗರದಲ್ಲಿ ಕಂಡುಬರುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕಕ್ಕಿಂತ ಹೆಚ್ಚು ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಹೆಚ್ಚು ಅಪಾಯಕಾರಿ ಎನಿಸಿದೆ. ಸತತ ಮೂರೂ ಪ್ರಕರಣಗಳಲ್ಲಿ ದ್ವಿತೀಯ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಕಂಡು ಬಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಎ.7 ರಂದು ಮೊದಲ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. ರಂಗನವಾಡದ 80 ವರ್ಷದ ವೃದ್ಧೆ (ಪಿ. 166) ಗೆ ದೃಢ ಪಟ್ಟಿತ್ತು. ದ್ವಿತೀಯ ಪ್ರಕರಣ ಏ.16ರಂದು 52 ವರ್ಷದ ಮಹಿಳೆ(ಪಿ.304) ಗೆ ಸೋಂಕು ಖಚಿತವಾಗಿತ್ತು. ಈಕೆಗೆ ಎದುರು ಮನೆಯ ಗೆಳತಿಯಾಗಿದ್ದ 80 ವರ್ಷದ ವೃದ್ಧೆ(ಪಿ.166) ಯಿಂದ ಹರಡಿತ್ತು.

Advertisement

ಎರಡನೇ ಪ್ರಕರಣದ ಮಹಿಳೆಯೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ 42 ವರ್ಷ (ಪಿ.370) ವ್ಯಕ್ತಿಗೆ ಸೋಂಕು ದೃಢವಾಗಿತ್ತು. ಇದೀಗ ಸೋಮವಾರ ಖಚಿತವಾಗಿರುವ ಯುವಕನಿಗೂ ದ್ವಿತೀಯ ಸಂಪರ್ಕದಿಂದ ಬಂದಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ 82 ವರ್ಷದ ವೃದ್ಧೆಗೆ (ಪಿ.166) ಸೋಂಕು ಕಾಣಿಸಿಕೊಂಡಿತ್ತು. ಆದೇ, ಆ ಅಜ್ಜಿಗೆ ಸೋಂಕು ತಗುಲಿದ್ದು, ಯಾರಿಂದ ನಿಗೂಢವಾಗಿದೆ. ಇಲ್ಲಿನ ರಂಗನವಾಡಿಯ ಸೋಂಕಿತರಿಗೆ ಯಾವುದೇ ರೀತಿಯಲ್ಲಿ ಟ್ರಾವೆಲ್‌ ಇಸ್ಟರಿ ಇಲ್ಲ. ದೇಶ-ವಿದೇಶದಿಂದ ಆಗಮಿಸಿದವರೊಂದಿಗೂ ಸಂಪರ್ಕವಿಲ್ಲ. ಆದರೂ, ದಿನಕಳೆದಂತೆ ಕೊರೊನಾ ಪ್ರಕರಣಗಳು ದೃಢಪಡುತ್ತಿರುವುದು ನಾಗರಿಕರಲ್ಲಿ ಆತಂಕದ ಛಾಯೆ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next