Advertisement

ಸೋಂಕಿತರ ಸಂಖ್ಯೆ 4,426ಕ್ಕೆ ಏರಿಕೆ

02:55 PM Aug 16, 2020 | Suhan S |

ಹಾಸನ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 154 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಸಂಖ್ಯೆ 4426ಕ್ಕೆ ಏರಿದೆ. ಶನಿವಾರ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.

Advertisement

ಶನಿವಾರ ಮೃತಪಟ್ಟ 4 ಜನರ ಮೂವರು ಅರಸೀಕೆರೆ ತಾಲೂಕಿನವರಾಗಿದ್ದು, ಅವರಲ್ಲಿ 48 ವರ್ಷ ಮತ್ತು 86 ವರ್ಷದ ವೃದ್ಧ ಹಾಗೂ 70 ವರ್ಷದ ವೃದ್ಧೆ ಸೇರಿದ್ದಾರೆ. ಹೊಳೆನರಸೀಪುರ ತಾಲೂಕಿನ 40 ವರ್ಷದ ಪುರುಷ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಡಿಎಚ್‌ಒ ಡಾ. ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 54 ಮಂದಿ ಸೇರಿದಂತೆ ಒಟ್ಟು 1849 ಮಂದಿ ಸೋಂಕಿತರು ಚಿಕಿತ್ಸೆ ಪಡೆ ಯುತ್ತಿದ್ದು, ಶನಿವಾರ 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ವರೆಗೆ 2453 ಮಂದಿ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಹೊಸ ದಾಗಿ ಶನಿವಾರ ಕೋವಿಡ್ ಸೋಂಕು ದೃಢಪಟ್ಟ 154 ಜನರ ಪೈಕಿ ಅರಸೀಕೆರೆ ತಾಲೂಕಿನ 50 ಮಂದಿ ಸೇರಿದ್ದು, 30 ಜನ ಹಾಸನ ತಾಲೂಕಿಗೆ ಸೇರಿದ್ದಾರೆ. ಅರಕಲಗೂಡು ತಾಲೂಕಿನ 28 ಮಂದಿ, ಹೊಳೆನರಸೀಪುರ 22 ಮಂದಿ, ಚನ್ನರಾಯಪಟ್ಟಣ ತಾಲೂಕಿನ 9 ಮಂದಿ, ಸಕಲೇಶಪುರ ತಾಲೂಕಿನ 7 ಮಂದಿ, ಬೇಲೂರು ತಾಲೂಕಿನ 5 ಮಂದಿ, ಆಲೂರು ತಾಲೂಕಿನಲ್ಲಿ ಒಬ್ಬರು ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next