Advertisement

ಸೋಂಕಿತರ ಸಂಖ್ಯೆ 1716ಕ್ಕೇರಿಕೆ

10:44 AM Aug 01, 2020 | Suhan S |

ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 101 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1716ಕ್ಕೆ ಏರಿಕೆಯಾಗಿದ್ದು, ಇಬ್ಬರು ಮೃತ ಪಟ್ಟು ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

Advertisement

ತುಮಕೂರು ತಾಲೂಕಿನಲ್ಲಿ 40, ಮಧುಗಿರಿ-2, ಪಾವಗಡ-8, ಕುಣಿಗಲ್‌-6, ತುರುವೇಕೆರೆ – 4, ಚಿಕ್ಕನಾಯಕನಹಳ್ಳಿ -6, ತಿಪಟೂರಿನಲ್ಲಿ -21, ಗುಬ್ಬಿ-7, ಕೊರಟಗೆರೆ-7 ಸೇರಿದಂತೆ ಒಟ್ಟು 101 ಜನರಲ್ಲಿ ಕೋವಿಡ್‌-19 ಸೋಂಕಿರುವುದು ದೃಢಪಟ್ಟಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 34763 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 31343 ಜನರಿಗೆ ನೆಗೆಟಿವ್‌ ಎಂದು ವರದಿ ಬಂದಿದೆ, ಅದರಲ್ಲಿ ನಿಗಾವಣೆಯಲ್ಲಿ 3904 ಜನರಿದ್ದು ಪ್ರಥಮ ಸಂಪರ್ಕ 2343, ದ್ವೀತಿಯ 1561 ಜನರಿದ್ದು 1718 ಜನರಿಗೆ ಕೋವಿಡ್  ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 831 ಜನ ಗುಣಮುಖರಾಗಿದ್ದಾರೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 833, ಐಸಿಯುನಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 54 ಜನರು ಮೃತ ಪಟ್ಟಿದ್ದಾರೆ ಎಂದರು.

ಶುಕ್ರವಾರ ಕೂಡಾ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ತುಮಕೂರಿನ ಗಂಗೋತ್ರಿ ನಗರದ 52 ವರ್ಷದ ವ್ಯಕ್ತಿ, ಮಧುಗಿರಿ ತಾಲೂಕಿನ ಕೋಡಗದಾಲ 75 ವರ್ಷದ ವೃದ್ಧೆ ಬಲಿಯಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next