Advertisement

ರಾಜ್ಯದಲ್ಲಿ ಸೋಂಕಿತರಸಂಖ್ಯೆ 2 ಲಕ್ಷಕ್ಕೆ ಏರಿಕೆ

05:49 PM Jul 06, 2020 | Suhan S |

ಮುಂಬಯಿ, ಜು. 5: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎರಡು ಲಕ್ಷ ದಾಟಿದೆ. ಸೋಂಕಿನ ಮೊದಲ ಪ್ರಕರಣ ಕಂಡುಬಂದ 98 ದಿನಗಳಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪಿತ್ತು. ಆ ಬಳಿಕ 20 ದಿನಗಳಲ್ಲಿ 1 ಲಕ್ಷ ಹೆಚ್ಚಾಗಿದೆ.

Advertisement

ಕಳೆದ 20 ದಿನಗಳಲ್ಲಿ ಕೊರೊನಾದ ಬೆಳವಣಿಗೆಯಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಕೇವಲ 20 ದಿನಗಳಲ್ಲಿ ರೋಗಿಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 7,074 ಸೋಂಕಿತರನ್ನು ಆಸ್ಪತ್ರೆಗೆನೋಂದಾಯಿಸಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,00,064ಕ್ಕೆ ತಲುಪಿದೆ. ಕಳೆದ 2 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿಗೆ 295 ಮಂದಿ ಬಲಿಯಾಗಿದ್ದಾರೆ. ಈವರೆಗೆ 8,671 ರೋಗಿಗಳು ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 83,295 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬಯಿಯಲ್ಲಿ 24,936, ಥಾಣೆ ಜಿಲ್ಲೆ 26,727, ಪುಣೆಯಲ್ಲಿ 13,051 ರೋಗಿಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲ್ಯಾಣ್‌ -ಡೊಂಬಿವಲಿ 633, ಥಾಣೆ 379, ನವಿಮುಂಬಯಿ 271 ಮತ್ತು ಉಲ್ಲಾಸ್‌ ನಗರದಲ್ಲಿ 224 ಪ್ರಕರಣಗಳು ಒಂದೇ ದಿನ ದಾಖಲಾಗಿವೆ.

ಮುಂಬಯಿಯಲ್ಲಿ ಶನಿವಾರ 1,180 ಹೊಸ ಸೋಂಕಿತರನ್ನು ದಾಖಲಿಸಲಾಗಿದೆ. 68 ಸೋಂಕಿತರು ಸಾವನ್ನಪ್ಪಿದ್ದಾರೆ. ಮುಂಬಯಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 82,000 ದಾಟಿದೆ. ನಗರದಲ್ಲಿ ಸಾವಿನ ಸಂಖ್ಯೆ 4,827 ತಲುಪಿದೆ. ಕೊರೊನಾ ಚಿಕಿತ್ಸೆಯಿಂದ ಗುಣಮುಖರಾದ 1,071 ಸೋಂಕಿತರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 53,463 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next