Advertisement
ಜಿಲ್ಲೆಯಲ್ಲಿ 89 ಪಾಸಿಟಿವ್ ಕೇಸ್ ಬಂದಿತ್ತು. ಜ್ಯುಬಿಲಿಯಂಟ್ ಕಾರ್ಖಾನೆಯ 1,700 ಮಂದಿ ನೌಕರರಲ್ಲಿ 73 ಮಂದಿಗೆ ಪಾಸಿಟೀವ್ ಕಾಣಿಸಿಕೊಂಡಿದ್ದರಿಂದ ಸೋಂಕಿತರ ಸಂಖ್ಯೆ ಶೇ.5ರಷ್ಟಾಗಿತ್ತು. ಇನ್ನೂ ಉಸಿರಾಟದ ತೊಂದರೆಯಿದ್ದ 300 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 2 ಪಾಸಿಟಿವ್ ಎಂದು ದೃಢವಾಯಿತು. ಆದರೆ, ಐಎಲ್‌ಐ ನ 60ಕ್ಕೂ ಹೆಚ್ಚು ಮಂದಿ ಹಾಗೂ ಗರ್ಭಿಣಿಯರನ್ನು ಟೆಸ್ಟ್ ಮಾಡಿದಾಗ ಒಂದೂ ಪಾಸಿಟಿವ್ ಬಂದಿಲ್ಲ ಎಂದು ಹೇಳಿದರು.
ಮತ್ತು ಮಂಗಳವಾರ ಸುಮಾರು 200 ಮಂದಿಯ ಟೆಸ್ಟ್ ನಡೆದಿದೆ. ಇದರೊಂದಿಗೆ ಮಂಡ್ಯ, ಕೊಡಗು ಜಿಲ್ಲೆ ಗಳಿಂದಲೂ ಸ್ಯಾಂಪಲ್ ಕಳುಹಿಸುತ್ತಿದ್ದಾರೆ. ಲ್ಯಾಬ್ ಸಿಬ್ಬಂದಿ ಶ್ರಮ ವಹಿಸಿ ದಿನಕ್ಕೆ 300ಕ್ಕಿಂತ ಹೆಚ್ಚು ಸ್ಯಾಂಪಲ್‌ಟೆಸ್ಟ್ ನಡೆಸುತ್ತಿದ್ದಾರೆ. ನಮ್ಮಲ್ಲಿ ವೈದ್ಯರು ವೆಂಟಿಲೇಷನ್ ಬಳಸದೆ ಹೈ ಫ್ಲೋ ಆಕ್ಸಿಜನ್ ಥೆರಪಿ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳು ಗುಣಮುಖರಾಗುತ್ತಿದ್ದಾರೆ. ಇದಕ್ಕೆ ಕೋವಿಡ್ 19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯ ಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ಬೆಂಗಳೂರಿನ ವೈದ್ಯರು ನಮ್ಮ ಕೋವಿಡ್-19 ಆಸ್ಪತ್ರೆ ವೈದ್ಯರೊಂದಿಗೆ ಪ್ರತಿ ದಿನ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಚಿಕಿತ್ಸೆ ನೀಡುವ ಪದ್ಧತಿಯನ್ನು ಸರ್ಕಾರ ತಂದಿದೆ. ಅದರಂತೆ ಚರ್ಚಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ದೇಶಗಳಲ್ಲಿ ರೋಗಿಗಳಿಗೆ ವೆಂಟಿಲೇಷನ್ ಮಾಡಿದಾಗ ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದನ್ನು ನೋಡಿದ್ದೇವೆ. ಹೀಗಾಗಿ ಆದಷ್ಟು
ವೆಂಟಿಲೇಷನ್ ಕಡಿಮೆ ಮಾಡಿ “ಹೈ ಫ್ಲೋ ಆಕ್ಸಿಜನ್ ಥೆರಪಿ’ ಅಂತಹ ಮಾಸ್ಕ್ ಮೂಲಕ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಆಕ್ಸಿಜನ್ ಅನ್ನು ಹೈ ಫ್ಲೋ ನಲ್ಲಿ ಕೊಡುವ ಮೂಲಕ ಚಿಕಿತ್ಸೆ ನೀಡುವುದಕ್ಕೆ ಟೆಲಿ ಮೆಡಿಸಿನ್ ಕ್ರಿಟಿಕಲ್ ಕೇರ್ ಯೂನಿಟ್ ನವರು ಸೂಚಿಸಿದ್ದಾರೆ ಎಂದರು.