Advertisement
ವರ್ಷದಿಂದ ವರ್ಷಕ್ಕೆ ಕಡಿಮೆ: ಕಳೆದವರ್ಷ ಜಿಲ್ಲೆಯಲ್ಲಿ ಬರೋಬ್ಬರಿ 248ಮಂದಿಯಲ್ಲಿ ಹೆಚ್‌ಐವಿ ಸೋಂಕು ಕಾಣಿಸಿಕೊಂಡರೆ, ಈ ವರ್ಷ ಕೇವಲ 143ಮಂದಿಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿ ರುವುದು ಜಿಲ್ಲೆಯಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.ವರ್ಷದಿಂದ ವರ್ಷಕ್ಕೆ ಸೋಂಕು ಪ್ರಮಾಣಕಡಿಮೆ ಆಗುತ್ತಿರುವುದು ಆರೋಗ್ಯಇಲಾಖೆಗೆ ಸಮಾಧಾನ ತಂದಿದ್ದು, ಸೋಂಕಿತರ ಪ್ರಮಾಣ ಶೂನ್ಯಕ್ಕೆ ತರುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.ಕಳೆದ 2019ರ ಎಪ್ರೀಲ್‌ರಿಂದ 2019ರಅಕ್ಟೋಬರ್ ಅಂತ್ಯದವರೆಗೂ ಒಟ್ಟು ಜಿಲ್ಲೆಯಲ್ಲಿ 54,290 ಮಂದಿ ಗುರಿ ಪೈಕಿಹೆಚ್‌ಐವಿ ಪರೀಕ್ಷೆಗೆ 27,893 ಮಂದಿಯನ್ನುಒಳಪಡಿಸಿದ್ದು, ಆ ಪೈಕಿ 143 ಮಂದಿಗೆ ಹೆಚ್‌ಐವಿ ಇರುವುದು ದೃಢಪಟ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸರಿ ಸುಮಾರು100ಕ್ಕೂ ಹೆಚ್ಚು ಹೆಚ್‌ಐವಿ ಪ್ರಕರಣಗಳುಇಳಿಮುಖವಾಗಿರುವುದು ಕಂಡು ಬಂದಿದೆ.
Related Articles
Advertisement
ಗೌರಿಬಿದನೂರು, ಚಿಂತಾಮಣಿ ಟಾಪ್: ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಹಾಗೂ ಹಾಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಜಿಲ್ಲೆಯ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕುಗ ಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 878 ಮಂದಿ ರೋಗಿಗಳಿದ್ದರೆ, ಈ ವರ್ಷ ಹೊಸದಾಗಿ 25 ಪ್ರಕರಣಗಳು ಬೆಳಕಿಗೆ ಬಂದಿವೆ. ಆದೇ ರೀತಿ ಗೌರಿಬಿದನೂರಿಲ್ಲಿ ಒಟ್ಟು 754 ಮಂದಿ ರೋಗಿಗಳು ಈಗಾಗಲೇ ಎಆರ್‌ಟಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದು, ಈ ವರ್ಷ ಹೊಸದಾಗಿ 33 ಮಂದಿಯಲ್ಲಿ ಹೆಚ್‌ಐವಿ ಇರುವುದುದೃಢಪಟ್ಟಿದೆ.
-ಕಾಗತಿ ನಾಗರಾಜಪ್ಪ