Advertisement
ಮಣಿಪಾಲದ ಮಾಹೆ, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಎಂಇಎಂಜಿ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ., ಡಾ| ಟಿಎಂಎ ಪೈ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈಯವರ 126ನೇ ಜನ್ಮದಿನ) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾಮತ್ ಅವರು ಮಾತನಾಡಿದರು.
Related Articles
Advertisement
ಡಾ| ಎಚ್.ಎಸ್. ಬಲ್ಲಾಳ್ ಸ್ವಾಗತಿಸಿದರು. ಮಾಹೆ ಕುಲಸಚಿವ ಡಾ| ಪಿ. ಗಿರಿಧರ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಸಹಕುಲಪತಿ ಡಾ| ಎನ್.ಎನ್. ಶರ್ಮ ವಂದಿಸಿದರು. ಎಂಐಟಿ ಸಹಾಯಕ ಪ್ರಾಧ್ಯಾಪಕ ಡಾ| ಪ್ರವೀಣ್ ಕೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪಿಗ್ಮಿ, ಮ್ಯೂಚುವಲ್ ಫಂಡ್ ಸಾರ್ವಕಾಲಿಕ ಸಾಮರ್ಥ್ಯಡಾ| ಟಿಎಂಎ ಪೈಯವರು ಸಿಂಡಿಕೇಟ್ ಬ್ಯಾಂಕ್ ಮೂಲಕ ಜಾರಿಗೊಳಿಸಿದ ಪಿಗ್ಮಿ ಉಳಿತಾಯ ಖಾತೆ ಯೋಜನೆ ನನ್ನ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ ಎಂದು ಕೆ.ವಿ. ಕಾಮತ್ ಹೇಳಿದರು. ನಾನು ಐಸಿಐಸಿಐ ಬ್ಯಾಂಕ್ ಮುಖ್ಯಸ್ಥನಾದಾಗ 1990ರ ದಶಕದಲ್ಲಿ 100 ಶಾಖೆಗಳಿದ್ದವು. ಅನಂತರ ಇತರ ಬ್ಯಾಂಕ್‌ಗಳು ಐಸಿಐಸಿಐ ಬ್ಯಾಂಕ್‌ನೊಂದಿಗೆ ವಿಲೀನಗೊಂಡು ವ್ಯವಹಾರ ವಿಸ್ತರಣೆಯಾಯಿತು. ನಾನು ಎಲ್ಲ ಸಿಬಂದಿಗಳ ಸಭೆ ಕರೆದು ಏಜೆಂಟರ ಮೂಲಕ ಸಣ್ಣ ಸಣ್ಣ ಮೊತ್ತವನ್ನು ಸಂಗ್ರಹಿಸಲು ಹೇಳಿದೆ. ಇದೇ ಮೊತ್ತವನ್ನು ದ್ವಿಚಕ್ರ ವಾಹನ, ಕಾರು, ಮನೆ ನಿರ್ಮಾಣಕ್ಕೆ ಸಾಲ ಕೊಡುತ್ತಿದ್ದೆವು. ನನಗೆ ಈ ಧೈರ್ಯ ಬಂದುದು ಡಾ| ಟಿಎಂಎ ಪೈಯವರು ಆರಂಭಿಸಿದ ಪಿಗ್ಮಿ ಯೋಜನೆಯಿಂದ. ಬ್ಯಾಂಕ್‌ನ ನೇರ ಉದ್ಯೋಗ ಸೃಷ್ಟಿಗಿಂತ ಪಿಗ್ಮಿ ಯೋಜನೆಯಿಂದ ಆದ ಪರೋಕ್ಷ ಉದ್ಯೋಗ ಸೃಷ್ಟಿ ಅಪಾರ. ಇವರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ. ಎಸ್‌ಐಪಿ ಮ್ಯೂಚುವಲ್ ಫಂಡ್ ಯೋಜನೆಯೂ ಇದೇ ರೀತಿ. ಈ ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ದಶಕಗಳ ಹಿಂದೆಯೇ ಕಾರ್ಯಗತಗೊಳಿಸಿದವರು ಡಾ| ಪೈಯವರು ಎಂದು ಕಾಮತ್ ಬೆಟ್ಟು ಮಾಡಿದರು. ಡಾ| ಪೈಯವರನ್ನು ಆಮಂತ್ರಿಸಿದ್ದ
ಕೆ.ವಿ. ಕಾಮತ್
ನಾನು ಸುರತ್ಕಲ್ ಎನ್‌ಐಟಿಕೆ ಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆ ಯುವಾಗ ವಾರ್ಷಿಕೋತ್ಸವಕ್ಕೆ ಡಾ| ಟಿಎಂಎ ಪೈಯವರನ್ನು ಕರೆಯಲು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಮಣಿಪಾಲಕ್ಕೆ ಬೈಕ್‌ನಲ್ಲಿ ಬಂದಿದ್ದೆ. ಆಗ ಡಾ| ಪೈಯವರು ಆಮಂತ್ರಣವನ್ನು ಒಪ್ಪಿ ನನ್ನ ಹಿನ್ನೆಲೆಯನ್ನು ಕೇಳಿ ಊಟ
ಮಾಡಿಕೊಂಡು ಹೋಗಲು ಹೇಳಿದರು. ಕಾರ್ಯಕ್ರಮಕ್ಕೂ ಬಂದು ಶುಭಕೋರಿದ್ದರು ಎಂದು ಕಾಮತ್ ನೆನಪಿಸಿಕೊಂಡರು.