Advertisement

ಕೋವಿಡ್‌ 19 ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ

07:59 AM May 19, 2020 | Lakshmi GovindaRaj |

ಹಾಸನ: ಮಹಾರಾಷ್ಟ್ರದಿಂದ ಬಂದವರಲ್ಲಿ ಕೋವಿಡ್‌ 19 ಪಾಟಿಸಿವ್‌ ಪ್ರಕರಣಗಳು ಪ್ರತಿ ದಿನವೂ ವರದಿಯಾಗುತ್ತಿದ್ದು, ಸೋಮವಾರ ನಾಲ್ವರಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಈಗ 30ಕ್ಕೇರಿದೆ. ಮಹಾರಾಷ್ಟ್ರದಿಂದ ಬಂದಿರುವ ಚನ್ನರಾಯ ಪಟ್ಟಣ ತಾಲೂಕು ಒಂದೇ ಕುಟುಂಬದ ಮೂವರಲ್ಲಿ ಕೋವಿಡ್‌ 19 ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ದ ಹೊಳೆನರಸೀಪುರ ತಾಲೂಕಿನ  ಹಳ್ಳಿಯೊಂದರ 17 ವರ್ಷದ ಶಾಲಾ ಬಾಲಕನಿಗೂ ಸೋಂಕು ದೃಢಪಟ್ಟಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಕೋವಿಡ್‌ 19 ಪ್ರಕರಣ ಗಳ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು, ಚನ್ನರಾಯಪಟ್ಟಣ ತಾಲೂಕಿನ  ಮೂಲದ 40 ವರ್ಷದ ಮಹಿಳೆ, 29 ವರ್ಷದ ಮಹಿಳೆ ಹಾಗೂ 34 ವರ್ಷದ ಪುರುಷನಲ್ಲಿ ಕೋವಿಡ್‌ 19 ಪತ್ತೆಯಾಗಿದೆ. ಮೇ12 ರಂದು ಮಹಾರಾಷ್ಟ್ರ ರಾಜ್ಯದಿಂದ 5 ಜನರು ಕಾರಿನಲ್ಲಿ ಬಂದಿದ್ದು, ಅವರಲ್ಲಿ ಈಗ  ಮೂವರಿಗೆ ಕೋವಿಡ್‌ 19  ದೃಢಪಟ್ಟಿದೆ.

ಇಬ್ಬರು ಮಕ್ಕಳ ವರದಿ ನೆಗೆಟಿವ್‌ ಎಂದು ಬಂದಿದೆ. ಸೋಂಕು ದೃಢಪಟ್ಟಿರುವ ಹೊಳೆನರಸೀಪುರ ತಾಲೂಕು ಮೂಲದ 17 ವರ್ಷದ ಬಾಲಕ ಕಾರಿನಲ್ಲಿ ಐವರೊಂದಿಗೆ ಮೇ14ರಂದು ಬಂದಿದ್ದ. ಆತನನ್ನು ಹೊಳೆನರಸೀಪುರ  ತಾಲೂಕು ದೊಡ್ಡ ಕಾಡನೂರು ಕ್ವಾರಂಟೈನ್‌ ಕೇಂದ್ರದಲ್ಲಿದ್ದ. ಇನ್ನು ನಾಲ್ವರು ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಗೆ ಹೋಗಿದ್ದಾರೆ ಎಂದು ವಿವರ ನೀಡಿದರು.

ಹಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ: ಎಲ್ಲ ನಾಲ್ವರು ಸೋಂಕಿತರನ್ನು ಹಾಸನದ ಹಿಮ್ಸ್‌ನ ಕೋವಿಡ್‌ 19 ಆಸ್ಪತ್ರೆಗೆ ದಾಖಲು ಮಾಡಲಾ ಗಿದೆ. ಹಿಮ್ಸ್‌ ಆಸ್ಪತ್ರೆಯಲ್ಲಿ 30 ಸೋಂಕಿತ ರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 470 ಜನರ ಪರೀûಾ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ವಲಸೆ ಕಾರ್ಮಿಕರಿಗೆ ನೆರವು: ಮೇ 17 ರಂದು ರಾತ್ರಿ ಹಾಸನ ರೈಲು ನಿಲ್ದಾಣದಿಂದ 1,440 ಜನ ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ರೈಲಿನ ಮುಖಾಂತರ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿ,  ಆಹಾರವನ್ನು ಒದಗಿಸಿ ಕಳುಹಿಸ ಲಾಗಿದೆ. ಉಳಿದವರಿಗಾಗಿ ಮತ್ತೂಂದು ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ಮೇ 19ರಂದು ಮಧ್ಯಪ್ರದೇಶ ಮೂಲದ 120ಜನ ವಲಸೆ ಕಾರ್ಮಿಕರನ್ನು ಬೆಂಗಳೂರಿನ ಮೂಲಕ ಅವರ  ಸ್ವಂತ ಊರಿಗೆ ಕಳುಹಿಸ ಲಾಗುತ್ತಿದೆ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್‌, ಉಪಭಾಗಾಧಿಕಾರಿ ಡಾ. ನವೀನ್‌ ಭಟ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ದ್ದರು.

ಈವರೆಗೂ ಹೊರರಾಜ್ಯ ಗಳಿಂದ ಬಂದಿರುವ 294 ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು 878 ಜನರನ್ನು ಹಾಸ್ಟೆಲ್‌ ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಪ್ರಯಾಣಿಸುವ ಪಾಸ್‌ ಪಡೆಯುವ ಸೇವಾ  ಸಿಂಧು ಆ್ಯಪ್‌ನಲ್ಲಿ ಕಂಡು ಬಂದಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ.
-ಆರ್‌. ಗಿರೀಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next