Advertisement

ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 216ಕ್ಕೆ ಏರಿಕೆ

09:27 AM Apr 13, 2020 | Sriram |

ಬೆಂಗಳೂರು: ಬೆಂಗಳೂರಿನ ವೈದ್ಯ ಸಹಿತ ರಾಜ್ಯದಲ್ಲಿ ಶನಿವಾರ ಹೊಸ ದಾಗಿ 8 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.

Advertisement

ಒಟ್ಟು 216 ಮಂದಿಯಲ್ಲಿ 6 ಮಂದಿ ಸಾವಿಗೀಡಾಗಿದ್ದು, 39 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬಾಕಿ 171 ಮಂದಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿರುವ ಸೋಂಕಿತರ ಪೈಕಿ ಬೆಂಗಳೂರಿನ ನಾಲ್ಕು ಮಂದಿ ಹಿರಿಯ ನಾಗರಿಕರು ತುರ್ತು ನಿಗಾ ಘಟಕ ದಲಿ ದ್ದಾರೆ. ಒಬ್ಬರು ಗರ್ಭಿಣಿ ಬಗ್ಗೆ ಪ್ರತ್ಯೇಕ ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ. ಬಹುತೇಕರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶನಿವಾರ ಸೋಂಕು ದೃಢಪಟ್ಟವರ ಪೈಕಿ 5 ಮಂದಿ ಮೈಸೂರಿನವರು, ಇಬ್ಬರು ಬೆಂಗಳೂರಿನವರು ಹಾಗೂ ಒಬ್ಬರು ಬೀದರ್‌ನವರಾಗಿದ್ದಾರೆ. ಈ ಎಲ್ಲ ಸೋಂಕು ದೃಢವಾದ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಅವರೆಲ್ಲರನ್ನೂ ಶಂಕಿತರು ಎಂದು ಗುರುತಿಸಿ ಮನೆ ಹಾಗೂ ಆಸ್ಪತ್ರೆಯಲ್ಲಿ ನಿಗಾ ವಹಿಸಲಿದ್ದು, ಕಡ್ಡಾಯವಾಗಿ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಲಿದೆ.

ವೈದ್ಯನಿಗೂ ಕೋವಿಡ್ 19 ಸೋಂಕು
ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 32 ವರ್ಷದ ವೈದ್ಯನಿಗೂ ಕೋವಿಡ್ 19 ಸೋಂಕು ತಗಲಿದೆ. ಈ ಹಿಂದೆ ಯಾವುದೇ ವಿದೇಶ ಪ್ರವಾಸ ಹಿನ್ನೆಲೆ ಇಲ್ಲದ, ಉಸಿರಾಟ ತೊಂದರೆ ಯಿಂದ ಬಳಲುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿ ಯಲ್ಲಿ ಕೋವಿಡ್ 19  ಸೋಂಕು ದೃಢ ಪಟ್ಟಿತ್ತು. ಬಳಿಕ ಆ ವ್ಯಕ್ತಿಯ ಸೋಂಕು ದೃಢವಾಗುವುದಕ್ಕೂ ಮುಂಚೆ ಯಾವ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೊಳಗಾಗಿದ್ದ ಎಂದು ಪತ್ತೆಹಚ್ಚಿ ಆ ವೈದ್ಯರನ್ನೂ ಪರೀಕ್ಷೆ ಗೊಳಪಡಿಸಿದ್ದು, ಒಬ್ಬ ವೈದ್ಯನಲ್ಲಿ ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಸಮಯ ಆ ವ್ಯಕ್ತಿ ಯೊಂದಿಗಿನ ನೇರ ಸಂಪರ್ಕವೇ ವೈದ್ಯ ನಿಗೆ ಸೋಂಕು ತಗಲಿರುವುದಕ್ಕೆ ಕಾರಣ. ಆ ವೈದ್ಯನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಕಲ ಬುರಗಿಯಲ್ಲಿಯೂ ತಪಾಸಣೆ ಮಾಡಿದ ವೈದ್ಯರೊಬ್ಬರಿಗೆ ಸೋಂಕು ತಗಲಿತ್ತು. ಬಳಿಕ ಅವರ ಹೆಂಡತಿಗೂ ಸೋಂಕು ಹರಡಿತ್ತು.

Advertisement

ಐದು ಮಂದಿ ಗುಣಮುಖ
ಶನಿವಾರ ಬೆಂಗಳೂರಿನಲ್ಲಿ ನಾಲ್ಕು ಮಂದಿ, ಮೈಸೂರಿನಲ್ಲಿ ಒಬ್ಬ ಕೋವಿಡ್ 19 ಸೋಂಕಿತ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮುಂದಿನ 14 ದಿನ ಮನೆಯಲ್ಲಿ ಕ್ವಾರಂಟೈನ್‌ ಇರಲು ವೈದ್ಯರು ಸೂಚಿಸಿದ್ದಾರೆ. ಇಲ್ಲಿಯವರೆಗೂ ರಾಜ್ಯದಲ್ಲಿ 39 ಮಂದಿ ಸೋಂಕಿತರು ಗುಣಮುಖರಾದಂತಾಗಿದೆ.

– ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ಅವಲೋಕನದಲ್ಲಿರುವ ವರು-20,997. ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು -2,175, ದ್ವಿತೀಯ ಸಂಪರ್ಕಿತರು – 7,070.
– ಆಸ್ಪತ್ರೆಗೆ ಶನಿವಾರ ದಾಖಲಾದ ಶಂಕಿತರು – 129,  ಬಿಡುಗಡೆಯಾದವರು – 50, ಸದ್ಯ ಆಸ್ಪತ್ರೆಯಲ್ಲಿರುವ ಶಂಕಿತರು
– 571.
– ಶನಿವಾರ ನೆಗೆಟಿವ್‌ ಬಂದ ವರದಿ ಗಳು – 558, ಪಾಸಿಟಿವ್‌ ಬಂದ ವರದಿ ಗಳು – 08 ( ಈ ವರೆಗೂ ಒಟ್ಟಾರೆ ನೆಗೆಟಿವ್‌ -8,231 , ಪಾಸಿಟಿವ್‌ – 215).
– ಶಂಕಿತರ ಪೈಕಿ ಶನಿವಾರ ಸೋಂಕು ಪರೀಕ್ಷೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿಗಳು – 585.
– ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ 19 ಸೋಂಕಿತರು – 170

Advertisement

Udayavani is now on Telegram. Click here to join our channel and stay updated with the latest news.

Next