Advertisement

ಅಣ್ವಸ್ತ್ರ ಸಜ್ಜಿತ ಸಬ್‌ಮೆರೀನ್‌ ಪಾಕಿಸ್ಥಾನದ ಗಡಿಯಲ್ಲಿ ಸಿದ್ಧ

02:38 AM Mar 18, 2019 | |

ಹೊಸದಿಲ್ಲಿ: ಪುಲ್ವಾಮಾ ದಾಳಿಯ ನಂತರ ಯಾವುದೇ ಸನ್ನಿವೇಶವನ್ನೂ ಎದುರಿಸುವುದಕ್ಕಾಗಿ ನೌಕಾಪಡೆಯ ಐಎನ್‌ಎಸ್‌ ವಿಕ್ರಮಾದಿತ್ಯ, ಅಣ್ವಸ್ತ್ರ ಸಜ್ಜಿತ ಸಬ್‌ಮೆರಿನ್‌ಗಳು ಹಾಗೂ ಇತರ ಹಡಗುಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯುದ್ಧ ಹಡಗುಗಳು ಹಾಗೂ ಸಬ್‌ಮೆರಿನ್‌ಗಳು ಕವಾಯತು ಸಿದ್ಧತೆಯಲ್ಲಿದ್ದವು. ಆದರೆ ಘಟನೆ ನಡೆದ ಅನಂತರ ಕವಾಯತು ರದ್ದು ಗೊಳಿಸಲಾಯಿತು. ನೌಕಾ ಪಡೆಯ 60 ಹಡಗುಗಳು, ಕರಾವಳಿ ಪಡೆಯ 12 ಹಡಗುಗಳು ಮತ್ತು ಸುಮಾರು 80 ಯುದ್ಧ ವಿಮಾನ ವಾಹಕಗಳು ಸಿದ್ಧವಾಗಿವೆ. ಟ್ರೊಪೆಕ್ಸ್‌ ಕವಾಯತಿಗೆ ಸಿದ್ಧವಾಗಿದ್ದ ಈ ಇಡೀ ತಂಡವನ್ನು ಸ್ಥಳಾಂತರಿಸಲು ಅನುಕೂಲವಾಗಿದೆ. ಭಾರತೀಯ ನೌಕಾಪಡೆಯ ಸುಸಜ್ಜಿತ ವ್ಯವಸ್ಥೆಯಿಂದಾಗಿ ಪಾಕಿಸ್ಥಾನದ ನೌಕಾಪಡೆ ಯಾವುದೇ ಜಲ ಗಡಿ ಮೀರುವ ಪ್ರಯತ್ನ ಮಾಡಲೂ ಸಾಧ್ಯವಾಗಲಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next