Advertisement

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಕಾವು

04:34 PM May 21, 2018 | Team Udayavani |

ಕಲಬುರಗಿ: ಈಗಷ್ಟೇ ಮುಗಿದಿರುವ ರಾಜ್ಯ ವಿಧಾನಸಭೆ ಚುನಾವಣೆ ನಂತರ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಎದುರಾಗಿದೆ.

Advertisement

ಬರುವ ಜೂನ್‌ 8ರಂದು ನಡೆಯುವ ಚುನಾವಣೆಗೆ ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತೀವ್ರ ಕಸರತ್ತು ನಡೆಸಿವೆ.  ಬಿಜೆಪಿಯಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಹಾಲಿ ಸದಸ್ಯ ಅಮರನಾಥ ಪಾಟೀಲ ಅವರಿಗೆ ಎರಡನೇ ಬಾರಿಗೆ ಅವಕಾಶ ನೀಡದೆ ಬಳ್ಳಾರಿಯ ಕೆ.ಬಿ. ಶ್ರೀನಿವಾಸ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಶ್ರೀನಿವಾಸ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. 

ಹೊಸಪೇಟೆ ಉದ್ಯಮಿ, ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಕೆ.ಬಿ. ಶ್ರೀನಿವಾಸ ಶನಿವಾರ ಇಲ್ಲಿನ ಪ್ರಾದೇಶಿಕ ಕಚೇರಿಯಲ್ಲಿ ಚುನಾವಣಾ ಧಿಕಾರಿ ಆಗಿರುವ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಅವರಿಗೆ ಶ್ರೀನಿವಾಸ ನಾಮಪತ್ರ ಸಲ್ಲಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ನಮೋಶಿ, ಎಚ್‌ಕೆಸಿಸಿಐ ಅಧ್ಯಕ್ಷ
ಉಮಾಕಾಂತ ನಿಗ್ಗುಡಗಿ, ಕೆ.ಬಿ. ಶ್ರೀನಿವಾಸ ಅವರ ಧರ್ಮಪತ್ನಿ ರಾಣಿ ಸಂಯುಕ್ತಾದೇವಿ ಮತ್ತಿತರರು ಇದ್ದರು.

ಗೆಲುವು ನಿಶ್ಚಿತ: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಹಿಂದಿನಿಂದ ಬಿಜೆಪಿ ಗೆಲ್ಲುತ್ತಾ ಬಂದಿದೆ. “ಶನಿವಾರ ಪುನರ್ವಸು ನಕ್ಷತ್ರದ ಶುಭದಿನವಾಗಿದ್ದರಿಂದ ನಾಮಪತ್ರ ಸಲ್ಲಿಸಲಾಗಿದೆ. ಈ ಬಾರಿಯೂ ತಮ್ಮದೇ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶ್ರೀನಿವಾಸ ಅವರು, ಈ ಭಾಗದ ವಿದ್ಯಾರ್ಥಿ,
ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೇಲ್ಮನೆಯಲ್ಲಿ ಧ್ವನಿಯೆತ್ತಿ ಪರಿಹಾರ ಕಲ್ಪಿಸಲು ಸ್ಪರ್ಧಿಸುತ್ತಿದ್ದೇನೆ. ಪದವೀಧರ ಮತದಾರರು ಆಶೀರ್ವದಿಸಲಿದ್ದಾರೆಂಬ ವಿಶ್ವಾಸವಿದೆ. ಪಕ್ಷದ ಮುಖಂಡರು ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next