Advertisement
ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸಿನ ಮೇರೆಗೆ ಉಡುಪಿ ನಗರಸಭಾ ವ್ಯಾಪ್ತಿಯ ಮೂಡುಬೆಟ್ಟು ವಾರ್ಡಿನಲ್ಲಿ 45ಲಕ್ಷ ರೂ. ಅನುದಾನದಲ್ಲಿ ರಸ್ತೆಯ ಫೇವರ್ ಫಿನಿಶ್ ಕಾಮಗಾರಿ ಎರಡು ಮೂರು ದಿನದ ಹಿಂದೆ ಆರಂಭಗೊಂಡಿತ್ತು. ಮೂಡುಬೆಟ್ಟು ಜಂಕ್ಷನ್‌ನಿಂದ ಆದಿವುಡುಪಿಯವರೆಗೆ ಡಾಮರನ್ನು ಹಾಕಲಾಗಿತ್ತು. ನಾಗನಕಟ್ಟೆಯಿಂದ ಮೂಡುಬೆಟ್ಟು ಜಂಕ್ಷನ್‌ವರೆಗೆ ಮಾರನೇ ದಿನವೇ ಕುಡ್ಸೆಂಪ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಸುವುದಕ್ಕೆ ರಸ್ತೆಯ ಬದಿಯಲ್ಲಿ ಹೊಂಡ ತೆಗೆಯಲು ಆರಂಭಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಬದಿ ಅಗೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದ ತತ್‌ಕ್ಷಣ ಗುತ್ತಿಗೆದಾರರನ್ನು ವಿಚಾರಿಸಲಾಗಿದೆ. ಪೈಪ್‌ಲೈನ್ ಅಳವಡಿಸಿದ ತತ್‌ಕ್ಷಣ ಹೊಂಡವನ್ನು ಮುಚ್ಚಿ ರಸ್ತೆಗೆ ಬಿದ್ದ ಮರಳನ್ನು ತೆರವುಗೊಳಿಸಿ ಸರಿಪಡಿಸಿಕೊಡಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಒಂದು ಹಂತದ ಡಾಮರೀಕರಣದ ಕೆಲಸ ಮಾತ್ರ ನಡೆದಿದೆ. ಪೇವರ್ ಫಿನಿಶ್ ಕೆಲಸ ಇನ್ನಷ್ಟೆ ಆಗಬೇಕಿದೆ.
-ಶ್ರೀಶ ಕೊಡವೂರು, ನಗರಸಭಾ ಸದಸ್ಯರು, ಮೂಡುಬೆಟ್ಟು ವಾರ್ಡ್