Advertisement

ರೋಬೋಗಳೇ ಸುದ್ದಿ ಬರೀತವೆ!

08:30 AM Jul 08, 2017 | Team Udayavani |

ಲಂಡನ್‌: ವಿವಿಧ ತಾಂತ್ರಿಕ ಕೆಲಸಗಳಲ್ಲಿ ರೊಬೋಟ್‌ಗಳು ಮಾನವರ ಕೆಲಸಗಳನ್ನು ಈಗಾಗಲೇ ಕಸಿದುಕೊಂಡಿವೆ. ಜಗತ್ತು ರೊಬೋ ಕಾಲಕ್ಕೆ ಕಾಲಿಡುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಬ್ರಿಟನ್‌ನಲ್ಲಿ ರೊಬೋಟ್‌ ಸುದ್ದಿ ಬರೆಯಲೂ ಕೂರಲಿವೆ!

Advertisement

ಬ್ರಿಟನ್‌ನ ಪ್ರಸ್‌ ಅಸೋಸಿಯೇಷನ್‌ (ಪಿಎ) ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಐರೆಲಂಡ್‌ನ‌ಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸುದ್ದಿ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಇದರಲ್ಲೀಗ ರೊಬೋಟ್‌ಗಳನ್ನು ನೇಮಿಸಲು ಅದು ಸಿದ್ಧವಾಗಿದೆ. ದತ್ತಾಂಶ ಆಧರಿತವಾಗಿ ಸುದ್ದಿಗಳನ್ನು ರೊಬೋಟ್‌ಗಳ ಮೂಲಕ ಬರೆ ಸುವ ಸ್ಟಾರ್ಟಪ್‌ ಕಂಪನಿ ಉಬ್ಸ್ì ಮೀಡಿ ಯಾ ಸಹಯೋಗದಲ್ಲಿ 5 ರೊಬೋಟ್‌ ಪತ್ರ ಕ ‌ರ್ತರು ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡಲಿದ್ದು, ತಿಂಗಳಿಗೆ 30 ಸಾವಿರ ಸುದ್ದಿಗಳನ್ನು ಸ್ಥಳೀಯ ಮಾಧ್ಯಮಗಳಿಗೆ ನೀಡಲಿದೆಯಂತೆ. 

ಈ ಯೋಜನೆಗಾಗಿ ಪಿಎ, ಗೂಗಲ್‌ನಿಂದ 5.17 ಕೋಟಿ ರೂ.ಗಳ ನೆರವನ್ನೂ ಪಡೆದಿದೆ. ಪಿಎ ಮತ್ತು ಉಬ್ಸ್ì ಮೀಡಿಯಾಗಳು ರಿಪೋರ್ಟರ್ ಆ್ಯಂಡ್‌ ಡಾಟಾ ಆ್ಯಂಡ್‌ ರೊಬೋಟ್ಸ್‌ ಹೆಸರಿನ ವ್ಯವಸ್ಥೆ ಸ್ಥಾಪಿಸಲಿದ್ದು, ತಿಂಗಳಿಗೆ ಸಾವಿರಾರು ಸುದ್ದಿಗಳನ್ನು ಬರೆಯ ಲಿದೆ. ಮಾನವನಿಂದ ಹೊರತಾಗಿ ಕೃತಕ ಬುದ್ಧಿ ಮತ್ತೆ ಬಳಸಿ ರೊಬೋಟ್‌ಗಳು ಸುದ್ದಿ ಬರೆ ಯಲಿವೆ. ನುರಿತ ಪತ್ರಕರ್ತರು, ವ್ಯಾಪಕ ಜವಾಬ್ದಾರಿ ಹೊಂದಿದ್ದರೂ, ರೊಬೋಗಳ ಮೂಲಕ ಸುದ್ದಿ ಬರೆಸುವುದರಿಂದ ಹೆಚ್ಚಿನ ಸ್ಥಳೀಯ ಸುದ್ದಿ ಬರೆಸಲು ಸಾಧ್ಯ ಎಂದು ಪಿಎ ಸಂಪಾದ ಪೀಟ್‌ ಕ್ಲಿಫ್ಟನ್‌ ಹೇಳಿದ್ದಾರೆ. 

ಏನು ಬರೆಯುತ್ತವೆ? 
ಸದ್ಯ ರೊಬೋಟ್‌ಗಳಿಂದ ಉದ್ಯೋಗ ವಾರ್ತೆ, ಆರೋಗ್ಯ, ಅಪರಾಧ ಸುದ್ದಿಗಳು, ಇತರ ಸಾಮಾನ್ಯ ಸುದ್ದಿಗಳನ್ನು ಬರೆಸಲು ಉದ್ದೇಶಿಲಾಗಿದೆ. ಸರಕಾರಿ, ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪತ್ರಕರ್ತರೇ ಬರೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next