Advertisement

Mugila Mallige: ನವತಂಡದ ಮುಡಿಗೆ ಮುಗಿಲ ಮಲ್ಲಿಗೆ

08:14 PM Dec 04, 2024 | Team Udayavani |

ಹಳೆಯ ಟೈಟಲ್‌ಗ‌ಳನ್ನಿಟ್ಟುಕೊಂಡು ಹೊಸಬರು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಇದೇ ರೀತಿ ನಾಲ್ಕು ದಶಕಗಳ ಹಿಂದೆ ತೆರೆಕಂಡ ಹಿಟ್‌ಲಿಸ್ಟ್‌ ಸೇರಿರುವ “ಮುಗಿಲ ಮಲ್ಲಿಗೆ’ ಟೈಟಲ್‌ನಡಿ ಹೊಸಬರ ಚಿತ್ರವೊಂದು ಆರಂಭವಾಗಿದೆ. ಈಗಾಗಲೇ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ನಾಗರಾಜ್‌ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆರ್‌. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ತನ್ನ ತಮ್ಮನ ಸಾವಿಗೆ ಕಾರಣಳಾದ ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಖಳ ನಾಯಕನೊಂದಿಗೆ ನಾಯಕ ಹೇಗೆ ಹೋರಾಟ ನಡೆಸಿ, ತನ್ನ ಹುಡುಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದೇ ಮುಗಿಲ ಮಲ್ಲಿಗೆ ಚಿತ್ರದ ಕಥಾವಸ್ತು. ನಟ ಸನತ್‌ ಹಾಗೂ ಸಹನಾ ಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.

ಮುಗಿಲ ಮಲ್ಲಿಗೆ ಸಿನಿಮಾಗೆ ಹೊಸಕೋಟೆ ಸುತ್ತ ಮುತ್ತಲಿನ ಗಟ್ಟಿಗನಬ್ಬೆ, ಪೂಜೇನ ಅಗ್ರಹಾರ, ಕಂಬ್ಳಿಪುರ ಕಾಟೇರಮ್ಮ, ಭಕ್ತರಹಳ್ಳಿ ಮುಂತಾದ ಲೊಕೇಶನ್‌ಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ.

ಈ ಚಿತ್ರಕ್ಕೆ ಅಭಿನಂದನ್‌ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರೀ ಅವರ ಸಂಗೀತ, ರಾಜೀವ್‌ ಕೃಷ್ಣ ಅವರ ಸಾಹಿತ್ಯ, ವಿನಯ್‌ ಜಿ. ಆಲೂರು ಅವರ ಸಂಕಲನ, ಥ್ರಿಲ್ಲರ್‌ ಮಂಜು ಅವರ ಸಾಹಸ, ಮೋಹನ್‌ ಕುಮಾರ್‌ ಅವರ ಪ್ರಸಾದನ, ಮಲ್ಲಿಕಾ ರ್ಜುನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next