ಮಾತು ಅತಿ ಸ್ಪಷ್ಟವಾಗಿ ಕೇಳಿ ಬರುತ್ತಿದೆ.
Advertisement
ಜಿಎಸ್‌ಟಿಯಲ್ಲಿ ಕೃಷಿ ಉತ್ಪನ್ನಗಳು ಸೇರ್ಪಡೆಯಾಗಿಲ್ಲ. ನೋಂದಾಯಿತ ಬ್ರಾಡೆಂಡ್ ಸರಕು, ಸಂಸ್ಕರಣೆಗೊಳಪಟ್ಟವು ಮಾತ್ರ ನೂತನ ತೆರಿಗೆ ಪದ್ಧತಿಯ ವ್ಯಾಪ್ತಿಗೊಳಪಡುತ್ತಿವೆ. ಅನೇಕ ಕೃಷಿ ಉತ್ಪನ್ನಗಳು ಜಿಎಸ್‌ಟಿ ಅಡಿಯಲ್ಲಿ ಬರುವುದೇಇಲ್ಲ. ಜಿಎಸ್‌ಟಿ ಕುರಿತಂತೆ ಈವರೆಗೆ ಅಧಿಕೃತವಾಗಿ ಯಾವುದೇ ಸುತ್ತೋಲೆ ಬಂದಿಲ್ಲ. ಮೇಲಾಗಿ ಈ ಅವಧಿಯಲ್ಲಿ ಮಾರುಕಟ್ಟೆಗೆ ಯಾವುದೇ ಅವಕ ಬರುತ್ತಿಲ್ಲ. ಹಾಗಾಗಿ ಜಿಎಸ್‌ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಹಿವಾಟಿನ ಮೇಲೆ ಬೀರುವ ಅಥವಾ ಬೀರಬಹುದಾದ ಪರಿಣಾಮಗಳ ಬಗ್ಗೆ ಈಗಲೇ ಏನನ್ನೂ ಹೇಳಲಿಕ್ಕಾಗದು ಎನ್ನುತ್ತಾರೆ
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕ ಬಿ. ಆನಂದ್.
ಅಧಿಕೃತ ಸುತ್ತೋಲೆ ಬಂದ ನಂತರವೇ ಸ್ಪಷ್ಟ ಚಿತ್ರಣ ದೊರೆಯುತ್ತದೆ ಎನ್ನುತ್ತಾರೆ ಅವರು. ನೂತನ ಜಿ.ಎಸ್.ಟಿ.ಯಿಂದ ಸಣ್ಣ ಪ್ರಮಾಣದ ಹೋಟೆಲ್ ವಹಿವಾಟು ಮೇಲೆ ಭಾರೀ ಪರಿಣಾಮ ಉಂಟಾಗದು. ದಿನಸಿ ವಸ್ತುಗಳಲ್ಲಿ ಕೆಲವು
ಜಿ.ಎಸ್.ಟಿ. ವ್ಯಾಪ್ತಿಗೆ ಬರಲಿವೆ ಎಂಬ ಮಾಹಿತಿ ಇದೆ. ಮಳೆಯ ಕೊರತೆಯಿಂದ ಮಾರುಕಟ್ಟೆಗೆ ಬರುವ ತರಕಾರಿ ಕಡಿಮೆ. ಹಾಗಾಗಿ ಅವುಗಳ ಬೆಲೆ ಜಾಸ್ತಿಯಾಗಿ, ತಿನಿಸುಗಳ ಬೆಲೆ ಒಂದಷ್ಟು ಏರುಪೇರಾಗುತ್ತದೆ. ತರಕಾರಿ ಬೆಲೆ ಹೀಗೆಯೇ ಇರುತ್ತದೆ ಎನ್ನಲಿಕ್ಕಾಗದು. ಹಾಗಾಗಿ ತರಕಾರಿ ಬೆಲೆಯ ಆಧಾರದಲ್ಲಿ ತಿಂಡಿ, ಊಟದ ಬೆಲೆ
ಏರಿಳಿಕೆ ಮಾಡಲಿಕ್ಕೆ ಬರುವುದಿಲ್ಲ. ಈವರೆಗೆ ಜಿ.ಎಸ್.ಟಿ. ಯಿಂದಲೇ ಭಾರೀ ಎಫೆಕ್ಟ್ ಕಂಡು ಬಂದಿಲ್ಲ. ಮುಂದೆ ಹೇಗೋ ಕಾದು ನೋಡಬೇಕು ಎನ್ನುವುದು ಅಯೋಧ್ಯಾ ಹೋಟೆಲ್‌ನ ಶ್ರೀಧರ್ ಶೆಟ್ಟಿ ಅನಿಸಿಕೆ. ಜಿ.ಎಸ್.ಟಿ. ಬರುವ ಮುನ್ನ ಏಸಿ(ಹವಾನಿಯಂತ್ರಿತ) ಸೇವೆಗೆ ಶೇ.18 ರಷ್ಟು ಟ್ಯಾಕ್ಸ್ ಇತ್ತು. ಜಿ.ಎಸ್.ಟಿ.ಯಿಂದ ಅದು ಶೇ. 28ಕ್ಕೆ ಏರಿದೆ. ಸೌಲಭ್ಯ ಹೆಚ್ಚಾದಂತೆಲ್ಲಾ ಜಿಎಸ್‌ಟಿ ಅಪ್ಲೈ ಆಗುತ್ತಾ ಹೋಗುತ್ತದೆ. ವರ್ಷಕ್ಕೆ 20 ಲಕ್ಷಕ್ಕಿಂತಲೂ ಕಡಿಮೆ ವಹಿವಾಟು ನಡೆಸುವರೆಗೆ ಅನ್ವಯವಾಗುವುದಿಲ್ಲ. ರಿಲ್ಯಾಕೇಷನ್ ಕೊಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ.
Related Articles
ಸ್ಪಷ್ಟನೆ ಇಲ್ಲ. ಜಿಎಸ್‌ಟಿ ಬಗ್ಗೆ ಗೊಂದಲವಂತೂ ಇದ್ದೇ ಇದೆ ಎನ್ನುತ್ತಾರೆ ಕಿರಾಣಿ ಅಂಗಡಿ ಮಾಲಿಕ ಪ್ರದೀಪ್.
Advertisement
ಜಿಎಸ್‌ಟಿ ಬಂದಾಗನಿಂದ ಅಂಗಡಿ ಓಪನ್ ಮಾಡಿಯೇ ಇಲ್ಲ. ಯಾವ ಗೂಡ್ಸ್ ಮೇಲೆ ಎಷ್ಟು ತೆರಿಗೆ ಬೀಳುತ್ತದೆ ಎಂಬುದರ ಬಗ್ಗೆ ಈಗಲೂ ಕನ್ ಪ್ಯೂಸ್ ಇದೆ. ಆಡಿಟರ್ ಕೇಳಿದರೂ ಸರಿಯಾಗಿ ಗೊತ್ತಾಗುತ್ತಿಲ್ಲ. ಹಾಗಾಗಿ ಅಂಗಡಿ ಮುಚ್ಚಿದಿವಿ. ಎಲ್ಲಾ ಗೊಂದಲ ಬಗೆಹರಿದು, ಕ್ಲಿಯರ್ ಪಿಕ್ಚರ್ ಸಿಕ್ಕ ಮೇಲೆ ವಹಿವಾಟು ನಡೆಸುತ್ತೇವೆ ಎಂದುಶ್ರೀ ಗುರುರಾಘವೇಂದ್ರ ಎಲೆಕ್ಟ್ರಾನಿಕ್ಸ್‌ನ ಗಿರೀಶ್ ಹೇಳುತ್ತಾರೆ. ಹಿಂದೆ 5 ಲಕ್ಷ ಇದ್ದ ಲಿಮಿಟೇಷನ್ ಈಗ 20 ಲಕ್ಷ ಆಗಿದೆ. ಹಾಗಾಗಿ ನಮಗೆ ಜಿಎಸ್‌ಟಿ ಆಗಿದ್ದರಿಂದ ತೊಂದರೆ ಇಲ್ಲ. ಎಂದಿನಂತೆ ಅಂಗಡಿ ನಡೆಯುತ್ತಿದೆ ಎಂದು ಸಂತೋಷ್ ಎಲೆಕ್ಟ್ರಿಕ್ಸ್ ಮಾಲಿಕ ಸಂತೋಷ್ ದೊಡ್ಮನಿ ತಿಳಿಸುತ್ತಾರೆ.
ಜಿಎಸ್‌ಟಿ ಭಾರೀ ಪರಿಣಾಮ ಬೀರಿರುವುದು ಚಿತ್ರಮಂದಿರಗಳ ಮೇಲೆ. ಜಿಎಸ್‌ಟಿ ಕನ್ನಡ ಚಿತ್ರಗಳ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತದೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಅಕ್ಷರಶಃ ಮುಗಿದಂತೆ. 100 ರೂಪಾಯಿ ಟಿಕೆಟ್‌ಗೆ 18
ರೂಪಾಯಿ ಜಿಎಸ್‌ಟಿ ಇದೆ. ಅದಕ್ಕಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗೆ 28 ರೂಪಾಯಿ ಬೀಳುತ್ತದೆ. ಟಿಕೆಟ್ ಮೇಲೆ ಜಿಎಸ್‌ಟಿ ಹಾಕುವುದರಿಂದ ಷೇರಿನ ಮಾತೇ ಇಲ್ಲ. ಜಿಎಸ್‌ಟಿ ಯಿಂದ ಕನ್ನಡ ಫಿಲ್ಮ್ಗೆ ಭಾರಿ ಹೊಡೆತ ಎನ್ನುತ್ತಾರೆ ಚಿತ್ರಮಂದಿರದ
ಮಾಲಿಕರೊಬ್ಬರು. ಹಿಂದಿನಂತೆ ಲೋಕಲ್‌ನವರಿಗೆ (ರಾಜ್ಯ) ದವರಿಗೆ ಟ್ಯಾಕ್ಸ್ ಬಿಡಬೇಕಿತ್ತು. ಜಿ.ಎಸ್.ಟಿ.
ಯಿಂದ ಹೆಚ್ಚಿನ ಹೊರೆ ಆಗಲಿದೆ. ಸಣ್ಣ-ಪುಟ್ಟ ಊರುಗಳ ಚಿತ್ರಮಂದಿರದಲ್ಲಿ ಸ್ಲಾಬ್‌ನಡಿ ಒಂದು ಷೋಗೆ 500 ರೂಪಾಯಿ ಕೊಡಲಾಗುತ್ತಿತ್ತು. ಹೇಗೋ ಸಣ್ಣ ಬಜೆಟ್ ಚಿತ್ರಗಳು ನಡೆಯುತ್ತಿದ್ದವು. ಮೊದಲೇ ಮಳೆ ಇಲ್ಲ. ಜನರು ಟಾಕೀಸ್‌ಗೆ
ಬರುವುದೇ ಇಲ್ಲ. ಯಾವುದೋ ಒಂದು ಫಿಲ್ಮ್ ಹಿಟ್ ಆಗುತ್ತದೆ. ಒಟ್ಟಾರೆಯಾಗಿ ಜಿಎಸ್‌ಟಿ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ದೊಡ್ಡ ಹೊಡೆತ… ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಾ.ರವಿಬಾಬು