Advertisement
ಪ್ರಸ್ತುತ ಸ್ನಾನಕ್ಕಾಗಿ, ದೇಹದ ಹೊಳಪು ಹೆಚ್ಚಿಸಲು ಅನೇಕ ಸೋಪ್, ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ದೇಹಕ್ಕೆ ಹೊಸ ಚೈತನ್ಯ ನೀಡಬಲ್ಲ ಎಣ್ಣೆಸ್ನಾನ ಕೇವಲ ಹಬ್ಬಹರಿದಿನಗಳಿಗೆ ಮೀಸಲಾಗಿದೆ. ತಲೆಗೆ ಎಣ್ಣೆ ಹಚ್ಚಿಕೊಳ್ಳುವಂತೆ ಹೇಳಿದರೆ ದೂರ ಸರಿಯುವ ಯುವ ಪೀಳಿಗೆ ಇನ್ನು ಎಣ್ಣೆ ಹಾಕಿ ಸ್ನಾನ ಮಾಡುವುದುಂಟೆ?
Related Articles
ಮಕ್ಕಳು ಎಂದಾಗ ಅವರ ಆರೋಗ್ಯ, ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಎಣ್ಣೆಸ್ನಾನ ಮಕ್ಕಳ ಚರ್ಮದ ಹೊಳಪಿಗೆ, ರಕ್ಷಣೆಗೆ ಹೆಚ್ಚು ಸಹ ಕರಿಸುತ್ತದೆ. ಮಕ್ಕಳ ಚರ್ಮ ಅತಿ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಧೂಳು ಮೊದಲಾದವುಗಳಿಂದ ಚರ್ಮವನ್ನು ಸಂರಕ್ಷಿಸುವಷ್ಟು ಬೆಳವಣಿಗೆಯಾಗಿರುವುದಿಲ್ಲ. ಅಲ್ಲದೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ. ಅದಕ್ಕಾಗಿ ಬೇಗನೇ ಅಲರ್ಜಿಯಾಗುತ್ತದೆ. ಚರ್ಮದ ಆರೋಗ್ಯಕ್ಕೆ ಹಾಗೂ ರಕ್ತ ಪರಿಚಲನೆಗೆ ಎಣ್ಣೆ ಸ್ನಾನ ಸಹಾಯಕವಾಗಿರುತ್ತದೆ. ಚರ್ಮದ ಹೊಳಪು ಹೆಚ್ಚುತ್ತದೆ.
Advertisement
ಎಣ್ಣೆ ಸ್ನಾನದಿಂದ ಆಗುವ ಲಾಭಗಳೇನು?ತಲೆಗೆ ನಿತ್ಯ ಎಣ್ಣೆ ಹಚ್ಚುವುದರಿಂದ ತಲೆನೋವು ಬರುವದಿಲ್ಲ. ಕೂದಲು ನೆರೆಯುವುದನ್ನು ಇದರಿಂದ ತಡೆಗಟ್ಟಬಹುದು. ಯುವಕರ ಸಮಸ್ಯೆಯಾದ ಕೂದಲು ಉದುರುವಿಕೆ, ತಲೆ ಬೋಳಾಗುವಿಕೆ ಇದು ಅತ್ಯುತ್ತಮ ಪರಿಹಾರ . ಎಣ್ಣೆ ಹಚ್ಚುವುದರಿಂದ ತಲೆ ಕೂದಲು ಕಪ್ಪಾಗಿ ಸೊಂಪಾಗಿ ಬೆಳೆಯುವುದು ಮತ್ತು ಕೂದಲುಗಳು ಉದ್ದವಾಗಿಯೂ ಬೆಳೆಯುವುದು. ಇದರೊಂದಿಗೆ ಕಿವಿಗಳಿಗೆ ಶುದ್ಧವಾದ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಾಕುವುದರಿಂದ ಕಿವಿ ಕೇಳದಿರುವಿಕೆ, ಕಿವುಡುತನದ ಸಮಸ್ಯೆಗಳು ಕಂಡು ಬರುವುದಿಲ್ಲ. ಇಡೀ ಶರೀರಕ್ಕೆ ಎಣ್ಣೆ ಸವರುವುದರಿಂದ ಶರೀರ ಸುಂದರ, ಬಲಿಷ್ಠವಾಗುವುದು ಪಾದಗಳಿಗೆ ಎಣ್ಣೆ ಹಚ್ಚುವುದರಿಂದ ಪಾದ ಬಲಿಷ್ಠ ಹಾಗೂ ಮƒದುತ್ವ ಪಡೆಯುವವು. ಎಣ್ಣೆ ಸ್ನಾನಕ್ಕೆ ಬಳಸುವ ನಾನಾ ಎಣ್ಣೆಗಳು
1 ಆರೋಗ್ಯಕರ ಅಭ್ಯಂಗ ಸ್ನಾನಕ್ಕೆ ಕೊಬ್ಬರಿ ಎಣ್ಣೆ, ಧನ್ವಂತರಿ ತೈಲ, ನಾರಾಯಣ ತೈಲ, ಎಳ್ಳೆಣ್ಣೆ ಮಹಾನಾರಾಯಣ ತೈಲ ಇತ್ಯಾದಿ ಬಳಸಬಹುದು ಆದರೆ ಎಳ್ಳೆಣ್ಣೆ ಶ್ರೇಷ್ಠ. 2 ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಶ್ರೀಗಂಧದ ಎಣ್ಣೆಯನ್ನು ತ್ವಚೆಯ ಹಾಗೂ ಕೂದಲ ಆರೈಕೆಗೆ ಬಳಸಲಾಗುತ್ತದೆ. ಇದರ ಜತೆಗೆ ಇತರ ತೆ„ಲಗಳನ್ನು ಮಿಶ್ರಣ ಮಾಡಿ ಬಳಸಲಾಗುತ್ತದೆ. 3 ಎಳ್ಳೆಣ್ಣೆಯ ಜತೆ 20 ಹನಿ ಸುವಾಸಿತ ಮಲ್ಲಿಗೆ, 8 ಹನಿ ಕಿತ್ತಳೆ ರಸ ಮಿಶ್ರ ಮಾಡಿ ಹಚ್ಚುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. 4 ತೆಂಗಿನ ಎಣ್ಣೆಯ ಜತೆ 1 ಹನಿ ಶ್ರೀಗಂಧ, 6 ಹನಿ ನಿಂಬೆ ಸೇರಿಸಿ ತಲೆಗೆ ಹಚ್ಚಿದರೆ ಮಾನಸಿಕ ಒತ್ತಡದ ಸಮಸ್ಯೆಗಳಿಂದ ದೂರವಿರುಬಹುದು ಹಾಗೂ ಮನಸ್ಸು ಶಾಂತಿಯಿಂದ ಇರಲು ಸಹಾಯಕ. 5 ಮಾಂಸಖಂಡಗಳ ನೋವು ನಿವಾರಣೆಗೆ ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರೊಂದಿಗೆ ಎಳ್ಳೆಣ್ಣೆ , ನೀಲಗಿರಿ ತೆ„ಲ ಸೇರಿಸಿ ಬಳಸಿ ಮƒದುವಾಗಿ ಮಸಾಜ್ ನೀಡುವುದು ಉತ್ತಮ. - ಪ್ರಜ್ಞಾ ಶೆಟ್ಟಿ