Advertisement

ಬರಲಿದೆ ಹೊಸ 20 ರೂ. ನೋಟು

12:37 AM Apr 28, 2019 | sudhir |

ಹೊಸದಿಲ್ಲಿ: ಈಗಾಗಲೇ ಬಹುತೇಕ ಎಲ್ಲ ನೋಟುಗಳನ್ನೂ ಹೊಸ ವಿನ್ಯಾಸದಲ್ಲಿ ಪರಿಚಯಿಸಿದ ಆರ್‌ಬಿಐ ಈಗ 20 ರೂ. ಮುಖ ಬೆಲೆಯ ನೋಟುಗಳಿಗೂ ಹೊಸ ರೂಪ ನೀಡಿದೆ. ಈ ನೋಟಿನಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಸಹಿ ಇರಲಿದೆ. ಹೊಸ 20 ರೂ. ನೋಟು ಹಸಿರು-ಹಳದಿ ಬಣ್ಣದಲ್ಲಿರಲಿದೆ. ಹಿಂಬದಿಯಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿರಲಿದ್ದು, ದೇಶದ ಐತಿಹಾಸಿಕ ಮಹತ್ವವನ್ನು ಸಾರಲಿದೆ. ನೋಟಿನ ಉದ್ದ 129 ಮಿ.ಮೀ. ಹಾಗೂ ಅಗಲ 63 ಮಿ.ಮೀ. ಇರಲಿದೆ. ಈಗಾಗಲೇ ಚಾಲ್ತಿಯಲ್ಲಿರುವ 20 ರೂ. ನೋಟು ಹಿಂದಿ ನಂತೆಯೇ ಚಾಲ್ತಿಯಲ್ಲಿರಲಿವೆ.

Advertisement

ನೋಟಿನ ವೈಶಿಷ್ಟ
ಮುಂಭಾಗದಲ್ಲಿ
– ದೇವನಾಗರಿ ಲಿಪಿಯಲ್ಲಿ 20 ಎಂದು ಬರೆಯಲಾಗಿದ್ದು, ಮಧ್ಯದಲ್ಲಿ ಮಹಾತ್ಮಾ ಗಾಂಧಿ ಚಿತ್ರವಿದೆ.
– ಸೂಕ್ಷ್ಮ ಅಕ್ಷರಗಳಲ್ಲಿ ಆರ್‌ಬಿಐ, ಭಾರತ್‌, ಇಂಡಿಯಾ ಹಾಗೂ 20 ಎಂದು ಬರೆಯಲಾಗಿದೆ.
–  ಗವರ್ನರ್‌ ಸಹಿ, ಮಹಾತ್ಮಾ ಗಾಂಧಿ ಚಿತ್ರದ ಬಳಿ ಆರ್‌ಬಿಐ ಚಿಹ್ನೆ ಹಾಗೂ ಬಲ ಬದಿಯಲ್ಲಿ ಅಶೋಕ ಸ್ತಂಭ ಇದೆ.
– ಬಲ ಮೇಲ್ಬದಿ ಹಾಗೂ ಕೆಳಬದಿಯಲ್ಲಿ ಮಹಾತ್ಮಾ ಗಾಂಧಿ ಚಿತ್ರ ಹಾಗೂ ವಾಟರ್‌ಮಾರ್ಕ್‌ನಲ್ಲಿ 20 ಸಂಖ್ಯೆ ಹಾಗೂ ಅದರ ಕೆಳಗೆ ಅಕ್ಷರ ಗಾತ್ರ ಕ್ರಮವಾಗಿ ಏರುತ್ತಾ ನೋಟಿನ ಸೀರಿಯಲ್‌ ನಂಬರ್‌ ಬರೆಯಲಾಗಿರುತ್ತದೆ.

ಹಿಂಭಾಗ
– ಎಡ ಬದಿಯಲ್ಲಿ ಮುದ್ರಣದ ವರ್ಷ ಮತ್ತು ಸ್ವತ್ಛ ಭಾರತ ಲೋಗೋ, ಅದರ ಘೋಷವಾಕ್ಯ ಇದೆ.
– ವಿವಿಧ ಭಾಷೆಗಳಲ್ಲಿ ಅಕ್ಷರದಲ್ಲಿ ಇಪ್ಪತ್ತು ರೂಪಾಯಿ ಎಂದು ಬರೆದಿರುವ ಪ್ಯಾನೆಲ್‌ ಹಾಗೂ ಅದರ ಪಕ್ಕ ಎಲ್ಲೋರಾ ಗುಹೆಯ ಚಿತ್ರ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next