Advertisement

ವಯರ್‌ಲೆಸ್‌ ಟೆಕ್ನಾಲಜಿ ಹೊಸ ಕ್ರಾಂತಿ

01:30 AM Jul 05, 2019 | mahesh |

ತಂತ್ರಜ್ಞಾನ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ವೇಗದ ಜಗತ್ತಿನಲ್ಲಿ ಮನುಷ್ಯನಿಗೆ ಅತಿ ಸುಲಭವಾಗಿ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವಂತಾಗಲು ತಂತ್ರಜ್ಞಾನ ಕ್ಷೇತ್ರವು ಪೂರಕ ಅವಕಾಶಗಳನ್ನೇ ಸೃಷ್ಟಿಸುತ್ತಿದೆ. ಸಮಯದ ಅಭಾವ, ಕೆಲಸಗಳ ಒತ್ತಡದ ನಡುವೆ ಇಂತಹ ತಂತ್ರಜ್ಞಾನಗಳು ಮನುಷ್ಯನಿಗೆ ವರವಾಗಿಯೂ ಪರಿಣಮಿಸುತ್ತಿವೆ.

Advertisement

ಮೊಬೈಲ್ನ್ನು ಚಾರ್ಜ್‌ಗೆ ಇರಿಸಿ ಮೊಬೈಲ್ ಇಲ್ಲದೆಯೇ ಮಾತನಾಡಬಹುದು. ವಾಹನ ಚಾಲನೆ ವೇಳೆ ಮೊಬೈಲ್ನ್ನು ಕಿಸೆಯಲ್ಲೋ, ಮೊಬೈಲ್ನಲ್ಲೋ ಇಟ್ಟುಕೊಂಡು ಮೊಬೈಲ್ರಹಿತ ಮಾತುಕತೆ ನಡೆಸಬಹುದು, ಹಾಡು ಆಲಿಸಬಹುದು, ಬೇಕಾದಲ್ಲಿ ಲ್ಯಾಪ್‌ಟಾಪ್‌ಗೆ ಇಂಟರ್‌ನೆಟ್ ಪಡೆದುಕೊಳ್ಳಬಹುದು ಎಂದಾದರೆ ಇದು ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ಸಾಧ್ಯವಾಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ವಯರ್‌ಲೆಸ್‌ ತಂತ್ರಜ್ಞಾನದ ಅಭಿವೃದ್ಧಿ ತಂತ್ರಜ್ಞಾನ ಕ್ಷೇತ್ರದಲ್ಲೇ ಹೊಸ ಕ್ರಾಂತಿ ಮಾಡಿವೆ. ಈ ಎಲ್ಲ ಹೊಸ ತಂತ್ರಜ್ಞಾನಗಳು ಮಂಗಳೂರಿನ ಮಾರುಕಟ್ಟೆಯಲ್ಲಿಯೂ ಬಹು ಬೇಡಿಕೆಯನ್ನು ಪಡೆದುಕೊಂಡಿವೆ ಕೂಡ.

ಲ್ಯಾಂಡ್‌ಲೈನ್‌ ಫೋನ್‌ ಮೂಲಕ ಮನೆಯಲ್ಲೇ ಮಾತನಾಡುವ ಕಾಲ ಹೋಗಿ ಹೋದಲ್ಲೆಲ್ಲಾ ಜತೆಗೆ ಇಟ್ಟುಕೊಳ್ಳಲು ಸಾಧ್ಯವಾಗುವಂತಹ ಮೊಬೈಲ್ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಅಂಗೈಯಗಲ ಇರುವ ಈ ಮೊಬೈಲ್ ಫೋನ್‌ಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತಿದ್ದಂತೆಯೇ ಮೊಬೈಲ್ ಫೋನ್‌ ಕ್ಷೇತ್ರಕ್ಕೆ ಸ್ಮಾರ್ಟ್‌ ಫೋನ್‌ಗಳು ಲಗ್ಗೆ ಇಟ್ಟು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದವು. ಇದೀಗ ಮೊಬೈಲ್ರಹಿತ ಮಾತನಾಡಲೂ ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.

ಮೊಬೈಲ್ ಕಿಸೆಯಲ್ಲಿಡಿ; ಮಾತು ಮುಂದುವರಿಸಿ

ಸದ್ಯ ಇದೇ ಟ್ರೆಂಡ್‌ ಆಗಿ ಚಾಲ್ತಿಯಲ್ಲಿದೆ. ಮಂಗಳೂರಿನ ಬೈಕ್‌ ಚಾಲನೆ ಮಾಡುವಾಗ ಮೊಬೈಲ್ ರಿಂಗಣಿಸಿದರೆ, ಬೈಕ್‌ ನಿಲ್ಲಿಸಿ ಕಿಸೆಯಿಂದ ಮೊಬೈಲ್ಗೆ ಬ್ಲೂ ಟೂತ್‌ ಸಂಪರ್ಕ ನೀಡಿದರೆ ವಯರ್‌ಲೆಸ್‌ ಮಾಧ್ಯಮದ ಮೂಲಕ ಬ್ಲೂಟೂತ್‌ ಕಿವಿಯಲ್ಲಿಟ್ಟುಕೊಂಡು ಮಾತನಾಡಬಹುದು. ಚಾಲನೆಗೂ ಮುನ್ನ ಕಿವಿಯಲ್ಲಿ ಬ್ಲೂ ಟೂತ್‌ ಸಿಕ್ಕಿಸಿಕೊಂಡರಾಯಿತು. ಕರೆ ಬರುವಾಗೆಲ್ಲ ಅದರಲ್ಲಿರುವ ಸ್ವಿಚ್ ಅದುಮಿ ಮೊಬೈಲ್ರಹಿತವಾಗಿ ಮಾತನಾಡುತ್ತಾ ತೆರಳಬಹುದು. ಅಲ್ಲದೆ, ಚಾಲನೆ ವೇಳೆ ಹಾಡು ಆಲಿಸಲೂ ಇದು ಸಹಕಾರಿ.

Advertisement

ಮೊಬೈಲ್ನ್ನು ಒಂದೆಡೆ ಚಾರ್ಜ್‌ಗೆ ಇರಿಸಿ ಎಲ್ಲೆಂದರಲ್ಲಿ ಯಾವುದೇ ಅಪಾಯವಿಲ್ಲದೆ ಮಾತನಾಡುತ್ತಾ ವಿಹರಿಸಬಹುದು.

ವಯರ್‌ಲೆಸ್‌ ಚಾರ್ಜರ್‌
ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಲು ಉದ್ದನೆಯ ಹಗ್ಗದಂತ ವಯರ್‌ನ್ನು ನೇತುಹಾಕಿ ಫೋನಿಗೆ ಸಿಕ್ಕಿಸಬೇಕಾಗಿತ್ತು. ಅಲ್ಲದೆ, ಹೋದಲ್ಲೆಲ್ಲ ಮೊಬೈಲ್ ಫೋನ್‌ ಜೊತೆಗೆ ಚಾರ್ಜರ್‌ ಕೂಡಾ ಒಯ್ಯಬೇಕಾಗಿತ್ತು. ಆದರೆ, ಪ್ರಸ್ತುತ ಮೊಬೈಲ್ನೊಂದಿಗೆ ಚಾರ್ಜರ್‌ ಒಯ್ಯಬೇಕಾದ ಪ್ರಮೇಯವೇ ಇಲ್ಲ. ಏಕೆಂದರೆ, ವಯರ್‌ ಇಲ್ಲದ ಚಾರ್ಜರ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚಿಕ್ಕ ಚಾರ್ಜಿಂಗ್‌ ಮ್ಯಾಟ್ನ್ನು ಕರೆಂಟ್‌ಗೆ ಪ್ಲಗ್‌ ಇನ್‌ ಮಾಡಿ ಅದರ ಮೇಲೆ ಮೊಬೈಲ್ ಇಟ್ಟರೆ ಚಾರ್ಜ್‌ ಆಗುತ್ತದೆ. ಆದರೆ, ವಯರ್‌ಲೆಸ್‌ ಚಾರ್ಜರ್‌ ಮಾರುಕಟ್ಟೆಗೆ ಬಂದಿದ್ದರೂ, ಇದರ ಬೇಡಿಕೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ಬೆಲೆ ಹೆಚ್ಚು ಮತ್ತು ಚಾರ್ಜ್‌ ಆಗಲು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಇರಬಹುದು ಎನ್ನುತ್ತಾರೆ ಮೊಬೈಲ್ ಮಳಿಗೆಗಳ ಸಿಬಂದಿ.

ಸ್ಮಾರ್ಟ್‌ ಟಿವಿಯಲ್ಲಿ ಮೊಬೈಲ್ ನೋಡಿ
ಮನೆಯಲ್ಲಿರುವ ಸ್ಮಾರ್ಟ್‌ ಟಿವಿಗೆ ಮೊಬೈಲ್ ಸಂಪರ್ಕ ನೀಡಿದರೆ ಮೊಬೈಲ್ನಲ್ಲಿ ಬರುವ ವಾಟ್ಸಾಪ್‌ ಸಂದೇಶಗಳು, ವೀಡಿಯೋ, ಚಿತ್ರಗಳು ಎಲ್ಲ ನವ ಮಾಧ್ಯಮಗಳನ್ನು ವೀಕ್ಷಿಸಬಹುದು. ದೊಡ್ಡ ಪರದೆಯಲ್ಲಿ ಸ್ಪಷ್ಟವಾಗಿ ಕಾಣುವುದರಿಂದ ಇದು ಪ್ರಚಲಿತದಲ್ಲಿದೆ. ಇದೂ ವಯರ್‌ಲೆಸ್‌ ತಂತ್ರಜ್ಞಾನದ ಅದ್ಭುತ ಕೊಡುಗೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪಾರದರ್ಶಕ ಸ್ಮಾರ್ಟ್‌ ಫೋನ್‌ಗಳು ಕಾಲಿಡವಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಬೇಡಿಕೆ ಹೆಚ್ಚಬೇಕು
ತಾಂತ್ರಿಕತೆ ಮುಂದುವರಿದಿದೆ. ಜನ ಹೊಸತನ್ನು ಸದಾ ಬಯಸುತ್ತಿದ್ದಾರೆ. ಮಂಗಳೂರಿನಲ್ಲಿ ಬ್ಲೂಟೂತ್‌ಗೆ ಉತ್ತಮ ಬೇಡಿಕೆ ಇದೆ. ವಯರ್‌ಲೆಸ್‌ ಚಾರ್ಜರ್‌ಗೆ ಇನ್ನಷ್ಟೆ ಬೇಡಿಕೆ ಬರಬೇಕಿದೆ.
– ಮದನ್‌ ಮ್ಯಾನೇಜರ್‌, ಪ್ಲಾನೆಟ್ ಜೀ ಮೊಬೈಲ್ ಶೋರೂಂ

ಜನರಿಗೆ ಉಪಯುಕ್ತ
ಬ್ಲೂ ಟೂತ್‌ ಬಳಕೆ ಮಾಡುತ್ತಿದ್ದೇನೆ. ಇದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಕರೆ ಬಂದಾಗ ಮಾತನಾಡಲು ಸುಲಭವಾಗುತ್ತದೆ. ವಯರ್‌ಲೆಸ್‌ ತಂತ್ರಜ್ಞಾನಗಳು ಇನ್ನೂ ಹೆಚ್ಚೆಚ್ಚು ಬಂದಲ್ಲಿ, ಜನರಿಗೆ ಹೆಚ್ಚು ಉಪಯುಕ್ತವಾಗಬಹುದು.
– ಶ್ರೀನಿಧಿ ಬಿ, ಮಂಗಳೂರು
ಲ್ಯಾಪ್‌ಟಾಪ್‌ನಲ್ಲಿ ವಯರ್‌ಲೆಸ್‌ ವೈಫೈ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಎಲ್ಲಿಯೂ ವೈಫೈಯನ್ನು ವಯರ್‌ಲೆಸ್‌ ಸೌಲಭ್ಯದ ಮೂಲಕ ಪಡೆದುಕೊಳ್ಳಬಹುದು.•ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next