Advertisement

ತಾಲೂಕು ಬಿಲ್ಲವ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

05:45 AM Jul 21, 2017 | Harsha Rao |

ಬಪ್ಪಳಿಗೆ: ತಾಲೂಕು ಬಿಲ್ಲವ ಸಂಘದ 2017-19ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

Advertisement

ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಯಂತ ನಡುಬೈಲು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು, ಪೂಜಾ ವಸಂತ್‌, ಕಾರ್ಯದರ್ಶಿಯಾಗಿ ಕೇಶವ ಪೂಜಾರಿ ಬೆದ್ರಾಳ, ಕೋಶಾಧಿಕಾರಿಯಾಗಿ ನಾಗೇಶ್‌ ಬಲಾ°ಡ್‌, ಜತೆ ಕಾರ್ಯದರ್ಶಿಯಾಗಿ ಸದಾನಂದ ಕುಮಾರ್‌ ಮಡೊÂಟ್ಟು ಅವಿರೋಧವಾಗಿ ಆಯ್ಕೆಯಾದರು. ಆರ್‌. ಸಿ. ನಾರಾಯಣ್‌  ಚುನಾವಣೆ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಈ ಸಂದರ್ಭ ತಾಲೂಕಿನ 51 ಗ್ರಾಮ ಸಮಿತಿಗಳ ಅಧ್ಯಕ್ಷರು, 12 ವಲಯ ಸಂಚಾಲಕರು, 12 ನಗರ ಪ್ರತಿನಿಧಿಗಳು, ಪುತ್ತೂರು ಮತ್ತು ಉಪ್ಪಿನಂಗಡಿ ಯುವ ವಾಹಿನಿ ಅಧ್ಯಕ್ಷರು, ಮಹಿಳಾ ವೇದಿಕೆ ಅಧ್ಯಕ್ಷರು, ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಬ್ರಹ್ಮಶ್ರೀ ವಿವಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಸಹಿತ 80 ಸದಸ್ಯರ ತಾಲೂಕು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿ ಕಾರಿಗಳು ಉಪಸ್ಥಿತರಿದ್ದರು.

ಹಾಲಿ ಅಧ್ಯಕ್ಷ ಜಯಂತ ನಡುಬೈಲು ಅವರನ್ನು ಈ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು ಸೂಚಿಸಿದರು. ಹೊನ್ನಪ್ಪ ಪೂಜಾರಿ ಕೈಂದಾಡಿ ಅನುಮೋದಿಸಿದರು. ಉಳಿದ 4 ಹುದ್ದೆಗಳಿಗೂ ಕೂಡ ಸರ್ವಾನುಮತದ ಆಯ್ಕೆ ನಡೆಯಿತು.

ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯ ರಿಗೆ ಚುನಾವಣಾಧಿಕಾರಿ ಆರ್‌.ಸಿ. ನಾರಾಯಣ್‌ ಅಭಿನಂದನೆ ಸಲ್ಲಿಸಿ, ಈ ಚುನಾವಣೆ ಪ್ರಕ್ರಿಯೆ ಪ್ರಜಾ ಪ್ರಭುತ್ವ ಮಾದರಿಯಲ್ಲೇ ಅಚ್ಚುಕಟ್ಟಾಗಿ ನಡೆದಿದೆ ಎಂದರು.

Advertisement

ನೂತನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಈ ಹಿಂದಿನ ಎರಡು ಅವಧಿಯಲ್ಲಿ 4 ವರ್ಷಗಳ ಕಾಲ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಮೂರನೇ ಬಾರಿಗೆ ಆಯ್ಕೆ ಮಾಡಿದ್ದೀರಿ. ತಾಲೂಕಿನಲ್ಲಿರುವ 4 ಸಾವಿರ ಬಿಲ್ಲವ ಮನೆಗಳು ಸಂಘದ ಮೇಲೆ ಅಪಾರ ವಿಶ್ವಾಸ ಇಟ್ಟಿವೆ. ಅವರ ವಿಶ್ವಾಸಕ್ಕೆ ಧಕ್ಕೆ ಆಗದ ರೀತಿಯಲ್ಲಿ ಇದು ವರೆಗೆ ನಿಸ್ವಾರ್ಥದಿಂದ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡು ತ್ತೇನೆ ಎಂದರು.

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್ಲ್‌ ನಲ್ಲಿ ನಡೆಯುತ್ತಿರುವ ಪುನರುತ್ಥಾನ ಕಾರ್ಯದಲ್ಲಿ ವಿಶ್ವ ಮಟ್ಟದ ಭಕ್ತರು ತೊಡಗಿ ಕೊಂಡಿದ್ದು, ತಾಲೂಕು ಬಿಲ್ಲವ ಸಂಘಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ತಾಲೂಕಿನ ಪ್ರತಿ ಬಿಲ್ಲವ ಕುಟುಂಬದಿಂದಲೂ ಗೆಜ್ಜೆಗಿರಿಗೆ ಸೇವೆ ಸಲ್ಲುವಂತಾಗಬೇಕು ಎಂದರು.

ಇತರ ಪದಾಧಿಕಾರಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ತಮ್ಮ ಆಯ್ಕೆಗೆ ಕಾರಣರಾದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next