Advertisement
ಹೊಸ ವರ್ಷಕ್ಕೆಂದು ಎಲೆಕ್ಟ್ರಾನಿಕ್ ವಸ್ತುಗಳಾದ ಎಲ್‌ಇಡಿ ಟಿ.ವಿ., ರೆಫ್ರಿಜರೇಟರ್, ಲ್ಯಾಪ್‌ಟಾಪ್, ಎ.ಸಿ., ಕೂಲರ್, ಮೈಕ್ರೋವೇವ್, ವಾಷಿಂಗ್ ಮೆಶಿನ್ ಖರೀದಿಗೆ ಪ್ರಮುಖ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಆಫರ್ ಇದ್ದು, ಬಡ್ಡಿ ರಹಿತ ಕಂತುಗಳು, ಶೇ. 20ರವರೆಗೆ ಕ್ಯಾಶ್‌ಬ್ಯಾಕ್ ಸಹಿತ ಹಲವಾರು ಬಹುಮಾನಗಳನ್ನು ಈಗಾಗಲೇ ಘೋಷಿಸಿವೆ.
ಹೊಸ ವರ್ಷದ ಪ್ರಯುಕ್ತ ಪ್ರಮುಖ ಶಾಪಿಂಗ್ ತಾಣಗಳಾದ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಅಮೇಜಾನ್ ಸೇರಿದಂತೆ ವಿವಿಧ ತಾಣಗಳಲ್ಲಿ ಆಫರ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಮೂಲಬೆಲೆಗಿಂತ ಶೇ.30, 40ರಷ್ಟು ಕಡಿಮೆ ಬೆಲೆ, ಉಚಿತ ಆನ್‌ಲೈನ್ ಡೆಲಿವೆರಿ, ಎಕ್ಸ್‌ಚೇಂಜ್ ಆಫರ್, ಶೇ. 0 ಬಡ್ಡಿದರದಲ್ಲಿ ಇಎಂಐ ಮತ್ತು ಡೀಲ್ ಆಫ್ ದಿ ಡೇ ಎಂದು ಕೊಂಡುಕೊಳ್ಳುವ ವಸ್ತುಗಳಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ.
Related Articles
ಕೆಲವು ಮಂದಿ ಹೊಸ ವರ್ಷವನ್ನು ಹಳೆಯ ಫ್ಯಾಷನ್ ಬಟ್ಟೆಗಳ ಮೂಲಕ ಆಚರಿಸಲು ತಯಾರಾಗಿದ್ದಾರೆ. ಅದಕ್ಕೆಂದೇ ಕೆಲವರು ಚೆಕ್ಸ್ ಪ್ಯಾಂಟ್ ಖರೀದಿಸುತ್ತಿದ್ದಾರೆ. ಯಾಕೆಂದರೆ ಈ ಪ್ಯಾಂಟ್ ಧರಿಸಿದರೆ ಅದಕ್ಕೆ ಶರ್ಟ್‌ಗಳ ಆಯ್ಕೆಗೆ ಹೆಚ್ಚು ತಲೆಗೆಡಿಸಿಕೊಳ್ಳಬೇಕೆಂದಿಲ್ಲ. ಏಕೆಂದರೆ ಮಾಮೂಲಿ ಎಲ್ಲ ಬಣ್ಣದ ಶರ್ಟ್ ಸೂಕ್ತವೆನಿಸುತ್ತದೆ. ಯುವತಿಯರು ಕೂಡ ಈ ಟ್ರೆಂಡ್‌ಗಳ ಬಟ್ಟೆಗೆ ಹೊರತಾಗಿಲ್ಲ. ಲಾಂಗ್ ಸ್ಕರ್ಟ್ ಖರೀದಿ ಮಾಡುತ್ತಿದ್ದು, ಉದ್ದ ಮತ್ತು ಎತ್ತರದ ಹುಡುಗಿಯರಿಗೆ ಈ ರೀತಿಯ ಬಟ್ಟೆಗಳು ಉತ್ತಮ ಎನಿಸುತ್ತದೆ. ಇವಿಷ್ಟೇ ಅಲ್ಲದೆ ಹುಡುಗಿಯರು ಚೆಕ್ಸ್ ಸಲ್ವಾರ್, ಕುರ್ತಾ ಜೀನ್ಸ್, ಸೀರೆ, ಜಾಕೆಟ್‌ಗೆ ಮೊರೆ ಹೋಗುತ್ತಿದ್ದಾರೆ.
Advertisement
ಬಿಳಿ ಶರ್ಟ್‌ಗೆ ಬೇಡಿಕೆಆರಾಮ ದಾಯಕ ಧಿರಿಸಿಗೆಂದು ಮಾರುಕಟ್ಟೆಯಲ್ಲಿ ಪುರುಷರು ಬಿಳಿ ಶರ್ಟ್ ಕಡೆಗೆ ವಾಲುತ್ತಿದ್ದಾರೆ. ಅದಕ್ಕೆಂದು ಬಿಳಿ ಬಣ್ಣದಲ್ಲಿಯೇ ಕುರ್ತಾ, ಟೀಶರ್ಟ್, ಫಾರ್ಮಲ್ ಶರ್ಟ್‌ಗಳಲ್ಲಿ ವಿವಿಧ ವಿನ್ಯಾಸಗಳು ಬಂದಿವೆ. ಅದರಂತೆಯೇ ಯುವತಿಯರು ಕೂಡ ನೀಲಿ ಬಣ್ಣದ ಪ್ಯಾಂಟ್‌ಗೆ ಬಿಳಿ ಟಾಪ್‌ಗ್ಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಇದು ಫಿಟ್ ಮತ್ತು ಕಂಫರ್ಟ್ ಇರುತ್ತದೆ. ಅದಲ್ಲದೆ ಬಿಳಿ ಬಣ್ಣದ ಧಿರಿಸುಗಳು ಯಾವ ಕಾಲದಲ್ಲೂ ಧರಿಸಲು ಉಪಯುಕ್ತವಾಗುತ್ತವೆ. ಇದನ್ನು ಲೆಗ್ಗಿಂಗ್ಸ್, ಕುರ್ತಾ, ಪಟಿಯಾಲ, ಕಪ್ಪು ಬಣ್ಣದ ಪ್ಯಾಂಟ್‌ಗಳಿಗೂ ಧರಿಸಬಹುದಾಗಿದೆ. ಮೊಬೈಲ್ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ
ಈಗಾಗಲೇ ಕೆಲವು ಕಂಪೆನಿಗಳು 5ಜಿ ಮೊಬೈಲ್‌ಗಳನ್ನು ಪರಿಚಯಿಸಿದ್ದು, ಬೆಲೆ ಕೊಂಚ ದುಬಾರಿಯಾಗಿದೆ. ಸ್ಪರ್ಧೆ ನೀಡುವಂತೆ ಕಡಿಮೆ ಬೆಲೆಯಲ್ಲಿ 5ಜಿ ಮೊಬೈಲ್ ನೀಡಲು ನೋಕಿಯಾ ಮುಂದಾಗಿದೆ. ಬದಲಾಗುತ್ತಿರುವ ಮಾರುಕಟ್ಟೆ ಟ್ರೆಂಡ್‌ಗೆ ಒಗ್ಗಿಕೊಳ್ಳಲು ಮುಂದಾಗಿರುವ ನೋಕಿಯಾ ಸಂಸ್ಥೆ ಇದೀಗ 5ಜಿ ಸಾಮರ್ಥ್ಯದ ಮೊಬೈಲ್‌ಗಳನ್ನು 2020ರಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅದೇ ರೀತಿ ಹೊಸ ಅಪ್‌ಗ್ರೇಡ್ ಫೀಚರ್ ಒಳಗೊಂಡ ರೆಡ್ ಮಿ 9 ಮೊಬೈಲ್ ಕೂಡ ಹೊಸ ವರ್ಷದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಇದರಲ್ಲಿ ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇರಲಿದ್ದು, ವಿಯರ್ ರೆಸಿಸ್ಟೆಂಟ್ ಮತ್ತು ಶೇಫಿಯರ್ ಗ್ಲಾಸ್ ಕೆಮರಾ ಹೊಂದಿರಲಿದೆ. ಶಿಯೋಮಿ ಎಂಐ ಮಿಕ್ಸ್ 4, ರೆಡ್‌ಮಿ ವೈ 4, ರೆಡ್ ಮಿ ನೋಟ್ 9, ಶಿಯೋಮಿ ಎಂಐ 10 ಸೇರಿದಂತೆ ಇನ್ನಿತರ ಕಂಪೆನಿ ಮೊಬೈಲ್ ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. - ನವೀನ್ ಭಟ್ ಇಳಂತಿಲ