Advertisement

ನೂತನ ಸಚಿವರಿಗೆ ವಿವಿಧ ಖಾತೆ ಹಂಚಿಕೆ, ಕೆಲವರ ಖಾತೆ ಬದಲು

12:30 AM Dec 29, 2018 | Team Udayavani |

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಕೆಲವು ಸಚಿವರ ಖಾತೆಗಳನ್ನು ಬದಲಾಯಿಸಿ ರಾಜ್ಯ ಸರ್ಕಾರ
ಅಧಿಕೃತ ಆದೇಶ ಹೊರಡಿಸಿದೆ. ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನೀಡಿದ ಪಟ್ಟಿಗೆ ರಾಜ್ಯಪಾಲ ವಜೂಭಾಯ್‌ ವಾಲಾ ಒಪ್ಪಿಗೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಖಾತೆಗಳ ಮರು ಹಂಚಿಕೆ ಮಾಡಿ ಬರೆದಿರುವ ಪತ್ರವನ್ನು ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಲುಪಿಸಿದ್ದರು. ಕಾಂಗ್ರೆಸ್‌ ನೀಡಿರುವ ಪಟ್ಟಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯಪಾಲ ವಜೂಭಾಯ್‌ ವಾಲಾ ಅವರಿಗೆ ಕಳುಹಿಸಿ ಒಪ್ಪಿಗೆ ಪಡೆದಿದ್ದಾರೆ. 

Advertisement

ಎರಡು ಪ್ರಮುಖ ಖಾತೆಗಳನ್ನು ಕಳೆದುಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ಬೃಹತ್‌ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಅವರ ಬಳಿ ಹೆಚ್ಚುವರಿಯಾಗಿದ್ದ ಐಟಿ, ಬಿಟಿ ಖಾತೆ ನೀಡಲಾಗಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ಜಯಮಾಲಾ ಅವರ ಬಳಿಯಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಹೈ ಕಮಾಂಡ್‌
ಇಬ್ಬರೂ ನಾಯಕರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದೆ. 

ಸಚಿವರು ಹೊಂದಿರುವ ಖಾತೆಗಳು
● ಡಾ.ಜಿ.ಪರಮೇಶ್ವರ್‌- ಬೆಂಗಳೂರು ನಗರಾಭಿವೃದಿಟಛಿ, ಬಿಬಿಎಂಪಿ, ಬಿಡಿಎ, ಬಿಡಬುಎಸ್‌ ಎಸ್‌ಬಿ, ಬಿಎಂಆರ್‌ಡಿ, ಬಿಎಂಆರ್‌ಸಿಎಲ್‌, ನಗರ ಯೋಜನಾ ನಿರ್ದೇಶನಾಲಯ, ಕಾನೂನು ಮತ್ತು ನ್ಯಾಯ ಹಾಗೂ ಮಾನವ ಹಕ್ಕುಗಳು,
ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ.

● ಡಿ.ಕೆ.ಶಿವಕುಮಾರ್‌- ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
● ಆರ್‌.ವಿ.ದೇಶಪಾಂಡೆ-ಕಂದಾಯ.
● ಕೃಷ್ಣ ಬೈರೇಗೌಡ– ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌.
● ಕೆ.ಜೆ.ಜಾರ್ಜ್‌ – ಬೃಹತ್‌ ಕೈಗಾರಿಕೆ, ಸಕ್ಕರೆ ಖಾತೆ ಹೊರತು ಪಡಿಸಿ.
● ಯು.ಟಿ.ಖಾದರ್‌– ನಗರಾಭಿವೃದ್ಧಿ ಖಾತೆ.
● ಜಯಮಾಲಾ – ಮಹಿಳಾ ಮತ್ತು ಮಕ್ಕಳ ಖಾತೆ, ವಿಕಲಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ.
● ಎಂ.ಬಿ.ಪಾಟೀಲ್‌ – ಗೃಹ ಖಾತೆ.
● ಸತೀಶ್‌ ಜಾರಕಿಹೊಳಿ – ಅರಣ್ಯ ಮತ್ತು ಪರಿಸರ.‌
● ಸಿ.ಎಸ್‌.ಶಿವಳ್ಳಿ – ಪೌರಾಡಳಿತ ಖಾತೆ.
● ಎಂ.ಟಿ.ಬಿ.ನಾಗರಾಜ್‌– ವಸತಿ.
● ಇ.ತುಕಾರಾಂ – ವೈದ್ಯಕೀಯ ಶಿಕ್ಷಣ ಖಾತೆ.
● ಎನ್‌.ಎಚ್‌.ಶಿವಶಂಕರ ರೆಡ್ಡಿ – ಕೃಷಿ.
● ಪ್ರಿಯಾಂಕ್‌ ಖರ್ಗೆ – ಸಮಾಜ ಕಲ್ಯಾಣ.
● ಜಮೀರ್‌ ಅಹಮದ್‌ಖಾನ್‌ – ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಖಾತೆ.
● ಶಿವಾನಂದ ಪಾಟೀಲ್‌ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
● ವೆಂಕಟರಮಣಪ್ಪ – ಕಾರ್ಮಿಕ ಖಾತೆ.
● ರಾಜಶೇಖರ್‌ ಪಾಟೀಲ್‌ – ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
● ಸಿ. ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ 
● ಪಿ.ಟಿ.ಪರಮೇಶ್ವರ್‌ ನಾಯ್ಕ – ಮುಜರಾಯಿ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ.
● ರಹೀಂ ಖಾನ್‌ – ಯುವ ಸಬಲೀಕರಣ ಮತ್ತು ಕ್ರೀಡೆ.
● ಆರ್‌.ಬಿ.ತಿಮ್ಮಾಪುರ – ಬಂದರು ಮತ್ತು ಒಳನಾಡು ಸಾರಿಗೆ ಹಾಗೂ ಸಕ್ಕರೆ ಖಾತೆ.

Advertisement

Udayavani is now on Telegram. Click here to join our channel and stay updated with the latest news.

Next