ದಾವಣಗೆರೆ: ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ 11ನೇ ವಾರ್ಡ್‌ನ ಸದಸ್ಯೆ ಅನಿತಾ ಬಾಯಿ ಮಾಲತೇಶ್ ಜಾಧವ್ ಹಾಗೂ ಉಪ ಮೇಯರ್ ಆಗಿ 16ನೇ ವಾರ್ಡ್‌ನ ಸದಸ್ಯೆ ಜಿ. ಮಂಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈ ಇಬ್ಬರು ಸದಸ್ಯೆಯರು ಮೇಯರ್, ಉಪ ಮೇಯರ್ ಆಗಿ ಆಯ್ಕೆಯಾದರು.
ಒಟ್ಟು 41 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 39, ಬಿಜೆಪಿ ಹಾಗೂ ಸಿಪಿಐ ತಲಾ ಒಂದೊಂದು ಸದಸ್ಯರನ್ನು ಹೊಂದಿವೆ. 11.30ಕ್ಕೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಮೇಯರ್ ಸ್ಥಾನಕ್ಕೆ ಅನಿತಾ ಬಾಯಿ ಮಾಲತೇಶ ಜಾಧವ್ 2 ನಾಮಪತ್ರ ಸಲ್ಲಿಸಿದರು.
ಗೌಡ್ರ ರಾಜಶೇಖರ್, ದಿನೇಶ್ ಕೆ. ಶೆಟ್ಟಿ ಸೂಚಕರಾಗಿ, ರೇಖಾ ನಾಗರಾಜ, ಶಿವನಹಳ್ಳಿ ರಮೇಶ್ ಅನುಮೋದಕರಾಗಿ ಸಹಿ ಹಾಕಿದ್ದರು. ಉಪ ಮೇಯರ್ ಸ್ಥಾನಕ್ಕೆ ಜಿ. ಮಂಜಮ್ಮ ನಾಮಪತ್ರ ಸಲ್ಲಿಸಿದರು. ಅವರಿಗೆ ಶೋಭಾ ಪಲ್ಲಾಗಟ್ಟೆ, ಎಚ್. ತಿಪ್ಪಣ್ಣ ಸೂಚಕರಾಗಿ, ಜಿ.ಬಿ. ಲಿಂಗರಾಜ, ಪಿ.ಎನ್. ಚಂದ್ರಶೇಖರ್ ಅನುಮೋದಕರಾಗಿದ್ದರು.
ಮೇಯರ್-ಉಪ ಮೇಯರ್ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಚುನಾವಣಾಧಿಕಾರಿ ಪ್ರಕಟಿಸಿದರು. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ ಈ ಸಂದರ್ಭದಲ್ಲಿದ್ದರು.
ನಾಲ್ಕು ಸ್ಥಾಯಿ ಸಮಿತಿಗೂ ಸಹ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ತೆರಿಗೆ ಹಣಕಾಸು ಸ್ಥಾಯಿ ಸಮಿತಿಗೆ ಎಚ್. ಸುರೇಂದ್ರ ಮೊಯಿಲಿ, ಎಚ್. ಬಸಪ್ಪ, ಅನ್ನಪೂರ್ಣ, ರೇಣುಕಮ್ಮ, ಎಚ್.ಬಿ. ಗೋಣೆಪ್ಪ ಜೆ.ಎನ್. ಶ್ರೀನಿವಾಸ್, ಅಬ್ದುಲ್ ರಹೀಂ ಆಯ್ಕೆಯಾದರು.
ಆರೋಗ್ಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಆರ್. ಶ್ರೀನಿವಾಸ್, ಎಚ್. ತಿಪ್ಪಣ್ಣ, ಕೆ. ಚಮನ್‌ಸಾಬ್, ಅಲ್ತಾಫ್ ಹುಸೇನ್, ದಿನೇಶ್ ಕೆ. ಶೆಟ್ಟಿ, ಎಂ. ಹಾಲೇಶ್, ಲಕ್ಷ್ಮಿದೇವಿ ಆಯ್ಕೆ ಯಾದರು. ನಗರ ಯೋಜನೆ ಸ್ಥಾಯಿ ಸಮಿತಿಗೆ ಅಶ್ವಿನಿ ವೇದಮೂರ್ತಿ, ಶಿವನಹಳ್ಳಿ ರಮೇಶ್, ಪಿ.ಎನ್. ಚಂದ್ರಶೇಖರ್, ಲಲಿತ ರಮೇಶ್, ಬಸವರಾಜ ಶಿವಗಂಗಾ, ಜಿ.ಬಿ. ಲಿಂಗರಾಜ, ರೇಖಾ ನಾಗರಾಜ ಆಯ್ಕೆಯಾದರು.
ಲೆಕ್ಕಪತ್ರ ಸ್ಥಾಯಿ ಸಮಿತಿಗೆ ರೇಣುಕಾಬಾಯಿ, ಗೌಡ್ರ ರಾಜಶೇಖರ್, ಪಿ.ಎನ್. ಶೋಭಾ ಪಲ್ಲಾಗಟ್ಟೆ, ಅಬ್ದುಲ್ ಲತೀಫ್, ಪರಸಪ್ಪ, ಆಶಾ ಉಮಾಶಂಕರ್. ದಿಲ್‌ಶಾದ್ ಬೇಗಂ ಆಯ್ಕೆ ಗೊಂಡರು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ನೂತನ ಮೇಯರ್-ಉಪ ಮೇಯರ್‌ಗೆ ಚುನಾವಣಾಧಿಕಾರಿ ಸೇರಿದಂತೆ ಅಧಿಕಾರಿಗಳು, ಪಾಲಿಕೆ ಸದಸ್ಯರು, ನಿಕಟಪೂರ್ವ ಮೇಯರ್ ಪುಷ್ಪಗುತ್ಛ ನೀಡಿ ಅಭಿನಂದಿಸಿದರು.