Advertisement

ದತ್ತಾ ನೂತನ ಡಿಜಿಪಿ;ಯುಪಿಎಸ್‌ಸಿಗೆ ಸರಕಾರ ಪ್ರಸ್ತಾವನೆ

03:45 AM Jan 28, 2017 | Team Udayavani |

ಬೆಂಗಳೂರು:ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ (ಡಿಜಿಪಿ)ರಾಗಿ ಹಿರಿಯ ಪೊಲೀಸ್‌ ಅಧಿಕಾರಿ ರೂಪಕ್‌ಕುಮಾರ್‌ ದತ್ತಾ ಅವರನ್ನು ನೇಮಿಸುವ ಸಂಬಂಧ ರಾಜ್ಯ ಸರ್ಕಾರ ಯುಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ರೂಪಕ್‌ಕುಮಾರ್‌ ದತ್ತಾ ಸೇರಿ ಐವರು ಹಿರಿಯ ಅಧಿಕಾರಿಗಳ ಪಟ್ಟಿ ಯುಪಿಎಸ್‌ಸಿಗೆ ಕಳುಹಿಸಿದ್ದು, ಅಲ್ಲಿಂದ ಒಪ್ಪಿಗೆ ಸಿಕ್ಕ ನಂತರ ಐವರ ಪೈಕಿ ದತ್ತಾ ನೇಮಕ ಕುರಿತು ಆದೇಶ ಹೊರಡಿಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ನಿನ್ನೆಯಷ್ಟೆ ಕೇಂದ್ರ ಸೇವೆಯಿಂದ ದತ್ತಾ ಅವರನ್ನು ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದ ರಾಜ್ಯ ಸರ್ಕಾರ ಇದೀಗ ಯುಪಿಎಸ್‌ಸಿಗೆ ಪಟ್ಟಿ ರವಾನಿಸಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ದತ್ತಾ ನೇಮಕಾತಿ ಕುರಿತು ಯುಪಿಎಸ್‌ಸಿಗೆ ಪಟ್ಟಿ ಕಳುಹಿಸಲಾಗಿದೆ  ಎಂದು ತಿಳಿಸಿದರು.

ಈ ಮಧ್ಯೆ, ದತ್ತಾ ನೇಮಕಕ್ಕೆ ತಾಂತ್ರಿಕ ಅಡಚಣೆ ಎದುರಾಗಿದ್ದು, ನಿಯಮಾನುಸಾರ ಡಿಜಿಪಿಯಾಗಿ ನೇಮಕಗೊಳ್ಳುವವರಿಗೆ 2 ವರ್ಷ ಸೇವಾ ಅವಧಿ ಇರಬೇಕು. ದತ್ತಾ ನಿವೃತ್ತಿಯಾಗಲು 9 ತಿಂಗಳು ಮಾತ್ರ ಬಾಕಿಯಿದೆ. ಹೀಗಾಗಿ, ಯಾರಾದರೂ ನ್ಯಾಯಲಯ ಮೆಟ್ಟಿಲು ಹತ್ತಿದರೆ ಸರ್ಕಾರದ ಯತ್ನಕ್ಕೆ ಅಡ್ಡಿಯುಂಟಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ರಾಜ್ಯ ಸರ್ಕಾರ ತನ್ನ ವಿವೇಚನೆ ಹಾಗೂ ಪರಮಾಧಿಕಾರ ಬಳಸಿ ದತ್ತಾ ನೇಮಿಸಲು ಅವಕಾಶ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next