Advertisement

ಕಪಿಲ್‌ ಒಳಗೊಂಡ ತ್ರಿಸದಸ್ಯ ಸಮಿತಿಗೆ ನೂತನ ಕ್ರಿಕೆಟ್‌ ಕೋಚ್‌ ಜವಾಬ್ದಾರಿ

11:58 PM Jul 17, 2019 | Sriram |

ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಅವರನ್ನು ಒಳಗೊಂಡ ತ್ರಿಸದಸ್ಯರ ತಾತ್ಕಾಲಿಕ ಸಮಿತಿ ಭಾರತ ಕ್ರಿಕೆಟ್‌ ತಂಡದ ನೂತನ ತರಬೇತುದಾರನನ್ನು ನೇಮಕ ಮಾಡಲಿದೆ. ಮಂಗಳವಾರ ಬಿಸಿಸಿಐ ಭಾರತ ತಂಡದ ನೂತನ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು.

Advertisement

ಜು. 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಬೆನ್ನಲ್ಲೇ ಕೋಚ್‌ ನೇಮಕಾತಿಯ ಜವಾಬ್ದಾರಿಯನ್ನು, ಭಾರತಕ್ಕೆ ಮೊದಲ ವಿಶ್ವಕಪ್‌ ತಂದುಕೊಟ್ಟ ಖ್ಯಾತಿಯ ಕಪ್ತಾನ ಕಪಿಲ್‌ದೇವ್‌ ನೇತೃತ್ವದ ತಾತ್ಕಾಲಿಕ ಸಮಿತಿಗೆ ನೀಡಲಾಗಿದೆ.

ಈ ಸಮಿತಿಯು ಮಾಜಿ ಕ್ರಿಕೆಟ್‌ ಆಟಗಾರ್ತಿ ಕರ್ನಾಟಕದ ಶಾಂತಾ ರಂಗಸ್ವಾಮಿ, ಮಾಜಿ ಆರಂಭಕಾರ ಅಂಶುಮನ್‌ ಗಾಯಕ್ವಾಡ್‌ ಒಳಗೊಂ ಡಿದೆ. ಈ ಹಿಂದೆ ಇದೇ ಸಮಿತಿ ಭಾರತ ಮಹಿಳಾ ತಂಡಕ್ಕೆ ಡಬ್ಲ್ಯು.ವಿ. ರಾಮನ್‌ ಅವರನ್ನು ಕೋಚ್‌ ಆಗಿ ನೇಮಕ ಮಾಡಿದ್ದನ್ನು ಸ್ಮರಿಸಬಹುದು.

ಶೀತಲ ಸಮರಕ್ಕೆ ದಾರಿ?
ಸಚಿನ್‌ , ಗಂಗೂಲಿ ಮತ್ತು ಲಕ್ಷ್ಮಣ್‌ ಮಾಜಿ ಆಟಗಾರರ ಒಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಇದ್ದರೂ ಕಪಿಲ್‌ದೇವ್‌ ಒಳಗೊಂಡ ತಾತ್ಕಾಲಿಕ ಸಮಿತಿಗೆ ಕೋಚ್‌ ನೇಮಕ ಆಯ್ಕೆಯ ಜವಾಬ್ದಾರಿಯನ್ನು ಬಿಸಿಸಿಐ ಆಡಳಿತಾಧಿಕಾರಿಗಳು ನೀಡಿರುವುದು ಇದೀಗ ಬಿಸಿಸಿಐನೊಳಗೆ ಶೀತಲ ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next