Advertisement

ಹೊಸ ವಲಸೆ ವಿರೋಧಿ ನೀತಿ ಶೀಘ್ರ

03:45 AM Feb 12, 2017 | Team Udayavani |

ವಾಷಿಂಗ್ಟನ್‌: ವಲಸೆ ವಿರೋಧಿ ನೀತಿಗೆ ಕೋರ್ಟ್‌ ತಡೆಯಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪರ್ಯಾಯ ಮಾರ್ಗಕ್ಕೆ ಮೊರೆ ಹೋಗಿದ್ದಾರೆ. ಮುಂದಿನ ವಾರದಲ್ಲಿಯೇ ಅವರು ನೂತನ ವಲಸೆ ವಿರೋಧಿ ನೀತಿ ಜಾರಲು ಮುಂದಾಗಿದ್ದಾರೆ!

Advertisement

ಈ ಬಗ್ಗೆ ಸ್ವತಃ ಹೇಳಿಕೊಂಡಿರುವ ಟ್ರಂಪ್‌, “ಕಾನೂನು ಜೊತೆಗಿನ ಸಮರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಸಾಕಷ್ಟು ಆಯ್ಕೆಗಳು ನಮ್ಮ ಮುಂದಿವೆ. ಹೊಸ ನೀತಿಯನ್ನು ಮುಂದಿನ ವಾರವೇ ಜಾರಿಗೊಳಿಸುತ್ತಿದ್ದೇವೆ. ಅಮೆರಿಕ ರಕ್ಷಣೆಗಾಗಿ ನಾವು ವೇಗದ ಕಾರ್ಯತಂತ್ರ ರೂಪಿಸಲೇಬೇಕಾಗಿದೆ’ ಎಂದು ಹೇಳಿದ್ದಾರೆ. “9ನೇ ಸಕೀìಟ್‌ ಕೋರ್ಟ್‌ ತಡೆಯಾಜ್ಞೆ ಕುರಿತು ಮಂಗಳವಾರ ಏನು ತೀರ್ಪು ನೀಡುತ್ತದೋ ನೋಡಿಕೊಂಡು ಮುಂದಡಿ ಇಡುತ್ತೇವೆ’ ಎಂದು  ಹೇಳಿದ್ದಾರೆ.

ಯುಕೆ ಸಂಸತ್‌ ಹಿಂಜರಿಕೆ: ನ್ಯಾಯಾಂಗವನ್ನು ಎದುರು ಹಾಕಿಕೊಂಡಿರುವ ಟ್ರಂಪ್‌ ಅವರನ್ನು ಸಂಸತ್ತಿನಲ್ಲಿ ಸ್ವಾಗತಿಸದೇ ಇರಲು ಹಲವು ಯುಕೆ ಸಂಸದರು ನಿರ್ಧರಿಸಿದ್ದಾರೆ. ಹೌಸ್‌ ಆಫ್ ಕಾಮನ್‌ನ ಸ್ಪೀಕರ್‌ ಜಾನ್‌ ಬಿಕ್ರೋ ಈ ಕುರಿತು ಪ್ರತಿಕ್ರಿಯಿಸಿದ್ದು, “ಟ್ರಂಪ್‌ ಆದೇಶಿಸಿರುವ ವಲಸೆ ನೀತಿ ಖಂಡಿಸಿ ಬ್ರಿಟನ್ನಿನಲ್ಲಿ 18 ಲಕ್ಷ ಮಂದಿ ಸಹಿ ಹಾಕಿದ್ದಾರೆ. ಯುಕೆ ಸಂಸತ್ತಿನಲ್ಲಿ ಟ್ರಂಪ್‌ ಅವರನ್ನು ಸ್ವಾಗತಿಸದೇ ಇರಲು 110 ಸಂಸದರು ನಿರ್ಧರಿಸಿದ್ದಾರೆೆ’ ಎಂದು ಹೇಳಿದ್ದಾರೆ. ಸೆಪ್ಟೆಂಬರ್‌- ಅಕ್ಟೋಬರ್‌ ನಡುವೆ ಟ್ರಂಪ್‌ ಬ್ರಿಟನ್‌ ಪ್ರವಾಸ ಕೈಗೊಳ್ಳಲಿದ್ದಾರೆ.

ಕೆನಡಾಕ್ಕೆ ಸ್ವಾಗತ: ಅಮೆರಿಕದ ಈ ನೀತಿ ಈಗ ಕೆನಡಾಕ್ಕೆ ಪ್ಲಸ್‌ ಆಗಿದೆ. ವಾಂಕೋವರ್‌ ಮೇಯರ್‌ ಗ್ರೆಗೋರ್‌ ರಾಬರ್ಟ್‌ಸನ್‌, “ಸ್ಯಾನ್‌ಫ್ರಾನ್ಸಿಸ್ಕೋದಿಂದ ವಾಂಕೋವರ್‌ಗೆ ವಿಮಾನದಲ್ಲಿ ಒಂದೂವರೆ ತಾಸು ಪ್ರಯಾಣ. ಕೆಲಸ ಕಳೆದುಕೊಳ್ಳುವ ಪ್ರತಿಭಾವಂತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next