Advertisement

ನಗರದಲ್ಲಿ ಹೊಸ 200 ಮತ್ತು 50 ರೂ. ನೋಟುಗಳು ಲಭ್ಯ

11:50 AM Aug 29, 2017 | Team Udayavani |

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಇತ್ತೀಚೆಗೆ ಬಿಡುಗಡೆಗೊಳಿಸಿರುವ ಹೊಸ 200 ಹಾಗೂ 50 ರೂ. ಮುಖಬೆಲೆಯ ನೋಟುಗಳು ಸೋಮವಾರದಿಂದ ನಗರದ ಆರ್‌ಬಿಐ ಪ್ರಾದೇಶಿಕ ಬ್ಯಾಂಕ್‌ನಲ್ಲಿ ಲಭವಾಗುತ್ತಿವೆ. 

Advertisement

ಆರ್‌ಬಿಐನಿಂದ ಆಗಸ್ಟ್‌ 25ರಂದು ಹೊಸ ನೋಟುಗಳನ್ನು ಬಿಡುಗಡೆಗೊಳಿಸಲಾಗಿದ್ದು, ಸೋಮವಾರದಿಂದ ನಗರದ ಹಲವು ಬ್ಯಾಂಕ್‌ಗಳಿಗೆ ಹೊಸ ನೋಟುಗಳ ಪೂರೈಕೆ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ನಗರದ ಹಲವಾರು ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಹೊಸ ನೋಟುಗಳು ಮಂಗಳವಾರದಿಂದಲೇ ದೊರೆಯುವ ಸಾಧ್ಯತೆಯಿದೆ. 

ಹೊಸ ನೋಟುಗಳು ದೊರೆಯುತ್ತಿವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ಭೇಟಿ ನೀಡಿ ಹೊಸ ನೋಟು ಪಡೆಯಲು ಮುಂದಾಗಿದ್ದಾರೆ. ಆದರೆ, ಹೊಸ ನೋಟುಗಳು ಬಂದಿಲ್ಲ ಎಂದು ತಿಳಿದು ನಗರದ ಕೇಂದ್ರ ಕಚೇರಿಗೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕ್‌ ಬಳಿ ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಜನರು ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು. 

ಎಟಿಎಂಗಳಲ್ಲಿ ಹೊಸ ನೋಟುಗಳ ಲಭ್ಯತೆಗೆ ಯಂತ್ರಗಳನ್ನು ಉನ್ನತೀಕರಿಸುವ ಕಾರ್ಯ ಆರಂಭಗೊಂಡಿದ್ದು, ಮುಂಬೈ, ದೆಹಲಿ ಹಾಗೂ ಕೊಲ್ಕತ್ತಾಗಳಲ್ಲಿ ಮೊದಲ ಹಂತದಲ್ಲಿ ನೋಟುಗಳು ಲಭ್ಯವಾಗುತ್ತಿವೆ. ಆನಂತರದಲ್ಲಿ ಬೆಂಗಳೂರು, ಪುಣೆ ಹಾಗೂ ಮುಂಬೈ ನಗರಗಳಲ್ಲಿಯೂ ಆರಂಭಿಕವಾಗಿ ಕೆಲವೊಂದು ಎಟಿಎಂಗಳಲ್ಲಿ ಮಾತ್ರ ಹೊಸ ನೋಟುಗಳು ಲಭ್ಯವಾಗಲಿವೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next