Advertisement

ಅಧಿಕಾರಿಗಳ ನಿರ್ಲಕ್ಷ್ಯ: ವಳಗೇರಹಳ್ಳಿ ನಿವಾಸಿಗಳ ಪರದಾಟ

05:23 PM Jul 10, 2021 | Team Udayavani |

ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದಉಲ್ಲಾಳು ವಾರ್ಡ್‌ ಶಂಕರಮಠ ಬಡಾವಣೆವಳಗೇರಹಳ್ಳಿ ವಸತಿ ಸಮುಚ್ಚಯದ ಮುಖ್ಯದ್ವಾರದಲ್ಲಿ ಒಳಚರಂಡಿ ಒಡೆದುಹೋಗಿಸುಮಾರು 2 ತಿಂಗಳಾಗುತ್ತಾ ಬಂದಿದ್ದು, ಒಳಚರಂಡಿಯಿಂದ ಬರುತ್ತಿರುವ ದುರ್ನಾತದಿಂದ ವಸತಿ ಸಮುಚ್ಚಯದ ನಿವಾಸಿಗಳು ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.ವಸತಿ ಸಮುಚ್ಚಯದ ಜನರು ಅನೇಕ ಭಾರೀಜಲಮಂಡಳಿಯ ಅಧಿಕಾರಿಗಳಿಗೆ ದೂರುನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

Advertisement

ಬಡಾವಣೆಯ ಮುಖ್ಯದ್ವಾರದಲ್ಲಿಯೇ ಒಳಚರಂಡಿಯಿಂದ ದುರ್ನಾತಬೀರುತ್ತಿದ್ದು, ಬಡಾವಣೆಗೆ ಬೇರೆ ಯಾವುದೇದಾರಿಯಿಲ್ಲದೆ ಜನರು ಪರಿತಪಿಸುವಂತಾಗಿದೆ.ಶಂಕರಮಠ ಬಡಾವಣೆಯಲ್ಲಿ 20ಕ್ಕೂ ಹೆಚ್ಚುವಸತಿ ಸಮುಚ್ಚಯವಿದ್ದು, 3 ಸಾವಿರದಿಂದ 5ಸಾವಿರ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಕಳೆದ 2ತಿಂಗಳಿನಿಂದ ಮುಖ್ಯ ದ್ವಾರದಲ್ಲಿಯೇಒಳಚರಂಡಿ ಒಡೆದುಹೋಗಿದ್ದು, ಜಲಮಂಡಳಿಯ ಸಹಾಯಕ ಅಭಿಯಂತರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇಪ್ರಯೋಜನವಾಗಿಲ್ಲ.

ಕನಿಷ್ಠ ಸ್ಥಳ ಪರಿಶೀಲನೆಯನ್ನು ಮಾಡದೆ ಬೇಜವಾಬ್ದಾರಿಯಿಂದವರ್ತಿಸುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿವಿನಯ್‌ ಹೆಗಡೆ ತಮ್ಮ ಆಕ್ರೋಶವ್ಯಕ್ತಪಡಿಸಿದರು.ಕೊರೊನಾ ಸಂಕಷ್ಟದ ಕಾಲದಲ್ಲಿ ಶುಚಿತ್ವಕ್ಕೆಹೆಚ್ಚು ಮಹತ್ವವನ್ನು ಕೊಡಬೇಕಾದ ಸರ್ಕಾರದಅಧಿಕಾರಿಗಳು ಜನರ ಸಮಸ್ಯೆಯನ್ನು ಆಲಿಸದೆನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕ್ಷೇತ್ರದ ಶಾಸಕರು,ಸಹಕಾರ ಸಚಿವರಾದ ಎಸ್‌.ಟಿ.ಸೋಮಶೇಖರ್‌ಅವರು ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಮೂಲಗಳಿಂದ ಅನುದಾನವನ್ನು ತಂದು ಅಭಿವೃದ್ಧಿಪಡಿಸುತ್ತಿದ್ದರೂ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸದೇಇರುವುದು ವಿಪರ್ಯಾಸಸಂಗತಿಯಾಗಿದೆ.ನಿತ್ಯ ಇಲ್ಲಿ ಮಕ್ಕಳು, ಹಿರಿಯರು, ವೃದ್ಧರುವಾಯು ವಿಹಾರಕ್ಕೆ ಬರುತ್ತಿದ್ದು, ಒಂದುತಿಂಗಳಿನಿಂದ ಎಲ್ಲರೂ ಮೂಗು ಮುಚ್ಚಿಕೊಂಡುಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದುವಸತಿ ಸಮುಚ್ಚಯದ ನಿವಾಸಿ ನವ್ಯ ತಮ್ಮಆಸಹಾಯಕತೆ ವ್ಯಕ್ತಪಡಿಸಿದರು.

ರವಿ ವಿ.ಆರ್‌.ಕೆಂಗೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next