Advertisement
ಡಾ| ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನದ ಪ್ರಯುಕ್ತ ಪ್ರಬುದ್ಧ ನೌಕರರ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಮೈತ್ರಿ ಭವನದಲ್ಲಿ ನಡೆದ ವಿಶ್ವ ಜ್ಞಾನ ದಿನವನ್ನು ಉದ್ಘಾಟಿಸಿ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿದರು. ತುಳಿತಕ್ಕೆ ಒಳಗಾದವರ ಏಳಿಗೆ ಶಿಕ್ಷಣದ ಮೂಲಕವೇ ಸಾಧ್ಯವೆಂದು ಮನಗಂಡಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರು, ಸಮಾನತೆಯನ್ನು ಸಾರುವ ಸಂವಿಧಾನವನ್ನು ರಚಿಸಿ ಮಾದರಿಯಾಗಿದ್ದಾರೆ. ಸಮಪಾಲು ಮತ್ತು ಸಮಬಾಳು ಎಂಬ ಪರಿಕಲ್ಪನೆಯಡಿ ರಚನೆಯಾದ ಸಂವಿಧಾನವನ್ನು ಡಾ| ಅಂಬೇಡ್ಕರ್ ಅವರ ಚಿಂತನೆಯಂತೆ ಜಾರಿಗೆ ತರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆಯೆಂದು ಅವರು ಅಭಿಪ್ರಾಯಪಟ್ಟರು.
Related Articles
Advertisement
ಬ್ರಿಟಿಷರು ದೇಶವನ್ನು ಒಡೆದು ಆಳಿದರು ಎನ್ನುವ ವಿಚಾರ ಸುಳ್ಳಾಗಿದ್ದು, ಆರ್ಯರು ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಫಲವತ್ತಾದ ಭೂಮಿಯನ್ನು ತಮ್ಮದಾಗಿಸಿಕೊಂಡರೆಂದು ಆರೋಪಿಸಿದರು.
ದೇಶದ ನೈಜ ಮೂಲ ನಿವಾಸಿಗಳು ಒಗ್ಗಟ್ಟನ್ನು ಪ್ರದರ್ಶಿಸುವುದರಲ್ಲಿ ವಿಫಲರಾಗಿರುವುದರಿಂದಲೆ ಉನ್ನತೀ ಕರಣ ಹೊಂದಲು ಸಾಧ್ಯವಾಗಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಆಸ್ಪತ್ರೆಯ ಉಪ ವೈದ್ಯಾಧಿಕಾರಿಗಳಾದ ಡಾ| ಎಚ್.ವಿ. ದೇವದಾಸ್ ಅಧ್ಯಕ್ಷೀಯ ಭಾಷಣ ಮಾಡಿದರು.ವಿಶೇಷ ಆಹ್ವಾನಿತರಾದ ತುಮಕೂರಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಾಬಾಸಾಹೇಬ್ ಜಿನರಾಳ್ಕರ್ “ಮನುವಾದ ಮತ್ತು ಅಂಬೇಡ್ಕರ್ ವಾದ’ ವಿಷಯದ ಕುರಿತು ವಿಚಾರ ಮಂಡಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ವಿ. ಶಣ್ಮುಗಂ ಅವರು “ಪ್ರಸಕ್ತ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಡಾ| ಬಿ.ಆರ್ ಅಂಬೇಡ್ಕರ್‌ರವರ ತತ್ವಗಳ ಪ್ರಸ್ತುತತೆ’, ಬಹುಜನ್ ಇಂಟಲೆಕುcವಲ್‌ನ ಪ್ರಮುಖರಾದ ಡಾ| ಸಯ್ಯದ್ ರೋಷನ್ ಮುಲ್ಲಾ, “ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನೆಯಲ್ಲಿ ಅಲ್ಪಸಂಖ್ಯಾಕ ಮತ್ತು ಹಿಂದುಳಿದ ವರ್ಗಗಳ ಪಾತ್ರ’ ವಿಷಯದ ಕುರಿತು ಮಾತಾನಾಡಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತ ದಲ್ಲಿರುವ ಡಾ| ಅಂಬೇಡ್ಕರ್ ಭವನದಿಂದ ಆರಂಭಗೊಂಡ ಬೃಹತ್ ಬೈಕ್ ರ್ಯಾಲಿ ಮತ್ತು ಮೆರವಣಿಗೆಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಸತ್ಯನ್ ಹಾಗೂ ಪ್ರಬುದ್ಧ ನೌಕರರ ಒಕ್ಕೂಟದ ಸಲಹೆಗಾರರಾದ ಎಚ್.ಎಲ್. ದಿವಾಕರ್ ಉದ್ಘಾಟಿಸಿದರು.