Advertisement

ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಆವಿಷ್ಕಾರ ಅಗತ್ಯ: ಗುಡಿಸಾಗರ

02:28 PM Feb 17, 2020 | Suhan S |

ನರಗುಂದ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನೊಡನೆ ಪೈಪೋಟಿ ನಡೆಸಬೇಕಾದರೆ ಎಲ್ಲರೂ ವಿಜ್ಞಾನದ ಹೊಸ ಹೊಸ ಅವಿಷ್ಕಾರಗಳನ್ನು ಅರಿಯಬೇಕು. ದೇಶದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ಲಯನ್ಸ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

Advertisement

ಪಟ್ಟಣದ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಮನೋಭಾವ ಇಂದು ಎಲ್ಲ ಮಕ್ಕಳಲ್ಲಿ ಸಂಚಲನ ಮೂಡಿಸಬೇಕು. ಇದರಿಂದ ಉಜ್ವಲ ಭವಿಷ್ಯ ಮತ್ತು ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದು ಹೇಳಿದರು.

ನಿರ್ದೆಶಕರಾದ ಜಿ.ಬಿ. ಕುಲಕರ್ಣಿ, ಡಾ| ಪ್ರಭು ನಂದಿ, ನಿರ್ಣಾಯಕರಾಗಿ ಎಸ್‌.ಎಲ್‌. ಮರಿಗೌಡ್ರ, ಬಸವರಡ್ಡಿ ಕಮಕೇರಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಜಿ.ಬಿ. ಹಿರೇಮಠ, ಪ್ರಾಚಾರ್ಯ ಎಸ್‌.ಜಿ. ಜಕ್ಕಲಿ, ವಿಜ್ಞಾನ ಶಿಕ್ಷಕರಾದ ವಿನಾಯಕ ಚಿತ್ರಗಾರ, ಶಶಿಕಮಾರ ಅರಳಿಮಠ, ಜುಬೇರ, ಸಂಜೋತಾ ರೇವಣಕರ, ಮಾಲಾ ಜಾಬಣ್ಣವರ, ಐ.ಎ. ಕುಂಬಾರ, ಡಿ.ಬಿ.ಪಾಟೀಲ, ಬಸವರಾಜ ಹಲಕುರ್ಕಿ ಹಾಗೂ ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

150 ಮಾದರಿ ಪ್ರದರ್ಶನ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ 150 ಮಾದರಿಗಳು ಪ್ರದರ್ಶನಗೊಂಡವು. 450 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಶ್ರದ್ಧಾ ಸಂಜನಾ ಮುಧೊಳೆ ಅವರ ಡಿಜಿಟಲ್‌ ಡಸ್ಕ್ ಬಿನ್‌ ಮಾದರಿ, ಪುರಸಭೆ ಅಳವಡಿಸಿದ ತ್ಯಾಜ್ಯ ತೊಟ್ಟಿಗಳು ತಂಬಿದಾಕ್ಷಣ ಸಂಬಂಧಪಟ್ಟ ಅಧಿ ಕಾರಿಗಳಿಗೆ, ಸಿಬ್ಬಂದಿಗೆ ಸಂದೇಶ ಕಳಿಸುವ ಈ ಮಾದರಿ ಗಮನ ಸೆಳೆಯಿತು.

ಪವಿತ್ರಾ ಈಟಿ, ಸಲ್ಮಾ ಅವರ ವಿವಿಧ ಶಕ್ತಿ ಮೂಲಗಳಿಂದ ವಿದ್ಯುತ್ಛಕ್ತಿ ಉತ್ಪಾದಿಸುವ ಮಾದರಿ ಸರಳ ರೀತಿಯಲ್ಲಿ ವಿದ್ಯುತ್‌ ಉತ್ಪಾದನೆ ಪ್ರತಿಬಿಂಬಿಸಿತು. ನಿಖೀಲ್‌ ಮಲ್ಲನಗೌಡ್ರ ತಯಾರಿಸಿದ ತ್ಯಾಜ್ಯ ನೀರು ಮರುಬಳಕೆ ಮಾದರಿ, ಭೂಮಿಕಾ ಪಾಟೀಲ, ಪಲ್ಲವಿ ಹಿರೇಮಠರ ಸಸ್ಯಗಳನ್ನು ಸ್ಥಳಾಂತರಿಸಿ, ಮರು ನೆಡುವಿಕೆ ಮಾದರಿ ಗಮನ ಸೆಳದವು.

Advertisement

ವಿಶ್ವನಾಥ ವಗ್ಗರ, ನಜೀರ ಚವಡಿ, ಶಿರಿಯನ್ನವರ ಆಧುನಿಕ ಭಾರತ (ಅತಿವೃಷ್ಟಿ, ಅನಾವೃಷ್ಟಿ ಒಳಗೊಂಡ) ಮಾದರಿ, ವಿಜಯ ಪೂಜಾರ, ಮನೋಜ ಹೆಬ್ಬಳ್ಳಿ, ಆಕಾಶ ಲಕ್ಕುಂಡಿಯವರ ಸ್ವತ್ಛ ಭಾರತ ಮಾದರಿ ಆಕರ್ಷಣೆ ತಂದವು.

ಕಿರಣ ಗಾಣಿಗೇರ, ಕಿಶನ್‌ ಇಂಗಳಳ್ಳಿ, ಎಂ.ಮುಝಾಹಿದ್‌ ಅವರ ಕೃಷಿಯಲ್ಲಿ ತಂತ್ರಜ್ಞಾನ, ಕೃಷ್ಣವೇಣಿಯ ಭದ್ರತೆ ತುರ್ತು ಮುನ್ಸೂಚನೆ ಮಾದರಿ, ನಿಖೀಲ್‌ ಹಿರೇಮಠರ ಸೇನಾ ರೋಬೋಟ, ವಿನಯಾ, ವೈಷ್ಣವಿ, ತ್ರಿವೇಣಿಯವರ ಮಾನವರ ದೇಹದ ಅಂಗಗಳ ಪರಿಚಲನ ಮಾದರಿ ಗಮನ ಸೆಳೆದವು.ದೀಪಾ, ಸೃಷ್ಟಿ, ಅಕ್ಷತಾ ತಂಡದ ಮಳೆ ನೀರು ಕೊಯ್ಲು, ಸುಮಿತ ಜಗಲಿ ತಂಡದ ಗಡಿ ಭದ್ರತಾ ಮಾದರಿ ಪ್ರದಶರ್ನಗೊಂಡವು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಖಗೋಳ ಶಾಸ್ತ್ರ, ಕೃಷಿ ಸೇರಿದಂತೆ ವಿವಿಧ ಮಾದರಿ ಪ್ರದರ್ಶಿಸಿದರು. ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ನಾಗರಿಕರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next