Advertisement
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್‌ಇಸಿಎಫ್) ಇದೀಗ ಮಂಗಳೂರು ನಗರದಲ್ಲಿ ಮಾರ್ಚ್ 1ರಂದು ರಾಜ್ಯ ಮಟ್ಟದ ಪರಿಸರ ಸಮ್ಮೇಳನ ನಡೆಸಲು ತೀರ್ಮಾನಿಸಿದೆ. ಅಂದಹಾಗೆ, ಈ ಸಮ್ಮೇಳನದಲ್ಲಿ ಯಾವುದೇ ವೇದಿಕೆಗಳಿರುವುದಿಲ್ಲ. ಬದಲಾಗಿ ನ್ಯಾಯಾಲಯದ ಕಟಕಟೆಯ ರೀತಿ ಇರುತ್ತದೆ. ನ್ಯಾಯಾಧೀಶರಾಗಿ ಓರ್ವ (ಹೋರಾಟಗಾರರು), 6 ಮಂದಿ ವೃತ್ತಿಪರ ವಕೀಲರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪರಿಸರ ಹೋರಾಟಗಾರರು ಭಾಗವಹಿಸಲಿದ್ದು, ಅವರು ಎದುರಿಸಿದ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಹೇಳಲಿದ್ದಾರೆ. ಈ ವಿಷಯಗಳ ಬಗ್ಗೆ 6 ಮಂದಿ ವೃತ್ತಿ ಪರ ವಕೀಲರು ಮಾರ್ಗದರ್ಶನ ನೀಡಲಿದ್ದಾರೆ.
ಪರಿಸರ ಸಮ್ಮೇಳನದಲ್ಲಿ ಪ್ರಮುಖವಾಗಿ ಐದು ವಿಚಾರಗಳ ಬಗ್ಗೆ ಬೆಳಕು ಚೆಲ್ಲಲು ನಿರ್ಧರಿಸಲಾಗಿದೆ. ಎಂಡೋಸಲ್ಫಾನ್ ಸಹಿತ ಪ್ರಕೃತಿ ಮೇಲೆ ವಿಷ ಪ್ರಹಾರ, ಅರಣ್ಯಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆ, ಕಾಡಿನ ಮೂಲ ನಿವಾಸಿಗಳ ಹಕ್ಕುಗಳ ಬಗ್ಗೆ ಚರ್ಚೆ, ಪಶ್ಚಿಮಘಟ್ಟ ಸಹಿತ ಕರ್ನಾಟಕದ ಅರಣ್ಯ ಹೇಗೆ ರಕ್ಷಿಸಬಹುದು, ಕೋಲಾರ-ಚಿಕ್ಕಬಳ್ಳಾಪುರ ಪ್ರದೇಶದ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ಪರಿಸರವಾದಿಗಳು ಚರ್ಚೆ ನಡೆಸಲಿದ್ದಾರೆ. ಸಮ್ಮೇಳನದಲ್ಲಿ ಯಾವುದೆಲ್ಲ ಚರ್ಚೆಗಳು ನಡೆದಿವೆ ಎನ್ನುವುದನ್ನು ಪಟ್ಟಿ ಮಾಡಿ ಒಂದು ನಿರ್ಣಯಕ್ಕೆ ಬರಲಿದ್ದಾರೆ.
Related Articles
ಸಾಹಿತ್ಯದ ಮುಖೇನ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ನಮ್ಮ ದೇಶದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಈ ಸಮ್ಮೇಳನದಲ್ಲಿ ಪರಿಸರ ಆರಾಧಕರನ್ನು ಕರೆಸಿ, ಶಿಥಿಲಗೊಳ್ಳುತ್ತಿರುವ ಅರಣ್ಯ ಮತ್ತು ಪರಿಸರ ರಕ್ಷಣೆಗೆ ನಿರ್ಣಯ ಕೈಗೊಂಡು ಅದನ್ನು ಸರಕಾರದ ಗಮನಕ್ಕೆ ತರಲಿದ್ದೇವೆ.
– ಸ್ವರ್ಣ ಸುಂದರ್, ಎನ್‌ಇಸಿಎಫ್ ಅಧ್ಯಕ್ಷ
Advertisement
ಟ್ರೀ ಪಾರ್ಕ್‌ನಲ್ಲಿ ಆಯೋಜನೆಮಾಚ್ 1ರಂದು ನಡೆಸಲು ಉದ್ದೇಶಿಸಿರುವ ರಾಜ್ಯ ಮಟ್ಟದ ಪರಿಸರ ಸಮ್ಮೇಳನವು ನಗರದ ತಣ್ಣೀರುಬಾವಿ ಬಳಿ ಇರುವ ಟ್ರೀ ಪಾರ್ಕ್‌ನಲ್ಲಿ ನೆರವೇರಲಿದೆ. ಸಾಮಾನ್ಯವಾಗಿ ಸಮ್ಮೇಳನಗಳು ಸಭಾಂಗಣದಲ್ಲಿ ನಡೆಯುತ್ತವೆ. ಆದರೆ, ಪರಿಸರ ಸಮ್ಮೇಳನವು ಪ್ರಕೃತಿ ಮಡಿಲಿನಲ್ಲಿಯೇ ನಡೆಯುವುದು ವಿಶೇಷ. ತಣ್ಣೀರುಬಾವಿ ಟ್ರೀ ಪಾರ್ಕ್‌ಗೆ ತೆರಳುವಾಗ ಬೋಟ್ ಮುಖೇನ ಫಲ್ಗುಣಿ ನದಿ ದಾಟಿ ಹೋಗಬೇಕು. ಹೊರ ಜಿಲ್ಲೆಯ ಮಂದಿಗೆ ಇದೊಂದು ಒಳ್ಳೆಯ ಅನುಭವವಾಗಲಿದೆ ಎನ್ನುತ್ತಾರೆ ಆಯೋಜಕರು. -ನವೀನ್ ಭಟ್ ಇಳಂತಿಲ