Advertisement
1991ರಿಂದ 2019ವರೆಗೆ ಒಟ್ಟು 28 ವರ್ಷ ಬಿಜೆಪಿ ಸಂಸದರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. 2009 ಹಾಗೂ 2014ರಲ್ಲಿ ಸತತವಾಗಿ ಆಯ್ಕೆಯಾಗಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಈ ಬಾರಿಯೂ ಸ್ಪರ್ಧಿಸುತ್ತಿದ್ದು ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ಅಂದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ 1,57,273 ಅಧಿಕ ಮತಗಳನ್ನು ಪಡೆದುಕೊಂಡಿದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಬಿಜೆಪಿಯ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್‌ನ ಬಿ.ಜನಾರ್ದನ ಪೂಜಾರಿ ವಿರುದ್ಧ 1,42,000 ಮತಗಳ ಅಂತರದಿಂದ ಜಯ ಸಾಧಿಸಿದ್ದರು.
2018ರ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯಲ್ಲಿ ಇನ್ನಷ್ಟು ಹೆಚ್ಚಳವಾಗಿದ್ದು, ಬಿಜೆಪಿಯ ಗೆಲುವಿನ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ನರೇಂದ್ರ ಮೋದಿಯವರ ಸಾಧನೆಗಳನ್ನು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.
ಕ್ಷೇತ್ರದಲ್ಲಿ 1991ರಿಂದ ಲೋಕಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಅನುಭವಿಸುತ್ತಾ ಬಂದಿರುವ ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಪಣತೊಟ್ಟು 4 ದಶಕಗಳ ಬಳಿಕ ಹೊಸ ಮುಖಕ್ಕೆ ಅವಕಾಶ ನೀಡಿ ಮಿಥುನ್ ರೈ ಅವರನ್ನು ಕಣಕ್ಕಿಳಿಸಿದೆ.
ನಳಿನ್ ಕುಮಾರ್ ಕಟೀಲು ಅವರ ವೈಫಲ್ಯಗಳನ್ನು ಪಟ್ಟಿ ಮಾಡಿ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿದೆ. ಜತೆಗೆ ಮೋದಿ ಸರಕಾರ 5 ವರ್ಷಗಳ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದಾಗಿ ಮತದಾರರ ಮುಂದೆ ಪ್ರತಿಪಾದಿಸುತ್ತಿದೆ. ಇದೆಲ್ಲಾ ಅಂಶಗಳು ಈ ಬಾರಿ ನಮಗೆ ಗೆಲವು ತಂದುಕೊಡಲಿದೆ ಎಂಬ ಆತ್ಮವಿಶ್ವಾಸ ಕಾಂಗ್ರೆಸ್ ಪಾಳೆಯದಲ್ಲಿದೆ.
ಎಸ್‌ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್ ಮಹಮ್ಮದ್ ತುಂಬೆ ಸ್ಪರ್ಧಿಸುತ್ತಿದ್ದಾರೆ. ಎಸ್‌ಡಿಪಿಐ ಕಳೆದ ಬಾರಿ 27,254 ಮತಗಳನ್ನು ಗಳಿಸಿತ್ತು . ಈ ಬಾರಿಯೂ ಎಸ್‌ಡಿಪಿಐ ಸಾಕಷ್ಟು ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ಗಳಿಸುವ ಸಾಧ್ಯತೆಗಳಿವೆ. ಕಳೆದ ಬಾರಿ ಸ್ಪರ್ಧಿಸಿದ್ದ ಎಡ ಪಕ್ಷಗಳು ಈ ಬಾರಿ ಕಣದಿಂದ ದೂರ ಉಳಿದಿದ್ದು ಇದರ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ ಪಾಲಾಗುವ ನಿರೀಕ್ಷೆಯಿದೆ.
ವಿದ್ಯಾವಂತ ಮತದಾರರೇ ಹೆಚ್ಚಿರುವ ಕಾರಣ ಈ ಕ್ಷೇತ್ರದಲ್ಲಿ ಹಣ ಮತ್ತು ಆಮಿಷಗಳ ಪ್ರಭಾವ ಅಷ್ಟೊಂದಿಲ್ಲ. ಸ್ಥಳೀಯ ವಿಚಾರಗಳಿಗಿಂತ ರಾಷ್ಟ್ರ ಮತ್ತು ರಾಜ್ಯ ರಾಜಕಾರಣವೇ ಮತಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದು ಕಣದಲ್ಲಿ ಕಂಡುಬರುತ್ತಿರುವ ಚಿತ್ರಣ.
ಯಾವ ಜಾತಿ ಎಷ್ಟೆಷ್ಟು?: ಜಾತಿವಾರು ಲೆಕ್ಕಚಾರದ ಬಗ್ಗೆ ಅಧಿಕೃತ ಅಂಕಿಅಂಶಗಳಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು 4.20 ಲಕ್ಷ ಬಿಲ್ಲವರು, 3.60 ಲಕ್ಷ ಮುಸ್ಲಿಮರು, 1.55 ಲಕ್ಷ ಕ್ರಿಶ್ಚಿಯನ್, 2.20 ಲಕ್ಷ ಬಂಟ ಸಮುದಾಯದ ಮತದಾರದಿದ್ದಾರೆ. ಕುಲಾಲ್, ಮೊಗವೀರ, ಬ್ರಾಹ್ಮಣ, ಜೈನ್, ಜಿಎಸ್‌ಬಿ, ವಿಶ್ವಕರ್ಮ, ಕ್ಷತ್ರಿಯ, ಗಾಣಿಗ, ದೇವಾಡಿಗ, ಒಕ್ಕಲಿಗ, ಮಡಿವಾಳ ಸೇರಿ ಇತರ ಸಮುದಾಯದ ಸುಮಾರು 5 .60ಲಕ್ಷ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
ಒಟ್ಟು ಮತದಾರರು: 17,24,566ಪುರುಷರು: 8,45,283
ಮಹಿಳೆಯರು: 879186 * ಕೇಶವ ಕುಂದರ್