Advertisement

ಲಂಡನ್‌ನಲ್ಲಿ ಚೆನ್ನೈ ಮೂಲದ ಯುವತಿ ಅಪಹರಣ: ಝಕೀರ್‌ಗೆ ಲಿಂಕ್‌?

01:52 AM Aug 26, 2020 | Hari Prasad |

ಚೆನ್ನೈ: ಲಂಡನ್‌ನಲ್ಲಿ ಚೆನ್ನೈ ಮೂಲದ ಯುವತಿಯನ್ನು ಬಾಂಗ್ಲಾದೇಶದ ದುಷ್ಕರ್ಮಿಗಳು ಅಪಹರಣ ಮಾಡಿದ ಪ್ರಕರಣಕ್ಕೂ, ವಿವಾದಿತ ಇಸ್ಲಾಮಿಕ್‌ ವಿದ್ವಾಂಸ ಝಕೀರ್‌ ನಾಯ್ಕ್ ಗೂ ಸಂಬಂಧವಿದೆಯೇ?

Advertisement

ಈ ಅಪಹರಣದಲ್ಲಿ ಝಕೀರ್‌ ನಾಯ್ಕ ಜತೆ ನಂಟು ಹೊಂದಿರುವ ಬಾಂಗ್ಲಾದ ಸಂಘಟಿತ ಗ್ಯಾಂಗ್‌ವೊಂದರ ಪಾತ್ರವಿದೆ ಎಂಬ ಅನುಮಾನದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಆರಂಭಿಸಿದೆ.

ಕಳೆದ ಮೇ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮಿಯು ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರಿಯನ್ನು ಬಾಂಗ್ಲಾದೇಶೀಯರು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದರು.

ಅಲ್ಲದೆ, ತಮ್ಮ ಪುತ್ರಿಯನ್ನು ತೀವ್ರಗಾಮಿತ್ವದ ಕಡೆಗೆ ಆಕರ್ಷಿತಳಾಗುವಂತೆ ಮಾಡಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಒತ್ತಾಯ ಪೂರ್ವಕವಾಗಿ ಮತಾಂತರಿಸಲಾಗಿದೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು. ಹೀಗಾಗಿ ಆರಂಭದಲ್ಲಿ ಚೆನ್ನೈ ಕ್ರೈಂ ಬ್ರಾಂಚ್‌ ಪ್ರಕರಣ ದಾಖಲಿಸಿಕೊಂಡಿತ್ತು.

ಬಳಿಕ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.
ಬಾಂಗ್ಲಾದ ಮಾಜಿ ಸಂಸದ ಸರ್ದಾರ್‌ ಶೇಖಾವತ್‌ ಹುಸೇನ್‌ ಬೊಕುಲ್‌ ಅವರ ಪುತ್ರ ನಾದ ನಫೀಸ್‌ನನ್ನು ಪ್ರಮುಖ ಆರೋಪಿ ಎಂದು ಎಫ್ಐಆರ್‌ನಲ್ಲಿ ಹೆಸರಿಸಲಾಗಿತ್ತು.

Advertisement

ಜತೆಗೆ, ಆರೋಪಿಗಳ ಪೈಕಿ ಝಕೀರ್‌ ನಾಯ್ಕ್ ಹೆಸರೂ ಇತ್ತು. ಇವರು ಪರಸ್ಪರ ನಂಟು ಹೊಂದಿದ್ದಾರೆಂಬ ಶಂಕೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ‘ಝೀ ನ್ಯೂಸ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next