Advertisement

ವೈದ್ಯರ ರಾಷ್ಟ್ರೀಯ ಕ್ರಿಕೆಟ್‌ ಕೂಟ ಆರಂಭ

06:00 AM Apr 12, 2018 | Team Udayavani |

ಉಡುಪಿ: ಉಡುಪಿ ಜಿಲ್ಲಾ  ಕ್ರಿಕೆಟ್‌ ಸಂಸ್ಥೆಯ ಆಸರೆಯಲ್ಲಿ ಮಾಹೆ-ಪರಿಗಣಿತ ವಿಶ್ವ ವಿದ್ಯಾಲಯದ ಬೆಳ್ಳಿಹಬ್ಬದ ಅಂಗವಾಗಿ ರಾಷ್ಟ್ರೀಯ ವೈದ್ಯರುಗಳ ಲೆದರ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ “ಸಿಲ್ವರ್‌ ಕ್ರಿಕೆಟ್‌ ಲೀಗ್‌ -2018 (ಎಸ್‌.ಸಿ.ಎಲ್‌.) ಮಣಿಪಾಲದಲ್ಲಿ ಬುಧವಾರ ಆರಂಭಗೊಂಡಿತು. ದಿನದ ಮೊದಲ ಪಂದ್ಯದಲ್ಲಿ ದಾವಣಗೆರೆ ಬ್ಲೆಂಡೆಡ್‌ ಕನ್ನಡಿಗಾಸ್‌ ತಂಡವು ಕ್ಯಾಲಿಕಟ್‌ ಹರಿಕೇನ್‌ ತಂಡದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. 2ನೇ ಪಂದ್ಯದಲ್ಲಿ ಮುಂಬಯಿಯ ತುಂಗಾ ತಂಡದ ವಿರುದ್ಧ ಪದ್ಮಾಲಯ ಸ್ಟಾರ್‌ ಪುಣೆ ತಂಡ 4 ವಿಕೆಟ್‌ಗಳ ಜಯ ದಾಖಲಿಸಿತು. 

Advertisement

ಪಂದ್ಯಾವಳಿಯನ್ನು ಮಾಹೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಗೌರವಾಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಉದ್ಘಾಟಿಸಿ, ವೈದ್ಯರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ವೃತ್ತಿಜೀವನಕ್ಕೆ ಹೊಸ ಹುರುಪು ದೊರೆಯುತ್ತದೆ ಎಂದರು. ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಡಾ| ಕೃಷ್ಣ ಪ್ರಸಾದ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಭಯಪಡಬೇಕಾದ ಸಂದರ್ಭ ಎದುರಿಗಿದೆ. ಅಲ್ಲಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಭಯದ ವಾತಾವರಣದಲ್ಲಿ ಕೆಲಸ ಮಾಡುವ ವೈದ್ಯರಿಗೆ ಈ ರೀತಿಯ ಪಂದ್ಯಾಟಗಳು ನಿರಾಳತೆಯನ್ನು ಒದಗಿಸಬಲ್ಲದು ಎಂದರು.  ಡಾ| ನವೀನ್‌ ಪಾಟೀಲ್‌,  ಮೆಡಿ ಲ್ಯಾಬ್‌ ಸಂಸ್ಥೆಯ ಆಡಳಿತ ನಿರ್ದೇಶಕ ಜ್ಯೋತಿಪ್ರಸಾದ್‌ ಹೆಗ್ಡೆ ಅವರು ಮುಖ್ಯಅತಿಥಿಯಾಗಿದ್ದರು. ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌ ಸ್ವಾಗತಿಸಿ, ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ  ಪರ್ಕಳ ವಂದಿಸಿದರು. ಡಾ| ಅಜಯ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next