Advertisement
ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಸ.ಹಿ.ಪ್ರಾ. ಶಾಲೆಯ ಮಕ್ಕಳಿಗೆ ಕನ್ನಡದ ರಾಷ್ಟ್ರ ಕವಿ ಹಾಗೂ ಸಾಹಿತಿಗಳ ವಿವಿಧ ಹೆಸರುಗಳನ್ನು ಇಡಲಾಗಿದೆ. ವಿದ್ಯಾಥಿಗಳಿಗೆ ಸಾಹಿತಿಗಳ ಮತ್ತು ಕವಿಗಳ ಹೆಸರಿಡುವ ಮೂಲಕ ಇಲ್ಲಿನ ಶಿಕ್ಷಕರು ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುತ್ತಿದ್ದಾರೆ. ಪುಟಾಣಿಗಳನ್ನು ಸಾಹಿತಿಗಳ ಹೆಸರಲ್ಲಿ ಇತರರು ಕರೆದು ಎಲ್ಲರ ಬಾಯಲ್ಲಿ ಸಾಹಿತಿಗಳ ಹೆಸರು ಹರಿದಾಡಿ ಸಾಹಿತಿ ಮತ್ತು ಸಾಹಿತ್ಯದ ಕುರಿತು ಅಭಿರುಚಿ ಹೆಚ್ಚಿಸುತ್ತದೆ. ಸ್ವತಃ ವಿದ್ಯಾರ್ಥಿಗಳು, ಆಪ್ತರು ಸಾಹಿತಿಗಳ ಹಿನ್ನೆಲೆ, ಹುಟ್ಟೂರು ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಶಿಕ್ಷಕರ ಉದ್ದೇಶ.
ಹಾಡಿಕಲ್ಲು ಪೂರ್ಣ ನಾಗರಿಕತೆಗೆ ತೆರೆದುಕೊಂಡಿಲ್ಲದ ಊರಿದು. ಇಂದಿಗೂ ಕಾಲ್ನಡಿಗೆ ಇಲ್ಲವೇ ಖಾಸಗಿ ವಾಹನಗಳ ಮೂಲಕವೇ ಓಡಾಡುತ್ತಿರುವ ಗ್ರಾಮಸ್ಥರು. ಶಾಲೆಯಿದ್ದ ಊರಿಗೆ ಕಳೆದ ವರ್ಷ ಶಂಕಿತ ನಕ್ಸಲರು ಬಂದಿದ್ದರು. ಅದೇ ವರ್ಷ ಶಾಲೆ ಯಲ್ಲಿ ಮಕ್ಕಳಿಲ್ಲದೆ ಮುಚ್ಚುವ ಭೀತಿಯೂ ಎದುರಾಗಿತ್ತು. ಅಂತಹ ಶಾಲೆಯನ್ನು ಉಳಿಸುವ ಪ್ರಯತ್ನಕ್ಕೆ ಗ್ರಾಮಸ್ಥರು ಮುಂದಾ ಗಿದ್ದರು. ಈಗ ಶಿಕ್ಷಕರ ಪ್ರಯೋಗ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡಿದೆ.
Related Articles
Advertisement
“ಇಲ್ಲ’ಗಳ ಸವಾಲುತಾಲೂಕು ಕೇಂದ್ರದಿಂದ ದೂರದಲ್ಲಿ ಕಾಡಿನ ತಪ್ಪಲಿನಲ್ಲಿ ಇರುವ ಊರಿನಲ್ಲಿ ಈ ಶಾಲೆ ಇದೆ. ಇಲ್ಲಿಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಸಂಪರ್ಕ ಸೇತುವೆಗಳಿಲ್ಲ. ವಿದ್ಯುತ್, ದೂರವಾಣಿ, ಮೊಬೈಲ್ ಯಾವ ವ್ಯವಸ್ಥೆಗಳೂ ಇಲ್ಲ. ನೆಟ್ ವರ್ಕ್ ಸಿಗಬೇಕಿದ್ದರೆ ಗುಡ್ಡ ಹತ್ತಬೇಕು. ಇಲ್ಲವೇ ಐದು ಮೈಲು ದೂರ ನಡೆದು ಸಿಗ್ನಲ್ ಇರುವಲ್ಲಿಗೆ ಬರಬೇಕು. ಇಂತಹ ಸ್ಥಳದಲ್ಲಿ ಇರುವ ಶಾಲೆ ಇಲ್ಲಿಯವರಿಗೆ ಆಪದಾºಂಧವ. ಪ. ಜಾತಿ, ಪ. ಪಂಗಡ ಸಹಿತ ಇತj ವರ್ಗದವರು ಇಲ್ಲಿದ್ದಾರೆ. ಇಂತಹ ಶಾಲೆಯಲ್ಲಿ ಪಾಠ ಹೇಳಲು ಶಿಕ್ಷಕರು ಒಪ್ಪುವುದೇ ಕಷ್ಟ. ಅಂತದರಲ್ಲಿ ವಿನೂತನ ಪ್ರಯೋಗದ ಮೂಲಕ ಕನ್ನಡ ಹಾಗೂ ಶಾಲೆ ಉಳಿವಿಗೆ ಶಿಕ್ಷಕರ ಪ್ರಯತ್ನ ಶ್ಲಾಘನೀಯ. ಇದೇ ಗ್ರಾಮದಲ್ಲಿ ಈ ಹಿಂದೆ ಶಿಕ್ಷಕರ ಗ್ರಾಮ ವಾಸ್ತವ್ಯದ ಪ್ರಸ್ತಾವವಿತ್ತು. ಇದೇ ಗ್ರಾಮದಲ್ಲಿ ಈ ತಿಂಗಳು ಪತ್ರಕರ್ತರ ಗ್ರಾಮ ವಾಸ್ತವ್ಯವೂ ನಡೆಯುತ್ತಿದೆ. ಜ್ಞಾನ ಹೆಚ್ಚಳ ಪ್ರಯತ್ನ
ಮಕ್ಕಳು ಸ್ವತಃ ಅನುಭವಿಸಿ, ಅರಿತು ಕೊಳ್ಳುವುದಲ್ಲದೆ ಮಕ್ಕಳ ಹೆಸರನ್ನು ಕರೆಯುವ ವ್ಯಕ್ತಿಯಲ್ಲೂ ಕನ್ನಡ ನಾಡು – ನುಡಿ, ಸಾಹಿತ್ಯ, ಕವಿಗಳ ಬಗ್ಗೆ ಅರಿಯಲು ಕಾರಣವಾಗುತ್ತದೆ. ಜ್ಞಾನವೂ ಹೆಚ್ಚುತ್ತದೆ ಎನ್ನುವ ಉದ್ದೇಶದಿಂದ ಈ ಪ್ರಯತ್ನ ಎನ್ನುತ್ತಾರೆ ಶಿಕ್ಷಕ ಪ್ರಸಾದ್. ಶ್ಲಾಘನೀಯ
ಅಲ್ಲಿನ ಶಿಕ್ಷಕರು ವೈಯಕ್ತಿಕವಾಗಿ ಕನ್ನಡ ಶಾಲೆ ಉಳಿವಿನ ಪ್ರಯತ್ನ ನಡೆಸುತ್ತಿದ್ದಾರೆ. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಇಂತಹ ಮನಃಸ್ಥಿತಿಯ ಶಿಕ್ಷಕರ ಕೊಡುಗೆ ಇಂದಿನ ಅಗತ್ಯ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಲ್ಲದೆ. ಜ್ಞಾನ ಹೆಚ್ಚಿಸಲು ಕಾರಣವಾಗುತ್ತದೆ.
– ಮಹಾದೇವ ಎಸ್.ಪಿ. ಬಿಇಒ, ಸುಳ್ಯ