Advertisement

ಗಾಂಧಿ ಕುಟುಂಬದ ಸದಸ್ಯರ ಹೆಸರಿಗಿದೆ “ಬ್ರಾಂಡ್‌ ಈಕ್ವಿಟಿ’

01:03 AM Aug 18, 2019 | sudhir |

ಕೋಲ್ಕತಾ: ಗಾಂಧಿ ಕುಟುಂಬ ಸದಸ್ಯರ ಹೆಸರಿಗೆ “ಬ್ರಾಂಡ್‌ ಈಕ್ವಿಟಿ’ (ನಾಮಾಧಾರಿತ ಮೌಲ್ಯ) ಇದೆ. ಹಾಗಾಗಿಯೇ, ಕಾಂಗ್ರೆಸ್‌ ಪಕ್ಷವನ್ನು ಗಾಂಧಿ ಕುಟುಂಬ ಹೊರತಾದ ಯಾವುದೇ ವ್ಯಕ್ತಿ ಮುನ್ನಡೆಸುವುದು ಬಲು ಕಷ್ಟ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ.

Advertisement

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಚಿಂತನ – ಮಂಥನ ಸಭೆಗಳು, ಪರಾಮರ್ಶೆಗಳು ನಡೆದ ನಂತರ ಸೋನಿಯಾ ಗಾಂಧಿಯವರನ್ನೇ ಪುನಃ ಅಧ್ಯಕ್ಷರನ್ನಾಗಿ ಆರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮಾಡಿದ್ದ ಟೀಕೆಗಳಿಗೆ ಚೌಧರಿ ಈ ರೀತಿ ಪ್ರತ್ಯುತ್ತರ ನೀಡಿದ್ದಾರೆ.

ಅಲ್ಲದೆ, ಸದ್ಯದ ಮಟ್ಟಿಗೆ ಕಾಂಗ್ರೆಸ್‌ ಮಂಕಾಗಿರಬಹುದು. ಆದರೆ, ಮುಂಬರುವ ದಿನಗಳಲ್ಲಿ ಪ್ರಾಂತೀಯ ಪಕ್ಷಗಳು ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳುತ್ತವೆ. ಆಗ, ದೇಶದಲ್ಲಿ ಎರಡು ಧ್ರುವ ಆಧಾರಿತ ರಾಜಕೀಯ ಪರಿಸ್ಥಿತಿ ಆವರಿಸುತ್ತದೆ. ಅಂಥ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತೆ ಪುನಶ್ಚೇತನಗೊಂಡು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next