Advertisement

ಮಗುವಿಗೆ ಅಟಲ್‌ ಜೀ ಹೆಸರು!

06:20 AM Sep 10, 2018 | Team Udayavani |

ಲಿಂಗಸುಗೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನರಾದ 13ನೇ ದಿನಕ್ಕೆ ಜನಿಸಿದ ತಮ್ಮ ಮಗುವಿಗೆ “ಅಟಲ್‌ಜೀ’ ಎಂದು ನಾಮಕರಣ ಮಾಡಲು ಪಾಲಕರು ತೀರ್ಮಾನಿಸಿದ್ದಾರೆ. 

Advertisement

ಆ.29ರಂದು ಪಟ್ಟಣದ ನಿವಾಸಿ ಶರಣ ಬಸವರಾಜ ಹಿರೇಮಠ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದು ಅಟಲ್‌ ಜೀ ನಿಧನ ಹೊಂದಿ 13ನೇ ದಿನವಾಗಿತ್ತು. ಹೀಗಾಗಿ ಅಟಲ್‌ ಜೀ ಅವರೇ ತಮ್ಮ ಕುಟುಂಬದಲ್ಲಿ ಪುನರ್ಜನ್ಮ ತಾಳಿದ್ದಾರೆ ಎಂಬುದಾಗಿ ಕುಟುಂಬದವರು ಭಾವಿಸಿದ್ದಾರೆ. ಇದರ ನೆನಪಿಗಾಗಿ ಶರಣಬಸವರಾಜ ಹಿರೇಮಠ ಅವರ ತಂದೆ ರುದ್ರಯ್ಯಸ್ವಾಮಿ ಮಗುವಿಗೆ “ಅಟಲ್‌ ಬಿಹಾರಿ ವಾಜಪೇಯಿ’ ಎಂದು ನಾಮಕರಣ ಮಾಡುವಂತೆ ಸಲಹೆ ನೀಡಿದ್ದಾರೆ. 

ಹೀಗಾಗಿ ಕುಟುಂಬದ ಸದಸ್ಯರು ಮಗುವಿಗೆ “ಅಟಲ್‌ ಜೀ’ ಎಂದು ಹೆಸರಿಡಲು ನಿರ್ಧರಿಸಿದ್ದು, ನಾಮಕರಣ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next