ಹೂವಿನಹಡಗಲಿ: ಪಟ್ಟಣದ ಪುರಸಭೆಗೆ ಮೇ 29ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆ ದಿನವಾಗಿದ್ದು, ಒಟ್ಟು 18 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ಮೂಲಕ ಹಡಗಲಿ ಪುರಸಭೆಯಲ್ಲಿ ಒಟ್ಟು 54 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಬಿಜೆಪಿಯಿಂದ 1ನೇ ವಾರ್ಡಿಗೆ ಎಸ್. ನಿಜಲಿಂಗಪ್ಪ, 2. ಗಡಗಿ ಗುರುಬಸಮ್ಮ, 3. ಕವಿತಾ ಎಸ್ ಪಾಟೀಲ, 4. ಸೌಭಾಗ್ಯ, 5. ಕೆ. ಹನುಮಂತಪ್ಪ 6.ವೀರೇಶ 7. ಶಾಂತವ್ವ, 8. ಶೋಭಾ, 9. ಸೊಪ್ಪನ ಬಸವರಾಜ್, 10. ಮಂಜುನಾಥ ಜೆ, 11. ಬಿ. ರೇಣುಕಮ್ಮ, 12. ಪಿ. ನಿಂಗಪ್ಪ. 13. ಶಿವಪ್ಪ , 15. ದಾದಾಪೀರ್, 16.ಅನಿಲ್ಬಾಷಾ, 17. ಈಟಿ ಮಾಲತೇಶ್, 18. ಗೀತಾ ಮಲ್ಕಿ ಒಡೆಯರ್, 20. ನಾವಡೆ ಗೌರಮ್ಮ, 21.ಎಂ. ಪ್ರಕಾಶ್, 22. ಶಶಿಧರ್ ಶೆಟ್ಟಿ, 23. ದುರ್ಗವ್ವ ಸ್ಪರ್ಧೆ ಬಯಸಿದರೆ.
ಜೆಡಿಎಸ್ ಪಕ್ಷದಿಂದ 10ನೇ ವಾರ್ಡ್‌ನಲ್ಲಿ ಸಿಯುಎಂ ಕೊಟ್ರಯ್ಯ, 13.ನಬಿಸಾಬ್, 16.ಡಿ. ಅಬೂಬಕರ್, 17.ಎಚ್ ಅಬ್ದುಲ್ ರಹಿಮಾನ್ ಹಾಗೂ 23. ಬಿ ಕಮಲವ್ವ ಸ್ಪರ್ಧೆ ಬಯಸಿದ್ದಾರೆ. ಇನ್ನೂ ಪಕ್ಷೇತರರಾಗಿ 8ನೇ ವಾರ್ಡ್‌ನಿಂದ ಎಂ. ಸುಜಾತಾ, 10.ಕೊಳಚಿ ರುದ್ರಪ್ಪ, 13.ಮಹ್ಮದ್ ರಫಿ, 14.ಶಬಿನಾ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.
ಪುರಸಭೆಗೆ ಚುನಾವಣೆಗೆ ಸ್ಪರ್ಧೆ ಬಯಿಸಿ ನಾಮಪತ್ರ ಸಲ್ಲಿಸಿದ್ದ ಅಕ್ಕಮ್ಮ, ಹಾಲಮ್ಮ, ಕೆ. ಸವಿತಾ, ಆಶಾಬಿ, ರಾಜೇಶ್ವರಿ, ಸಿ. ಗೌರಮ್ಮ, ರಮಿಜಾ ಬಿ, ಜಮೀರುದ್ದಿನ್ ಮರ್ದಾನ್‌ಸಾಬ್, ಎಸ್.ಶಂಭುನಾಥ, ಫೈಜು ಲಕ್ಷ್ಮಿ ಮಹಾಲಕ್ಮಿ ಬಾರಿಕರ ನಾಗರಾಜ್, ಮಹಾದೇವ ಹಕ್ಕಂಡಿ, ವೀರಣ್ಣ ಚಕ್ರಶಾಲಿ, ದೀಪದ ಕೃಷ್ಣ, ಟಿ. ಮಹಾಂತೇಶ್ ನಾಮಪತ್ರ ಹಿಂಪಡೆದರು.
Advertisement
ಹಡಗಲಿ ಪುರಸಭೆಯಲ್ಲಿ ಒಟ್ಟು 22 ವಾರ್ಡ್‌ಗಳಿದ್ದು 54 ಅಭ್ಯರ್ಥಿಗಳು ಸ್ಪರ್ಧೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ 1ನೇ ವಾರ್ಡ್‌ಗೆ ಜ್ಯೋತಿ ಮಲ್ಲಣ್ಣ, 2.ಟಿ ಸೌಮ್ಯ, 3. ಜ್ಯೋತಿ ಎಚ್. 4. ಅಟವಾಳಗಿ ಲೀಲಾಪ್ರಕಾಶ, 5. ಸ್ವಾಮಿ ಹೊಳಗುಂದಿ, 6. ಎಸ್.ಮಲ್ಲಿಕಾರ್ಜುನ, 7.ಲತಾ ಎಚ್, 8. ಬಸೆಟ್ಟಿ ಜಯಲಕ್ಮ್ಮಿ,, 9. ಸೊಪ್ಪಿನ ಮಂಜುನಾಥ, 10. ಕೆ. ಪತ್ರೇಶ್, 11.ಲಕ್ಷ್ಮಿ ಭಂಡಾರಿ, 12. ಚಂದ್ರನಾಯ್ಕ, 13. ಎಸ್. ಶಫಿಉಲ್ಲಾ, 14. ಜಮಲಾಬಿ ಗಂಟಿ, 15. ವಾರದ ಮಹ್ಮದ್ ಗೌಸ್ 16. ಅರುಣಿ ಮಹ್ಮದ್ ರಫಿ, 17. ಕಲ್ಕೇರಿ ಮಹ್ಮದ್ ರಫಿ, 18. ನಿರ್ಮಲ, 19. ಐಗೊಳ್ ಸುರೇಶ್, 20. ವಿಶಾಲಾಕ್ಷಿ, 21. ಹನುಮಂತಪ್ಪ, 22. ಎಸ್. ತಿಮ್ಮಪ್ಪ. 23. ಎಂಟಮನಿ ಸರೋಜ,
Related Articles
Advertisement
ಹಡಗಲಿ ಪುರಸಭೆ ಕಣದಲ್ಲಿ 54 ಅಭ್ಯರ್ಥಿಗಳು:
ಸಂಡೂರುಪುರಸಭೆಯ ಚುನಾವಣಾ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳು ಉಳಿದಿದ್ದು, 12 ಅಭ್ಯರ್ಥಿಗಳು ಹಿಂಪಡೆದರೆ 1 ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ತೇನ್ ಸಿಂಗ್ ನಾಯ್ಕ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಮತ್ತು ಪುರಸಭೆಯ ಕಚೇರಿಯಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, 9 ಪಕ್ಷೇತರ ಅಭ್ಯರ್ಥಿಗಳು, 1 ಬಿಎಸ್‌ಪಿ ಮತ್ತು 23 ಕಾಂಗ್ರೆಸ್ 23 ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಸಲ್ಲಿಸಿದವರು 69 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 12 ಅಭ್ಯರ್ಥಿಗಳು ಹಿಂಪಡೆದು 1 ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಿದೆ. ಕಣದಲ್ಲಿ ಉಳಿದ ಪಕ್ಷೇತರ ಅಭ್ಯರ್ಥಿಗಳು 1ನೇ ವಾರ್ಡ್‌ನಲ್ಲಿ ರುಕ್ಸಾನಾ.ಡಿ., 9ನೇ ವಾರ್ಡ್ ನಬಿಸಾಬ್.ಎಂ., 11.ಸಂತೋಷ್‌ಕುಮಾರ್ ಜೆ., ಎ.ಜೆ. ಶ್ರೀಶೈಲ, 13. ಮುನೀರ್ ಅಹ್ಮದ್, ಟಿ.ರವಿ, 16. ಶಹಿನಾಬೀ, 18.ಸುಧಾಕರ.ಪಿ., 21. ತಿಮ್ಮಪ್ಪ, 1 ಬಿಎಸ್‌ಪಿ ಪಕ್ಷದ ಅಭ್ಯರ್ಥಿ 13. ಸ್ಪರ್ಧಿಸಿದ್ದಾರೆ. ಹಿಂಪಡೆದವರು: 3ನೇ ವಾರ್ಡ್ ಕೃಷ್ಣಮೂರ್ತಿ ಎಸ್.ಎಂ, ನೂರ್‌ಅಹ್ಮದ್, 6. ಪಾರ್ವತಿ , ಎಚ್.ಎಂ. ರೋಹಿಣಿ, 11.ಎ.ನಿರಂಜನ್, 13. ಮಹ್ಮದ್ ಮುಕ್ತಿಯಾರ್, ರಾಜಾವಲಿ, 14. ಸ್ವಾತಿ, 16. ಮಹಬುನ್ನೀ ಎಂ., ಶಿಲ್ಪ ಅರುಣ್ ಎಸ್. ಪೋಳ್, ಶೇಕನ್‌ಬೀ, 17ನೇ ವಾರ್ಡ್ ಶಕುಂತಲಾ ಇಂದು ತಮ್ಮ ನಾಮಪತ್ರ ಹಿಂಪಡೆದುಕೊಂಡರು. ಇದೇ ಸಂದರ್ಭದಲ್ಲಿ ತೇನ್ ಸಿಂಗ್ ನಾಯಕ ಮಾತನಾಡಿ, ಅಭ್ಯರ್ಥಿಗಳು ತಾವು ತಿಳಿಸಿದ ಗುರುತುಗಳು, ಅರ್ಜಿ ಪರಿಶೀಲಿಸಲಾಗಿದೆ. ಕೆಲವರು ಕೊಟ್ಟ ಫೋಟೋಗಳು ಸರಿಯಾಗಿರದ ಕಾರಣ ಮೇ 21ರ ಬೆಳಗ್ಗೆ 11 ಗಂಟೆಯವರೆಗೆ ಬದಲಿ ಫೋಟೋ ಕೊಡಲು ಅವಕಾಶವಿದ್ದು, ತಕ್ಷಣ ತಂದು ಕೊಡಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ನಿಮ್ಮ ಹೆಸರು ಬದಲಿಸಲು ಸಾಧ್ಯವಿಲ್ಲವೆಂದು, ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ನೀಡಿದರು. ಅಲ್ಲದೆ ಈಗಾಗಲೇ ರಾಷ್ಟ್ರೀಯ ಪಕ್ಷಗಳು ಪಡೆದ, ಪ್ರಾದೇಶಿಕ ಪಕ್ಷಗಳು ಪಡೆದ ಚಿಹ್ನೆಗಳನ್ನು ನೀಡಲು ಸಾಧ್ಯವಿಲ್ಲ, ಅವುಗಳನ್ನು ಸೂಚಿಸಬೇಡಿ ಎಂದು ತಿಳಿಸಿದರು.
ವೆಚ್ಚ ವೀಕ್ಷಕರ ನೇಮಕ
ಬಳ್ಳಾರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2019ರ ಪ್ರಯುಕ್ತ ರಾಜ್ಯ ಚುನಾವಣೆ ಆಯೋಗವು ಚುನಾವಣೆಯನ್ನು ಶಾಂತಿಯುತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚದ ವೀಕ್ಷಕರನ್ನು ನೇಮಿಸಿ ಮೇಲ್ವಿಚಾರಣೆ, ನಿಯಂತ್ರಣ ಹಾಗೂ ಮೇಲುಸ್ತುವಾರಿ ವಹಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹಡಗಲಿ ಮತ್ತು ಹರಪನಹಳ್ಳಿ ಪುರಸಭೆ ಸಾಮಾನ್ಯ ವೀಕ್ಷಕರಾಗಿ ಬೆಂಗಳೂರಿನ ಸಮಗ್ರ ಶಿಕ್ಷಣ ಅಭಿಯಾನದ ಅಡಿಷನಲ್ ಡೈರೆಕ್ಟರ್ ರಾಜು ಮೊಗವೀರ.ಕೆ (9482618719) ಮತ್ತು ಚುನಾವಣಾ ವೆಚ್ಚದ ವೀಕ್ಷಕರಾಗಿ ಚಿತ್ರದುರ್ಗ ಜಿಲ್ಲೆಯ ವಿಶೇಶ್ವರಯ್ಯ ಜಲನಿಗಮ ನಿಯಮಿತದ ಮುಖ್ಯ ಲೆಕ್ಕಾಧಿಕಾರಿ ಟಿ.ಕೆ.ಲಕ್ಷ್ಮಿ (7259366661) ಅವರನ್ನು ನೇಮಿಸಲಾಗಿದೆ. ಸಂಡೂರು ಪುರಸಭೆ ಹಾಗೂ ಹೊಸಪೇಟೆ ನಗರಸಭೆ ಸಾಮಾನ್ಯ ವೀಕ್ಷಕರಾಗಿ ಬೆಳಗಾವಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕರಾದ ವಿಜಯಕುಮಾರ ಹೊಸನಕೇರಿ (9483285072) ಮತ್ತು ಚುನಾವಣಾ ವೆಚ್ಚದ ವೀಕ್ಷಕರಾಗಿ ಕೊಪ್ಪಳ ಜಿಲ್ಲೆಯ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಹಿರಿಯ ಉಪ ನಿರ್ದೇಶಕರಾದ ಅಮೀನಸಾಬ (9742699562)ಗೆ ಕರೆ ಮಾಡಿ ಚುನಾವಣಾ ಸಂಬಂಧಿಸಿದ ಮಾಹಿತಿ ಅಥವಾ ದೂರು ನೀಡಬಹುದು ಎಂದು ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪ:
ಹರಪನಹಳ್ಳಿ: ಸ್ಥಳೀಯ ಪುರಸಭೆ ಚುನಾವಣೆ ಸಂಬಂಧ ವ್ಯಾಪಕವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ ಎಂದು ಸಿಪಿಐ(ಎಂ.ಎಲ್) ಲಿಬರೇಷನ್ ಪಕ್ಷ ಆರೋಪಿಸಿದೆ. ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಇಟ್ಟುಕೊಂಡು ಮಿಲಿó ಹೋಟೆಲ್, ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸರಬರಾಜು ನಡೆಯುತ್ತಿದ್ದು, ಈ ಸಂಬಂಧ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸದ ಚುನಾವಣಾಧಿಕಾರಿಗಳು, ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪಕ್ಷದ ದಾವಣಗೆರೆ-ಬಳ್ಳಾರಿ ಸಂಯುಕ್ತ ಜಿಲ್ಲಾ ಕಾರ್ಯದರ್ಶಿ ಇದ್ಲಿ ರಾಮಪ್ಪ ಒತ್ತಾಯಿಸಿದ್ದಾರೆ. ಕೂಡಲೇ ರಾಜ್ಯ ಚುನಾವಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಎಸಿ ಕಚೇರಿ ಹಾಗೂ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹರಪನಹಳ್ಳಿ ಪುರಸಭೆ 11 ನಾಮಪತ್ರ ವಾಪಸ್:
ಹರಪನಹಳ್ಳಿ ಸ್ಥಳೀಯ ಪುರಸಭೆ ಚುನಾವಣೆಗೆ ಒಟ್ಟು 27 ವಾರ್ಡ್‌ಗಳಿಂದ ಸಲ್ಲಿಕೆಯಾಗಿದ್ದ ಒಟ್ಟು 86 ನಾಮಪತ್ರದಲ್ಲಿ 11 ಜನ ಪಕ್ಷೇತರರರು ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ. ಅಂತಿಮವಾಗಿ ಕಾಂಗ್ರೆಸ್-27, ಬಿಜೆಪಿ-27, ಜೆಡಿಎಸ್-9, ಪಕ್ಷೇತರರು-12 ಸೇರಿ ಒಟ್ಟು 75 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 9ನೇ ವಾರ್ಡ್ ಉಪ್ಪಾಗೇರಿಯ ಪಕ್ಷೇತರ ಅಭ್ಯರ್ಥಿ ಐ.ಎಸ್.ನವೀನ್, ಎಂ.ರುದ್ರಪ್ಪ, 10ನೇ ವಾರ್ಡ್ ಚಿತ್ತಾರಗೇರಿಯ ಪಕ್ಷೇತರ ಅಭ್ಯರ್ಥಿ ದೊಡ್ಡೇಶ್, ಎನ್.ಎಂ.ವಹಾಬ್, ಎಚ್.ಮಹ್ಮದ್ ಹುಸೇನ್, 13ನೇ ವಾರ್ಡ್ ಹಿಪ್ಪಿತೋಟದ ಪಕ್ಷೇತರ ಅಭ್ಯರ್ಥಿ ಬಿ.ಕೆ.ಇಸ್ಮಾಯಿಲ್, 14ನೇ ವಾರ್ಡ್ ತೆಲುಗರ ಓಣಿ ಪಕ್ಷೇತರ ಅಭ್ಯರ್ಥಿ ಟಿ.ಅಹ್ಮದ್ ಹುಸೇನ್, 7ನೇ ವಾರ್ಡ್ ಸುಣ್ಣಗಾರಗೇರಿ ಪಕ್ಷೇತರ ಅಭ್ಯರ್ಥಿ ಎಂ.ಡಿ.ಜಾಕೀರ್, ಎಲ್.ನವರಂಗ್, ಡಿ.ನಾರಾಯಣಪ್ಪ, 26ನೇ ವಾರ್ಡ್ ವಾಲ್ಮೀಕಿ ನಗರ ಪಕ್ಷೇತರ ಆರ್.ದೇವಿರಮ್ಮ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.