Advertisement

ಗಿಬ್ಬನ್‌ ಕೋತಿ ಮರಿ ಹಾಕಿದ್ದು ಹೇಗೆ? ಕಾರಣ ಹೀಗೆ ಬಯಲಾಯ್ತು….

07:35 PM Feb 14, 2023 | Team Udayavani |

ಟೋಕಿಯೋ:ಜಪಾನಿನ ನಾಗಸಾಕಿಯ ಕುಜುಕುಜಿಮಾ ಮೃಗಾಲಯದಲ್ಲಿ ಪ್ರತ್ಯೇಕ ಬೋನ್‌ನಲ್ಲಿದ್ದರೂ, ಗರ್ಭಿಣಿಯಾಗಿ ಆಡಳಿತ ಸಿಬ್ಬಂದಿಗೆ ಅಚ್ಚರಿ ಮೂಡಿಸಿದ್ದ ಗಿಬ್ಬನ್‌ ತಳಿಯ ಕೋತಿ ಆರೋಗ್ಯಯುತವಾದ ಮರಿಗೆ ಜನ್ಮ ನೀಡಿದೆ. ಇದೀಗ ಅದಕ್ಕೆ ಕಾರಣ ಯಾರು ಎಂಬ ಅಂಶವನ್ನು ಡಿಎನ್‌ಎ ಪರೀಕ್ಷೆ ಮೂಲಕ ಮೃಗಾಲಯದ ಆಡಳಿತ ಮಂಡಳಿ ಖಚಿತಪಡಿಸಿದೆ.

Advertisement

12 ವರ್ಷದ ಮೋಮೋ ಎಂಬ ಹೆಸರಿನ ಹೆಣ್ಣು ಕೋತಿ ಏಕಾಂಗಿಯಾಗಿತ್ತು. ಅದಕ್ಕೆ ಅಲ್ಲಿನ ಸಿಬ್ಬಂದಿ ಗಂಡು ಕೋತಿಯ ಸಾಮೀಪ್ಯ ನೀಡಿರಲಿಲ್ಲ. ಹೀಗಾಗಿ, ಹೆಣ್ಣು ಕೋತಿ ಮರಿಗೆ ಜನ್ಮ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿತ್ತು.

ಪಕ್ಕದ ಬೋನಿನಲ್ಲಿ ಇದ್ದ 34 ವರ್ಷದ ಗಿಬ್ಬನ್‌ ತಳಿಯ ಗಂಡು ಕೋತಿಯೇ ಅದಕ್ಕೆ ಕಾರಣ. ಎರಡು ಬೋನುಗಳ ನಡುವೆ ಅಂತರ ಕಡಿಮೆ ಇದ್ದ ಕಾರಣ, ಎರಡೂ ಕೋತಿಗಳು ಸಹಜವಾಗಿಯೇ ಸಾಮಿಪ್ಯಕ್ಕೆ ಬಂದಿವೆ. ಹೀಗಾಗಿ, ಆರೋಗ್ಯಯುತ ಮರಿ ಜನಿಸಿದೆ ಎಂಬ ಅಂಶ ದೃಢಪಟ್ಟಿದೆ.

ಇನ್ನು ಮರಿ ಕೋತಿ 2 ಕೆಜಿ ತೂಕವಿದ್ದು, ಆರೋಗ್ಯಯುತವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next